Select Your Language

Notifications

webdunia
webdunia
webdunia
webdunia

ಫೆಡರರ್, ಸೆರೆನಾ, ಡಿಮೆಂಟಿವಾ ಗೆಲುವಿನ ಓಟ

ಫೆಡರರ್, ಸೆರೆನಾ, ಡಿಮೆಂಟಿವಾ ಗೆಲುವಿನ ಓಟ
ಲಂಡನ್ , ಶುಕ್ರವಾರ, 26 ಜೂನ್ 2009 (20:48 IST)
ಐದು ವಿಂಬಲ್ಡನ್ ಚಾಂಪಿಯನ್‌ಗಳ ಒಡೆಯ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್, ಇಲೆನಾ ಡಿಮೆಂಟಿವಾ, ಡೇನಿಯೇಲಾ ಹಂಟುಚ್ಚೋವಾ ಮುಂತಾದವರು ವಿಂಬಲ್ಡನ್ ಟೂರ್ನಮೆಂಟ್ ನಾಲ್ಕನೇ ಸುತ್ತು ತಲುಪಿದ್ದಾರೆ.

ಎರಡನೇ ಶ್ರೇಯಾಂಕಿತ ರೋಜರ್ ಫೆಡರರ್ ಜರ್ಮನಿಯ 27ನೇ ಶ್ರೇಯಾಂಕಿತ ಫಿಲಿಫ್ ಕೊಹ್ಲ್‌ಸೈರಿಬರ್‌ರನ್ನು 6-3 6-2 6-7(5) 6-1ರಿಂದ ಮಣಿಸಿದರು.

ಮತ್ತೊಂದು ಮೂರನೇ ಸುತ್ತಿನ ಪಂದ್ಯದಲ್ಲಿ 13ನೇ ಶ್ರೇಯಾಂಕಿತ ಸ್ವೀಡನ್‌ನ ರಾಬಿನ್ ಸೋದರ್ಲಿಂಗ್ ನಿಕೋಲಾಸ್ ಅಲ್ಮಾಗ್ರೋ‌ರನ್ನು 7-6(7) 6-4 6-4ರಿಂದ ಸೋಲಿಸಿದ್ದಾರೆ.

ಅಮೆರಿಕಾದ ಎರಡನೇ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್ ಇಟಲಿಯ ರಾಬರ್ಟಾ ವಿನ್ಸಿಯವರನ್ನು 6-3, 6-4ರ ನೇರ ಸೆಟ್‌ಗಳಿಂದ ಮಣಿಸುವ ಮೂಲಕ ನಾಲ್ಕನೇ ಸುತ್ತಿನಲ್ಲಿ ಡೇನಿಯೇಲಾ ಹಂಟುಚ್ಚೋವಾರೆದುರು ಮುಖಾಮುಖಿಯಾಗಿದ್ದಾರೆ. ಹಂಟುಚ್ಚೋವಾ ಮೂರನೇ ಸುತ್ತಿನಲ್ಲಿ ಜಪಾನ್‌ನ ಆಯಿ ಸುಗಿಯಾಮಾರನ್ನು 6-4, 6-3ರಿಂದ ಸೋಲಿಸಿದ್ದಾರೆ.

ರಷ್ಯಾ ಆಟಗಾರ್ತಿಯರ ನಡುವಿನ ಪಂದ್ಯವೊಂದರಲ್ಲಿ ರೆಜಿನಾ ಕುಲಿಕೋವಾರನ್ನು ನಾಲ್ಕನೇ ಶ್ರೇಯಾಂಕಿತೆ ಇಲೆನಾ ಡಿಮೆಂಟಿವಾ 6-1, 6-2ರ ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಹೋರಾಟಕ್ಕೂ ಮೊದಲು ಏಳನೇ ಶ್ರೇಯಾಂಕಿತೆ ರಷ್ಯಾದ ವೆರಾ ಝ್ವನರೇವಾ ಕಣದಿಂದ ಹಿಂದಕ್ಕೆ ಸರಿದಿರುವ ಕಾರಣ ಫ್ರಾನ್ಸ್‌ನ 26ನೇ ಶ್ರೇಯಾಂಕಿತೆ ವರ್ಜೀನಿಯೇ ರಜಾನೋ ನಾಲ್ಕನೇ ಸುತ್ತಿಗೆ ವಾಕ್ ಓವರ್ ಪಡೆದಿದ್ದಾರೆ.

Share this Story:

Follow Webdunia kannada