Select Your Language

Notifications

webdunia
webdunia
webdunia
webdunia

ರಾಯಲ್ ಟ್ರೋಫಿಗೆ ಜೀವ್ ಮಿಲ್ಕಾ ಸಿಂಗ್ ಗೈರು ಸಾಧ್ಯತೆ

ರಾಯಲ್ ಟ್ರೋಫಿಗೆ ಜೀವ್ ಮಿಲ್ಕಾ ಸಿಂಗ್ ಗೈರು ಸಾಧ್ಯತೆ
ನವದೆಹಲಿ , ಶನಿವಾರ, 11 ಡಿಸೆಂಬರ್ 2010 (15:28 IST)
ರಾಯಲ್ ಟ್ರೋಫಿ ಗಾಲ್ಫ್ ಪಂದ್ಯಾವಳಿಗೆ ಏಷ್ಯಾ ತಂಡವನ್ನು ಪ್ರತಿನಿಧಿಸುತ್ತಿರುವ ಜೀವ್ ಮಿಲ್ಕಾ ಸಿಂಗ್,ವೈದ್ಯರ ಸಲಹೆಗಳನ್ನು ಪಡೆದ ನಂತರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ಏಷ್ಯಾ ಗಾಲ್ಫ್ ತಂಡದ ನಾಯಕರಾದ ನಾವೊಮಿಚಿ ಜೊಯ್ ಒಝಾಕಿ, ಥೈಲೆಂಡ್‌ನ ಹುವಾ ಹಿನ್ ನಗರದಲ್ಲಿ ಯುರೋಪ್ ವಿರುದ್ಧ ಜನೆವರಿ 7 ರಿಂದ 9 ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಜೀವ್ ಮಿಲ್ಕಾ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ.

ಭಾರತದ ಖ್ಯಾತ ಗಾಲ್ಫ್ ಆಟಗಾರ ಜೀವ್, ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ. ಬೆನ್ನು ನೋವಿನಿಂದ ಬಳಳುತ್ತಿರುವುದರಿಂದ,ನಾನು ಪಂದ್ಯಾವಳಿಯಲ್ಲಿ ಭಾಗವಹಿಸುವುದು ವೈದ್ಯರ ನಿರ್ಧಾರದ ಮೇಲೆ ಅವಲಂಬಿಸಿದೆ ಎಂದು ತಿಳಿಸಿದ್ದಾರೆ.

ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುತ್ತೇನೆ.ಆದರೆ, ಬೆನ್ನು ನೋವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಗಳನ್ನು ಪಡೆಯುವುದಾಗಿ ಜೀವ್ ಹೇಳಿದ್ದಾರೆ.

Share this Story:

Follow Webdunia kannada