ಭಾರತದ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಅವರ ಝೆಕ್ ಗಣರಾಜ್ಯದ ಲುಕಾಸ್ ದ್ಲೋಹಿ ತಮ್ಮ ಎದುರಾಳಿಗಳನ್ನು ನೇರ ಸೆಟ್‌ಗಳಿಂದ ಮಣಿಸಿ ನೆದರ್ಲ್ಯಾಂಡಿನಲ್ಲಿ ನಡೆಯುತ್ತಿರುವ ಎಬಿನ್ ಅಮ್ರೊ ವಿಶ್ವ ಟೆನಿಸ್ ಟೂರ್ನಮೆಂಟ್‌ನ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಶ್ರೇಯಾಂಕಿತ ಪೇಸ್-ಲುಕಾಸ್ ಜತೆಗಾರರು ರಷ್ಯಾ-ಪೊಲಿಶ್ ಜೋಡಿ ಇಗೋರ್ ಆಂಡ್ರೀವ್ ಮತ್ತು ಮರ್ಸಿನ್ ಮಾತ್ಕೊಸ್ಕಿಯವರನ್ನು 6-2, 6-1ರ ನೇರ ಸೆಟ್‌ಗಳಿಂದ ಸೋಲಿಸಿದ್ದು 1445 ಸಾವಿರ ಯೂರೋ ಬಹುಮಾನವಿರುವ ಎಬಿನ್ ಅಮ್ರೊ ವಿಶ್ವ ಟೆನಿಸ್ ಟೂರ್ನಮೆಂಟ್‌ನ ಸೆಮಿ ಫೈನಲ್‌ಗೆ ಲಗ್ಗೆ ಹಾಕಿದರು.
ಅತ್ತ ಫ್ರೆಂಚ್ ಜತೆಗಾರರಾದ ಆರ್ನೌದ್ ಕ್ಲೆಮೆಂಟ್-ಮೈಕೆಲ್ ಲೋದ್ರಾರನ್ನು ಆಸ್ಟ್ರೇಲಿಯಾ-ಇಸ್ರೇಲ್ ಜೋಡಿ ಜೂಲಿಯನ್ ನೋವ್ಲ್- ಆಂಡಿ ರಾಮ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದು, ಪೇಸ್-ದ್ಲೋಹಿ ವಿರುದ್ಧ ಹೋರಾಡಲಿದ್ದಾರೆ.
ಲಿಯಾಂಡರ್ ಪೇಸ್‌ಗಿದು ಈ ವರ್ಷದ ಮೂರನೇ ಸೆಮಿಫೈನಲ್. ದ್ಲೋಹಿ ಜತೆಗೂಡಿ ಆಸ್ಟ್ರೇಲಿಯಾ ಓಪನ್‌ನಲ್ಲೂ ಪೇಸ್ ಸೆಮಿಫೈನಲ್ ಪ್ರವೇಶಿಸಿದ್ದರು. ಅಮೆರಿಕಾದ ಸ್ಕಾಟ್ ಲಿಪ್ಸ್‌ಕಿಯವರ ಜತೆ ಕಳೆದ ತಿಂಗಳಲ್ಲಿ ಆಕ್‌ಲ್ಯಾಂಡ್ ಹೆನ್‌ಕೆನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಎಲ್ಲೂ ಫೈನಲ್ ಪ್ರವೇಶಿಸಿರಲಿಲ್ಲ. ಇದೀಗ ಮೂರನೇ ಸೆಮಿಫೈನಲ್ ಗೆದ್ದು ಫೈನಲ್ ಪ್ರವೇಶಿಸುವ ಹಂಬಲ ಲಿಯಾಂಡರ್ ಪೇಸ್‌ರದ್ದು.