ಅಗ್ರ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್ ಮತ್ತು ನಂ.2 ದಿನಾರಾ ಸಫಿನಾ ತಮ್ಮ ಎದುರಾಳಿಗಳನ್ನು ಎರಡನೇ ಸುತ್ತಿನಲ್ಲಿ ಮಣಿಸಿದ್ದು, ಸಿಡ್ನಿ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಮೆಂಟಿನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಅಮೆರಿಕಾದ ಸೆರೆನಾ ವಿಲಿಯಮ್ಸ್ ತನ್ನ ಎದುರಾಳಿಯನ್ನು 6-1, 6-2ರಿಂದ 50 ನಿಮಿಷಗಳಲ್ಲಿ ಮಣಿಸಿ ಈ ಸಾಧನೆ ಮಾಡಿದ್ದಾರೆ. ಇಟಲಿಯ ಸಾರಾ ಎರಾನಿಯವರನ್ನು ನೇರ ಸೆಟ್‌ಗಳಿಂದ ಮಣಿಸಿದ ಈ ಅಗ್ರ ಶ್ರೇಯಾಂಕಿತೆ ಎರಡೂ ಸೆಟ್‌ಗಳಲ್ಲಿ ಚೇತರಿಸಿಕೊಳ್ಳಲು ಅವಕಾಶ ಕೊಡಲಿಲ್ಲ.
ಮತ್ತೊಬ್ಬ ಆಟಗಾರ್ತಿ ರಷ್ಯಾದ ದಿನಾರಾ ಸಫಿನಾ ತನ್ನ ಪ್ರತಿಸ್ಪರ್ಧಿ ವೆರಾ ದುಶ್ವಿನಾರನ್ನು 6-3, 6-0ಯಿಂದ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಹೋರಾಟದಲ್ಲಿ ಸೋಲಿಸಿದರು. ವೆರಾರೆದುರು ಪ್ರಬಲರಾಗಿ ಮೂಡಿ ಬಂದ ಸಫಿನಾ ಮೊದಲ ಸೆಟ್‌ನಲ್ಲೇ ಸಾಕಷ್ಟು ನಿಯಂತ್ರಣ ಹೊಂದಿದ್ದರು. ಎರಡನೇ ಸೆಟ್‌ನಲ್ಲಿ ಯಾವುದೇ ಅಂಕಗಳನ್ನು ಎದುರಾಳಿಗೆ ಗಳಿಸಲು ಅವಕಾಶ ನೀಡದೆ ಪಾರಮ್ಯ ಮೆರೆದು ಪಂದ್ಯವನ್ನು ತನ್ನೆಡೆಗೆ ಸೆಳೆದುಕೊಂಡಿದ್ದಾರೆ.
"ಇದರಿಂದಾಗಿ ನನ್ನಲ್ಲಿನ ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಲು ಸಹಾಯವಾಗಿದೆ. ಟೂರ್ನಮೆಂಟಿನ ಅಂತ್ಯದವರೆಗೂ ಆಡುವ ಆಶಯವನ್ನು ನಾನು ಹೊಂದಿದ್ದು, ಯಾವುದೇ ಹಂತದಲ್ಲಿ ಬಿಟ್ಟುಕೊಡುವ ಅವಕಾಶಗಳ ಬಗ್ಗೆ ಚಿಂತಿಸುವುದಿಲ್ಲ" ಎಂದು ಗೆದ್ದ ನಂತರ ವಿಲಿಯಮ್ಸ್ ಪ್ರತಿಕ್ರಿಯೆ ನೀಡಿದ್ದಾರೆ.