Webdunia - Bharat's app for daily news and videos

Install App

ಟೈಗರ್ ವುಡ್ಸ್ ಪ್ರಾಯೋಕತ್ವಕ್ಕೆ ಕುತ್ತು

Webdunia
ಗುರುವಾರ, 27 ನವೆಂಬರ್ 2008 (14:44 IST)
ಆರ್ಥಿಕ ಸಂಕಷ್ಟದ ಕಾರಣದಿಂದ ಜಿಎಂ ಮೋಟಾರ್ಸ್ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರೊಂದಿಗಿನ ಪ್ರಾಯೋಜಕತ್ವ ಒಪ್ಪಂದವನ್ನು ಮುರಿದುಕೊಂಡಿದೆ. ಹಣಕಾಸಿನ ತೊಂದರೆ ಮತ್ತು ಆಟಗಾರನಿಗೆ ಖಾಸಗಿಯಾಗಿ ಕಳೆಯಲು ಇನ್ನಷ್ಟು ಸಮಯದ ಅವಶ್ಯಕತೆಯಿರುವುದರಿಂದ ಇನ್ನೂ ಒಂದು ವರ್ಷ ಮುಂದುವರಿಯಬೇಕಿದ್ದ ಒಪ್ಪಂದವನ್ನು ಈ ವರ್ಷವೇ ಮುಗಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಜನರಲ್ ಮೋಟಾರ್ಸ್ ಕಳೆದ ಹತ್ತು ವರ್ಷಗಳಿಂದ ಗಾಲ್ಫ್ ಆಟಗಾರ ಟೈಗರ್ ವುಡ್ಸ್‌ಗೆ ಸುಮಾರು 10 ದಶಲಕ್ಷ ಡಾಲರ್ ಪ್ರಾಯೋಜಕತ್ವದ ಹಣ ನೀಡುತ್ತಿತ್ತು. ಹೆಚ್ಚಿರುವ ಸಾಲದಿಂದಾಗ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಂಪನಿಯನ್ನು ಪಾರು ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವಿಶ್ವದ ನಂಬರ್ ವನ್ ಗಾಲ್ಫ್ ಆಟಗಾರ ಹಾಗೂ ನಂಬರ್ ವನ್ ಗಳಿಕೆಯ ಆಟಗಾರ ಎಂಬ ಹೆಗ್ಗಳಿಕೆ ಟೈಗರ್ ವುಡ್ಸ್ ಪಾಲಿಗಿದೆ.

" ಟೈಗರ್ ವುಡ್ಸ್‌ರವರು ಜನರಲ್ ಮೋಟಾರ್ಸ್‌ನ ಅತ್ಯುತ್ತಮ ಗೆಳೆಯ ಮತ್ತು ನಮ್ಮ ಹೊಸ ಉತ್ಪಾದನೆಗಳಿಗೆ ಸಾಕಷ್ಟು ಪ್ರಚಾರ ನೀಡಿ ನಮ್ಮ ಪಾಲಿನ ಆಸ್ತಿಯಾಗಿದ್ದಾರೆ" ಎಂದು ಕಂಪನಿಯ ಮಾರಾಟ ವಿಭಾಗದ ಉಪಾಧ್ಯಕ್ಷ ಮಾರ್ಕ್ ಲಾನೆವೆ ತಿಳಿಸಿದ್ದಾರೆ.

" ಇದುವರೆಗಿನ ದೀರ್ಘಕಾಲದ ಒಪ್ಪಂದದ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ ಮತ್ತು ನಾನು ಅವರಿಗೆ ಆಭಾರಿಯಾಗಿದ್ದೇನೆ. ನಾನು ಕಂಪನಿಯ ಜತೆ ಇದ್ದಷ್ಟು ದಿನ ಸಂತೋಷವಾಗಿಯೇ ಕಾಲ ಕಳೆದಿದ್ದೇನೆ. ಆರ್ಥಿಕ ಸಂಕಷ್ಟ ಮತ್ತು ನನಗೆ ವೈಯಕ್ತಿಕವಾಗಿ ಇನ್ನೊಂದು ಮಗು ಬೇಕೆಂಬ ಆಸೆಯಿರುವುದರಿಂದ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಿದ್ದೇನೆ" ಎಂದು ಟೈಗರ್ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments