Webdunia - Bharat's app for daily news and videos

Install App

ಚೆನ್ನೈ ನಮ್ಮ ಫೆವರೀಟ್ ತಾಣ: ಲಿಯಾಂಡರ್ ಪೇಸ್

Webdunia
ಸೋಮವಾರ, 10 ಜನವರಿ 2011 (16:30 IST)
ಇಲ್ಲಿ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಮೆಂಟ್‌ನ ಡಬಲ್ಸ್ ಕಿರೀಟವನ್ನು ಬಗಲಿಗೇರಿಸಿದ ನಂತರ ಪ್ರತಿಕ್ರಿಯೆ ನೀಡಿರುವ ಲಿಯಾಂಡರ್ ಪೇಸ್, ಚೆನ್ನೈ ನಮ್ಮ ಫೆವರೀಟ್ ತಾಣ ಎಂದಿದ್ದಾರೆ.

ಅಭಿಮಾನಿಗಳ ಬೆಂಬಲವಂತೂ ಅದ್ಭುತವಾಗಿತ್ತು. ಇದು ನಮ್ಮ ಗೆಲುವಿಗೆ ನೆರವಾಗಿತ್ತು. ನಾವಿಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದೇವೆ ಎಂದು ಐದನೇ ಬಾರಿಗೆ ಇಲ್ಲಿ ಜಯಗಳಿಸಿದ ಪೇಸ್ ನುಡಿದರು.

ಮತ್ತೆ ಜತೆಯಾಗಿ ಆಡಲು ನಿರ್ಧರಿಸಿದ್ದ ಪೇಸ್-ಭೂಪತಿ ಜೋಡಿ ಫೈನಲ್‌ಲ್ಲಿ ಹಾಲೆಂಡ್-ಅಮೆರಿಕಾ ಜೋಡಿ ರಾಬಿನ್ ಹಸ್ಸೆ ಮತ್ತು ಡೇವಿಡ್ ಮಾರ್ಟಿನ್‌ರನ್ನು 6-2, 6-7 (3), 10-7ರ ಕಠಿಣ ಅಂತರದಲ್ಲಿ ಮಣಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿದ್ದರು.

ಇದು ತಂಡದ ಸಾಧನೆ. ಒಂದು ಹಂತದಲ್ಲಿ ಎದುರಾಳಿಗಳು ಚೆನ್ನಾಗಿ ಆಡುತ್ತಿದ್ದರು. ಆದರೆ ನಾವು ಒಬ್ಬರನೊಬ್ಬರು ನೆರವಾಗುವ ಮೂಲಕ ತಿರುಗೇಟು ನೀಡುವಲ್ಲಿ ಯಶಸ್ವಿಯಾದೆವು ಎಂದರು.

ಮೊದಲ ಸೆಟ್ ಸುಲಭವಾಗಿ ವಶಪಡಿಸಿಕೊಂಡಿದ್ದರೂ ಭಾರತೀಯ ಎಕ್ಸ್‌ಪ್ರೆಸ್‌ಗೆ ದ್ವಿತೀಯ ಸುತ್ತಿನಲ್ಲಿ ರಾಬಿನ್-ಹಸ್ಸೆ ಜೋಡಿ ತಿರುಗೇಟು ನೀಡಿದ್ದರು. ಇದರಿಂದಾಗಿ ಪಂದ್ಯ ನಿರ್ಣಾಯಕ ಟ್ರೈ-ಬ್ರೇಕರ್ ತನಕ ಸಾಗುವಂತಾಗಿತ್ತು.

ಟ್ರೈಬ್ರೇಕರ್‌ನಲ್ಲಿ ನಮ್ಮ ಟೆನಿಸ್‌ನ ಗುಣಮಟ್ಟ ನಿಜಕ್ಕೂ ಹೆಚ್ಚಿತ್ತು. ಕೆಲವೊಂದು ಬಾರಿ ಪರಿಸ್ಥಿತಿ ಕಳೆದುಕೊಂಡಿದ್ದರೂ ತಿರುಗಿ ಬೀಳುವಲ್ಲಿ ಯಶಸ್ವಿಯಾದೆವು ಎಂದವರು ಸೇರಿಸಿದರು.

ಮುಂಬರುವ ಆಸ್ಟ್ರೇಲಿಯನ್ ಓಪನ್‌ನಲ್ಲೂ ಲೀ-ಹೇಶ್ ಜೋಡಿ ಜತೆಯಾಗಿ ಆಡಲಿದ್ದಾರೆ. ಈ ಪ್ರತಿಷ್ಠಿತ ಟೂರ್ನಮೆಂಟ್ ಜನವರಿ 17ರಿಂದ ಆರಂಭವಾಗಲಿದೆ.

ಮತ್ತೊಂದೆಡೆ ಮುಂಬರುವ ಗ್ರಾಂಡ್ ಸ್ಲಾಮ್ ಟೂರ್ನಿನಲ್ಲಿ ಉತ್ತಮ ಪ್ರದರ್ಶನ ಪ್ರದರ್ಶನ ನೀಡುವ ವಿಶ್ವಾಸವನ್ನು ಮಹೇಶ್ ಭೂಪತಿ ವ್ಯಕ್ತಪಡಿಸಿದ್ದಾರೆ. ನಾವು ಆಡಿದ ಎಲ್ಲ ನಾಲ್ಕು ಪಂದ್ಯಗಳಳನ್ನು ಕಷ್ಟಪಟ್ಟು ಗೆದ್ದಿದ್ದೇವೆ. ನಮ್ಮಿಂದ ಉತ್ತಮ ಆಟ ಹೊರಬಂದಿಲ್ಲ. ಅನೇಕ ತಪ್ಪುಗಳನ್ನು ಎಸಗಿದ್ದೇವೆ. ನಾವೀಗಲೂ ಪರಿಪೂರ್ಣರಾಗಿಲ್ಲ. ಹೀಗಾಗಿ ನಾನು ಮುಂಬೈಗೆ ಹೋಗುತ್ತಿಲ್ಲ. ಕಠಿಣ ಅಭ್ಯಾಸದತ್ತ ಗಮನ ಹರಿಸುತ್ತೇನೆ ಎಂದವರು ಹೇಳಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments