Select Your Language

Notifications

webdunia
webdunia
webdunia
webdunia

ಫ್ರೆಂಚ್ ಓಪನ್: ಕುಜ್ನೆಸ್ಟೋವಾ-ಸಫಿನಾ ಮುಖಾಮುಖಿ

ಫ್ರೆಂಚ್ ಓಪನ್: ಕುಜ್ನೆಸ್ಟೋವಾ-ಸಫಿನಾ ಮುಖಾಮುಖಿ
ಪ್ಯಾರಿಸ್ , ಶುಕ್ರವಾರ, 5 ಜೂನ್ 2009 (11:11 IST)
PTI
ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸ್ವೆಟ್ಲಾನಾ ಕುಜ್ನೆಸ್ಟೋವಾ ತನ್ನ ಎದುರಾಳಿ ಆಸ್ಟ್ರೇಲಿಯಾದ ಸಾಮಂತಾ ಸ್ಟೋಸುರ್ ಅವರನ್ನು ಪರಾಜಯಗೊಳಿಸಿದ್ದು, ಫೈನಲ್ ಪಂದ್ಯದಲ್ಲಿ ಸ್ವೆಟ್ವಾನಾ ದಿನಾರಾ ಸಫಿನಾರನ್ನು ಎದುರಿಸಲು ಸಜ್ಜಾಗಿದ್ದಾರೆ.

ರೋಲ್ಯಾಂಡ್ ಗ್ಯಾರೋಸ್ ಅಂಕಣದಲ್ಲಿ ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 7ನೇ ಶ್ರೇಯಾಂಕದ ಸ್ವೆಟ್ಲಾನಾ ಅವರು ಸ್ಟೋಸುರ್ ಅವರನ್ನು 6-4, 6-7(5-7), 6-3ರ ಅಂತರದಲ್ಲಿ ಪರಾಜಯಗೊಳಿಸಿ ಅಂತಿಮ ಸುತ್ತಿಗೆ ಕಾಲಿಟ್ಟಿದ್ದಾರೆ. 2004ರಲ್ಲಿ ಯುಎಸ್ ಓಪನ್ ಟೆನಿಸ್‌ನಲ್ಲಿ ಎರಡನೇ ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ಸ್ವೆಟ್ಲಾನ ಇದೀಗ ಫ್ರೆಂಚ್ ಓಪನ್‌ನ ಫೈನಲ್ ಹಣಾಹಣಿಯಲ್ಲಿ ಸಫಿನಾರನ್ನು ಎದುರಿಸಲಿದ್ದಾರೆ.

ಗುರುವಾರ ನಡೆದ ಹಣಾಹಣಿಯಲ್ಲಿ ದಿನಾರಾ ತಮ್ಮ ಎದುರಾಳಿ ಸ್ಲೋವಾಕಿಯಾದ 20ನೇ ಶ್ರೇಯಾಂಕದ ಡೋಮಿನಿಕಾ ಸಿಬ್ಲುಕೋವಾ ಅವರನ್ನು 6-3, 6-3ರ ಮ್ಯಾಚ್ ಪಾಯಿಂಟ್ ಅಂತರದಿಂದ ಸೋಲಿಸುವ ಮೂಲಕ ಅಂತಿಮವಾಗಿ ಫೈನಲ್‌‌ಗೆ ಕಾಲಿಟ್ಟಿದ್ದರು. 2008ರಲ್ಲಿ ಸಫಿನಾ ರನ್ನರ್ ಅಫ್ ಆಗಿದ್ದರು.

Share this Story:

Follow Webdunia kannada