Select Your Language

Notifications

webdunia
webdunia
webdunia
webdunia

ಕಾಮನ್‌ವೆಲ್ತ್ ಕುಸ್ತಿ:ಭಾರತಕ್ಕೆ 14ನೇ ಚಿನ್ನದ ಪದಕ

ಕಾಮನ್‌ವೆಲ್ತ್ ಕುಸ್ತಿ:ಭಾರತಕ್ಕೆ 14ನೇ ಚಿನ್ನದ ಪದಕ
ನವದೆಹಲಿ , ಗುರುವಾರ, 7 ಅಕ್ಟೋಬರ್ 2010 (18:18 IST)
ಕಾಮನ್‌ವೆಲ್ತ್ ಗೇಮ್ಸ್ 55ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ, ಭಾರತದ ಕುಸ್ತಿಪಟು ಗೀತಾ ಎದುರಾಳಿಯನ್ನು ಸೋಲಿಸಿ ಚಿನ್ನದ ಪದಕ ಪಡೆದಿದ್ದಾರೆ.

ಭಾರತದ ಮಹಿಳಾ ಕುಸ್ತಿಪಟು ಗೀತಾ, ಫೈನಲ್ ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾದ ಎಮಿಲಿ ಬೆನ್‌ಸ್ಟೆಡ್ ವಿರುದ್ಧ ಜಯಗಳಿಸಿ ಚಿನ್ನದ ಪದಕ ಪಡೆದಿದ್ದಾರೆ. ನೈಜಿರಿಯಾದ ಲೊವಿನಾ ಎಡ್ವರ್ಡ್ ಕಂಚಿನ ಪದಕ ಪಡೆದಿದ್ಗಾರೆ.

ಭಾರತದ ಶೂಟರ್‌ಗಳಾದ ಒಂಕಾರ್ ಸಿಂಗ್ ಮತ್ತು ಗುರುಪ್ರೀತ್ ಸಿಂಗ್ 10 ಮೀಟರ್ ಏರ್‌ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಂತರ ರೊಂಜನ್ ಸೋಧಿ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಪದಕ ಪಟ್ಟಿಯನ್ನು ಹೆಚ್ಚಿಸುವಲ್ಲಿ ನೆರವಾಗಿದ್ದಾರೆ.

ಭಾರತದ ಅರ್ಚರಿ ತಂಡ ಕಂಪೌಂಡ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವಲ್ಲಿ ತೃಪ್ತಿಪಡಬೇಕಾಯಿತು. ಇಂಗ್ಲೆಂಡ್ ತಂಡ ಚಿನ್ನದ ಪದಕ ಗೆದ್ದು ಬೀಗಿತು.

Share this Story:

Follow Webdunia kannada