ಐಟಿಎಫ್ ಮಹಿಳಾ ಟೆನ್ನಿಸ್ ಚಾಂಪಿಯನ್ಷಿಪ್ ಪ್ರಥಮ ಸುತ್ತಿನ ಹಣಾಹಣಿಯಲ್ಲಿ ಭಾರತದ ರಷ್ಮಿ ತೆಲ್ತುಂಬೆ ಅವರು ಎದುರಾಳಿ ಆಸ್ಟ್ರೇಲಿಯಾದ ಮಾರಿಸಾ ಗಿನೋಟ್ಟೈಯನ್ನು 6-2, 6-2ರ ಅಂತರದಿಂದ ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ವಾತಾವರಣ ಪೂರಕವಾಗಿಲ್ಲದಿದ್ದರೂ ಕೂಡ 17ರ ಹರೆಯದ ರಷ್ಮಿ ಉತ್ತಮ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾದ ಮಾರಿಸಾಳನ್ನು ಪರಾಜಯಗೊಳಿಸಿದರು.
ಆದರೆ ರಷ್ಮಿ ಪ್ರಥಮ ಸುತ್ತಿನಲ್ಲಿ ಜಯ ಸಾಧಿಸುವ ಮೂಲಕ ನಿರೀಕ್ಷೆ ಮೂಡಿಸಿದರೆ, 3ನೇ ಶ್ರೇಯಾಂಕದ ಭಾರತದ ಸಾನಾ ಭಾಂಬ್ರಿ ಎದುರಾಳಿ ಕೊರಿಯಾದ ಸೂನ್ ಮಿ ಸೆವೋ ಅವರ ಎದುರು 7-6,(6), 6-2ರ ಅಂತರದಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿದರು. ಭಾಂಬ್ರಿ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದರು ಕೂಡ ಕೊರಿಯನ್ ಎದುರಾಳಿ ಎದುರು ಸೋಲುಂಡರು.