ಇಲ್ಲಿ ನಡೆದ ಸಿಡ್ನಿ ಇಂಟರ್ನ್ಯಾಷನಲ್ ಡಬ್ಲ್ಯುಟಿಎ ಚಾಂಪಿಯನ್ಶಿಪ್ನಲ್ಲಿ ಎರಡು ಬಾರಿಯ ಚಾಂಪಿಯನ್ ಕಿಮ್ ಕ್ಲಿಸ್ಟರ್ಸ್ ಆಘಾತ ಅನುಭವಿಸಿದ್ದು, ಚೀನಾದ ಲಿ ನಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ಲಿಸ್ಟರ್ಸ್ ಅವರನ್ನು 7-6 (7/3), 6-3ರ ಕಠಿಣ ಅಂತರದಲ್ಲಿ ಮಣಿಸಿದ ಲಿ, ತಮ್ಮ ಕ್ಯಾರಿಯರ್ನ ನಾಲ್ಕನೇ ಡಬ್ಲ್ಯುಟಿಎ ಪ್ರಶಸ್ತಿ ಬಗಲಿಗೇರಿಸಿಕೊಂಡರು.
ಎಂಟನೇ ಶ್ರೇಯಾಕಿಂತ ಲಿ ಮೊದಲ ಸುತ್ತಿನಲ್ಲಿ 0-5ರ ಹಿನ್ನೆಡೆ ಪಡೆದಿದ್ದರೂ ಅಮೋಘ ಪ್ರದರ್ಶನ ನೀಡುವ ಪಂದ್ಯವನ್ನು ವಶಪಡಿಸಿಕೊಂಡರು.