Select Your Language

Notifications

webdunia
webdunia
webdunia
webdunia

ಭಾರತಕ್ಕೆ ಪ್ರಥಮ ಚಿನ್ನ ಗೆದ್ದು ಕೊಟ್ಟ ಕವಿತಾ

ಭಾರತಕ್ಕೆ ಪ್ರಥಮ ಚಿನ್ನ ಗೆದ್ದು ಕೊಟ್ಟ ಕವಿತಾ
ಚೀನಾ , ಬುಧವಾರ, 11 ನವೆಂಬರ್ 2009 (12:27 IST)
ಕವಿತಾ ರಾವತ್ ಅವರು ಮಂಗಳವಾರ ಇಲ್ಲಿ ಆರಂಭವಾದ 18ನೇ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟರು.

ಮಹಿಳೆಯರು 500ಮೀ.ಓಟದ ಸ್ಪರ್ಧೆಯಲ್ಲಿ ಕವಿತಾ ಮೂರನೇ ಸ್ಥಾನ ಪಡೆದು ಭಾರತದ ಖಾತೆಗೆ ಕಂಚಿನ ಪದಕ ಸೇರುವಂತೆ ಮಾಡಿದರು. ವೈಯಕ್ತಿಕ ಉತ್ತಮ ಸಾಧನೆ ತೋರಿದ ಅವರು 16-05-19ಸೆ.ಗಳಲ್ಲಿ ಗುರಿ ಮುಟ್ಟಿದರು. ಈ ಋತುವಿನ ಅವರ ಅತ್ಯಂತ ಉತ್ತಮ ಸಮಯವು 16.13.17ಸೆ.ಆಗಿತ್ತು. ಅದನ್ನು ಕೂಡ ಕವಿತಾ ಉತ್ತಮ ಪಡಿಸಿಕೊಂಡರು.

ಈ ಸ್ಪರ್ಧೆಯಲ್ಲಿ ಸ್ವರ್ಣ ಪದಕವನ್ನು ನಿರೀಕ್ಷೆಯಂತೆ ಆತಿಥೇಯ ಚೀನಾದ ಕ್ಸುಯ್ ಫೆಯ್ ಪಡೆದುಕೊಂಡರು. ಬೆಳ್ಳಿಯ ಪದಕವು ಬಹರೇನ್‌ನ ಚಲ್‌ಚಿಸ್ ತೆಜಿತು ದಾಬಾ ಅವರ ಪಾಲಾಯಿತು.

Share this Story:

Follow Webdunia kannada