Webdunia - Bharat's app for daily news and videos

Install App

ಒಲಿಂಪಿಕ್ಸ್; ಯೂರೋಪ್‌ಗೆ ಶಿಫ್ಟ್ ಆಗಲಿರುವ ವಿಜೆಂದರ್

Webdunia
ಮಂಗಳವಾರ, 18 ಜನವರಿ 2011 (15:54 IST)
ವಿಶ್ವ ನಂ.1 ಬಾಕ್ಸಿಂಗ್ ಪಟು ಭಾರತದ ವಿಜೇಂದರ್ ಸಿಂಗ್ ಅವರು ಹೆಚ್ಚಿನ ತರಬೇತಿಗಾಗಿ ಯೂರೋಪ್‌ಗೆ ಶಿಫ್ಟ್ ಮಾಡಿಕೊಳ್ಳುವ ಯೋಜನೆ ಇರಿಸಿಕೊಂಡಿದ್ದಾರೆ.

2012 ರ ಒಲಿಂಪಿಕ್ಸ್ ಲಂಡನ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ವಿಜೇಂದರ್ ತಮ್ಮ ತಲಹದಿಯನ್ನು ಜರ್ಮನಿ ಅಥವಾ ಯುಕೆಗೆ ಸ್ಥಳಾಂತರ ಮಾಡಲು ಬಯಸಿದ್ದಾರೆ.

ಈ ಬಗ್ಗೆ ಸದ್ಯದಲ್ಲೇ ಉಚಿತವಾದ ತಿರ್ಮಾನ ಕೈಗೊಳ್ಳಲಿದ್ದೇನೆ ಎಂದು ಹರಿಯಾಣ ಮೂಲದ ಬಾಕ್ಸರ್ ನುಡಿದರು. ರಾಂಚಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟ ಸಂದರ್ಭದಲ್ಲಿ ಮಾತನಾಡಿದ ಅವರು ಇದು ಯುವ ಕ್ರೀಡಾಪಟುಗಳಿಗೆ ಉತ್ತಮ ಅವಕಾಶವಾಗಿರಲಿದೆ ಎಂದರು.

ರಾಷ್ಟ್ರೀಯ ಗೇಮ್ಸ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ನನ್ನ ಪಾಲಿಗೆ ಪ್ರಮುಖ ಕೂಟಗಳು. ಆದರೆ ರಾಷ್ಟ್ರೀಯ ಗೇಮ್ಸ್‌ನಲ್ಲಿ ಭಾಗವಹಿಸುವುದರ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಯಾಕೆಂದರೆ ಯುವ ಕ್ರೀಡಾಳುಗಳಿಗೆ ಉತ್ತಮ ಅವಕಾಶ ಒದಗಿಸುವುದು ನನ್ನ ಇರಾದೆಯಾಗಿದೆ ಎಂದವರು ನುಡಿದರು. 34ನೇ ರಾಷ್ಟ್ರೀಯ ಗೇಮ್ಸ್ ಫೆಬ್ರವರಿ 12ರಿಂದ 26ರ ವರೆಗೆ ನಡೆಯಲಿದೆ.

ಅದೇ ಹೊತ್ತಿಗೆ ಸುರಂಜಯ್ ಸಿಂಗ್ ಮತ್ತು ಜೈ ಭಾಗ್‌ವಾನ್ ಅವರಂತಹ ಯುವ ಆಟಗಾರರ ಉತ್ತಮ ಪ್ರದರ್ಶನವು ನನ್ನ ಮತ್ತು ಅಖಿಲ್ ಕುಮಾರ್ ಅವರಂತಹ ಹಿರಿಯ ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದವರು ಹೇಳಿದರು. ನಾನು ಪ್ರತಿ ಬಾರಿಯೂ ಅಗ್ರಪಟ್ಟದಲ್ಲಿರಲಾರೆ. ಹೀಗಾಗಿ ನನ್ನ ಸ್ಥಾನವನ್ನು ಯಾರಾದರೂ ಕಬಳಿಸಲೇಬೇಕು ಎಂದರು ವಿಜೆಂದರ್.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments