Webdunia - Bharat's app for daily news and videos

Install App

ಸಿಂಗಲ್ಸ್‌ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ: ಸಾನಿಯಾ

Webdunia
ಶನಿವಾರ, 28 ಫೆಬ್ರವರಿ 2009 (14:41 IST)
ಸಿಂಗಲ್ಸ್ ಪಂದ್ಯಗಳಿಗೆ ತಾನು ಹೆಚ್ಚು ಪ್ರಾಧಾನ್ಯತೆ ಕೊಡುವುದಾಗಿ ಹೇಳಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ತನ್ನ ಸಿಂಗಲ್ಸ್ ಕ್ರೀಡಾಜೀವನವನ್ನು ದೀರ್ಘಕಾಲ ಕಾಪಾಡಿಕೊಳ್ಳುವ ಸಲುವಾಗಿ ಡಬಲ್ಸ್ ಪಂದ್ಯಗಳಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

" ನನಗೆ ಸಿಂಗಲ್ಸ್ ಪಂದ್ಯಗಳು ಮುಖ್ಯ. ನಾನಿನ್ನೂ ಎಳೆಯ ಪ್ರಾಯದವಳಾಗಿರುವುದರಿಂದ ಸಿಂಗಲ್ಸ್‌ನಲ್ಲಿ ನನ್ನ ದೇಹ ಸ್ಪಂದಿಸುವಷ್ಟು ಕಾಲ ಆಡುವುದು ಅಗತ್ಯವಿದೆ. ಸಿಂಗಲ್ಸ್‌ನಲ್ಲಿ ನಾನು ಉತ್ತಮವಾಗಿ ಆಡುತ್ತಿದ್ದೇನೆ. ಹಾಗಾಗಿ ಸಿಂಗಲ್ಸ್ ಮತ್ತು ಡಬಲ್ಸ್‌ಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಕೆಲವು ಡಬಲ್ಸ್ ಪಂದ್ಯಗಳಿಂದ ತಾಯ್ನೆಲ ಮತ್ತು ವಿದೇಶಗಳಲ್ಲಿ ಆಡದೇ ಹೊರಗುಳಿಯಲಿದ್ದೇನೆ" ಎಂದು ಕಂಪನಿಯೊಂದರ ಪ್ರಚಾರಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಸಾನಿಯಾ ತಿಳಿಸಿದರು.

ಈ 22ರ ಹೈದರಾಬಾದ್ ಚೆಲುವೆ ಇತ್ತೀಚೆಗಷ್ಟೇ ಮಹೇಶ್ ಭೂಪತಿ ಜತೆಗೂಡಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ವಿಭಾಗದ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ನಂತರ ಪಟ್ಟಾಯ ಓಪನ್ ಸಿಂಗಲ್ಸ್‌ನಲ್ಲಿ ಫೈನಲ್ ಏರಿ ರನ್ನರ್ ಅಪ್ ಆಗಿದ್ದರು. ಇದೆಲ್ಲದರಿಂದ ಸಾನಿಯಾ ಖುಷಿಗೊಂಡಿದ್ದಾರೆ.

2008 ರಲ್ಲಿ ಗಾಯಾಳುವಾಗಿದ್ದ ಸಾನಿಯಾ ಇತ್ತೀಚಿನ ಫೆಡ್ ಕಪ್ ತಂಡದಿಂದ ಗಾಯಾಳುವಾಗಿದ್ದ ಕಾರಣ ಹಿಂದೆ ಸರಿದಿದ್ದರು. ಆದರೆ ತನ್ನ ದೈಹಿಕ ಕ್ಷಮತೆ ಮತ್ತು ಪ್ರದರ್ಶನದ ಬಗ್ಗೆ ತಾನೀಗ ಸಂತಸದಿಂದಿರುವುದಾಗಿ ಆಕೆ ತಿಳಿಸಿದ್ದಾರೆ.

" ಕಳೆದೊಂದು ವಾರದಿಂದ ನಾನು ಹೈದರಾಬಾದ್‌ನಲ್ಲಿ ಅಭ್ಯಾಸ ನಿರತಳಾಗಿದ್ದೇನೆ. ನನ್ನ ಮಣಿಕಟ್ಟು ಉತ್ತಮವಾಗಿ ಕೆಲಸ ಮಾಡುತ್ತಿದೆ. ಒಟ್ಟಾರೆ ನಾನು ನನ್ನ ದೈಹಿಕ ಕ್ಷಮತೆಯ ಬಗ್ಗೆ ತೃಪ್ತಿಯಿಂದಿದ್ದೇನೆ" ಎಂದರು.

ಸಾನಿಯಾ ಮುಂದಿನ ವಾರ 'ಗಿಲ್ ರೇಯಾಸ್' ತರಬೇತಿ ಕೇಂದ್ರಕ್ಕೆ ತೆರಳಲಿದ್ದು ಈ ಬಗ್ಗೆ ಕಾತರದಿಂದ ಕಾಯುತ್ತಿರುವುದಾಗಿ ಆಕೆ ತಿಳಿಸಿದ್ದಾರೆ. "ಆಂದ್ರೆ ಅಗಸ್ಸಿ ಮತ್ತು ಫೆರ್ನಾಂಡೋ ವಾರ್ಡಸ್ಕೋರಂತಹ ವಿಶ್ವದ ಅಗ್ರ ಆಟಗಾರರಿಗೆ ತರಬೇತಿ ನೀಡಿರುವ ಗಿಲ್ ಅತ್ಯುತ್ತಮ ತರಬೇತುದಾರರಾಗಿದ್ದಾರೆ. ಅದ್ಭುತ ಅನುಭವ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಕಠಿಣ ಪರಿಶ್ರಮದ ನಿರೀಕ್ಷೆಗಳೊಂದಿಗೆ ನಾನಲ್ಲಿಗೆ ತೆರಳುತ್ತಿದ್ದೇನೆ" ಎಂದಿದ್ದಾರೆ ಸಾನಿಯಾ.

" ಒಂದು ವಾರದ ತರಬೇತಿ ಎಂದರೆ ತುಂಬಾ ಕಡಿಮೆ ಸಮಯ. ಆದರೆ ಇದು ಆರಂಭವಾಗಿರುವುದರಿಂದ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿದೆ. ಕೆಲವು ಕಠಿಣ ಟೂರ್ನಮೆಂಟ್‌ಗಳ ಮೊದಲಿನ ಈ ತರಬೇತಿಯನ್ನು ನಾನು ನಿಯಮಿತ ಅವಧಿಯಲ್ಲಿ ಮುಗಿಸಬೇಕಾಗಿದೆ" ಎಂದು ಆಕೆ ತಿಳಿಸಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments