ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತದ 12 ವರ್ಷಗಳ ಚಿನ್ನದ ಪದಕದ ನಿರೀಕ್ಷೆಯನ್ನು ಸಾಕಾರಗೊಳಿಸಿದ ವಿಕಾಸ್ ಕೃಷ್ಣನ್, ಪಂದ್ಯಾವಳಿಯಲ್ಲಿ ಚಿನ್ನದ ಪದಕ ನಿರೀಕ್ಷಿಸಿರಲಿಲ್ಲ. ಆದರೆ, ಚಿನ್ನದ ಪದಕ ಜೊರೆತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಹರಿಯಾಣಾದ 18 ವರ್ಷ ವಯಸ್ಸಿನ ಬಾಕ್ಸರ್, 60 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಚೀನಾದ ಬಾಕ್ಸರ್ ಕಿಂಗ್ ಹು ವಿರುದ್ಧ ಜಯಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ಮತ್ತೊಂದು ಪಂದ್ಯದಲ್ಲಿ ವಿಜೇಂದರ್ ಸಿಂಗ್ ಎರಡನೇ ಚಿನ್ನದ ಪದಕ ಪಡೆದರು.
ಏಷ್ಯನ್ ಗೇಮ್ಸ್ನಂತಹ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ಪಡೆಯುವುದು ತುಂಬಾ ಕಠಿಣ. ಆದರೆ, ನನಗೆ ಪದಕ ಗೆಲ್ಲುವ ಆತ್ಮವಿಶ್ವಾಸವಿತ್ತು. ಚಿನ್ನದ ಪದಕ ಗೆಲ್ಲುವ ವಿಶ್ವಾಸವಿರಲಿಲ್ಲವೆಂದು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಕಿರಿಯ ವಯಸ್ಸಿನ ಬಾಕ್ಸರ್ನಾಗಿದ್ದೆ. ಒಂದು ವೇಳೆ ಪದಕ ಗೆದ್ದಲ್ಲಿ ಉತ್ತಮ. ಇಲ್ಲವಾದಲ್ಲಿ ನಾನು ಅನುನಭವಿಯಾಗಿಯಾಗಿದ್ದರಿಂದ, ಯಾರು ಟೀಕಿಸುವುದಿಲ್ಲ ಎನ್ನುವ ವಿಶ್ವಾಸವಿತ್ತು ಎಂದು ಕೃಷ್ಣನ್ ಹೇಳಿದ್ದಾರೆ.