Select Your Language

Notifications

webdunia
webdunia
webdunia
webdunia

ಫ್ರೆಂಚ್ ಓಪನ್ ನನಗೆ ತವರಿನಂತೆ:ಜಸ್ಟಿನ್ ಹೆನಿನ್

ಫ್ರೆಂಚ್ ಓಪನ್ ನನಗೆ ತವರಿನಂತೆ:ಜಸ್ಟಿನ್ ಹೆನಿನ್
ಪ್ಯಾರಿಸ್ , ಶನಿವಾರ, 22 ಮೇ 2010 (13:24 IST)
ಫ್ರೆಂಚ್ ಓಪನ್ ಪಂದ್ಯಾವಳಿ ತುಂಬಾ ಇಷ್ಟವಾಗಿದ್ದರಿಂದ, ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತದೆ ಎಂದು ಜಸ್ಟಿನ್ ಹೆನಿನ್ ಹೇಳಿದ್ದಾರೆ.

ಕಳೆದ ವರ್ಷ ನಡೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ನಾನು ಗೆಲುವು ಸಾಧಿಸಿದ್ದೆ.ಈ ಬಾರಿ ಕೂಡಾ ಅದೃಷ್ಟಶಾಲಿಯಾಗುವ ವಿಶ್ವಾಸವಿದೆ ಎಂದು ನಾಲ್ಕು ಬಾರಿ ಚಾಂಪಿಯನ್ ಹೆನಿನ್ ತಿಳಿಸಿದ್ದಾರೆ.

ಫ್ರೆಂಚ್ ಓಪನ್‌ನೊಂದಿಗೆ ತುಂಬಾ ಆತ್ಮಿಯ ಸಂಬಂಧವಿದೆ. ಹಲವಾರು ಆಟಗಾರ್ತಿಯರೊಂದಿಗೆ ಆತ್ಮಿಯ ಸಂಬಂಧವಿದೆ. ಫ್ರೆಂಚ್ ಓಪನ್ ಪಂದ್ಯಾವಳಿಯ ಮಣ್ಣಿನಂಕಣದಲ್ಲಿ ಆಡುವುದು ತುಂಬಾ ಸಂತಸ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಲ್ಜಿಯನ್ ಮೂಲದ ಆಟಗಾರ್ತಿ ಹೆನಿನ್, 20 ತಿಂಗಳ ನಿವೃತ್ತಿಯ ನಂತರ, ಜನೆವರಿ ತಿಂಗಳಲ್ಲಿ ಪಂದ್ಯಾವಳಿಗೆ ಮರಳಿದ್ದರು. ಮೂರು ವರ್ಷಗಳ ಹಿಂದೆ ಹೆನಿನ್ ಫ್ರೆಂಚ್ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

Share this Story:

Follow Webdunia kannada