Webdunia - Bharat's app for daily news and videos

Install App

ಒಜ್ನಿಯಾಕಿಗೆ ಒಲಿದ ಜಪಾನ್ ಓಪನ್ ಪ್ರಶಸ್ತಿ

Webdunia
ಸೋಮವಾರ, 6 ಅಕ್ಟೋಬರ್ 2008 (13:02 IST)
ಜಪಾನ್ ಓಪನ್‌ ಟೆನಿಸ್‌ನ ಮಹಿಳಾ ವಿಭಾಗದಲ್ಲಿ ಭಾನುವಾರ, ಡೆನ್ಮಾರ್ಕಿನ ಕಾರೊಲಿನ್ ಒಜ್ನಿಯಾಕಿ ಅವರು ಎಸ್ಟೋನಿಯಾದ ಕೈಯಾ ಕೆನೆಪಿ ಅವರನ್ನು ಮಣಿಸಿ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

18 ರ ಹರೆಯದ ಒಜ್ನಿಯಾಕಿ ಕೇವಲ ಎರಡು ಗಂಟೆಗಳ ಆಟದಲ್ಲಿ 6-2, 3-6, 6-1ರ ಅಂತರದಲ್ಲಿ ಕೆನೆಪಿಯವರನ್ನು ಮಣಿಸಿದರು.

" ನನಗೆ ಆಶ್ಚರ್ಯವೆನಿಸುತ್ತಿದೆ. ನಾನು ಇನ್ನೊಂದು ಪಂದ್ಯಾವಳಿಯನ್ನು ಜಯಿಸಿದ್ದೇನೆ. ಈ ವರ್ಷ ನನಗೆ ಅತ್ಯಂತ ಅಮೋಘವಾದುದು. ಜಪಾನ್‌ನಲ್ಲಿ ಇದು ನನಗೆ ದೊರೆತ ಮೊದಲ ಪ್ರಶಸ್ತಿ ಮತ್ತು ನಾನು ಬಹಳ ಸಂತೋಷಗೊಂಡಿದ್ದೇನೆ" ಎಂದು 16ನೇ ‌ರ‌್ಯಾಂಕ್ ಹೊಂದಿರುವ ಒಜ್ನಿಯಾಕಿ ಹೇಳಿದ್ದಾರೆ. ಕೆನಪಿಯವರು 33ನೇ ರ‌್ಯಾಂಕ್ ಹೊಂದಿದ್ದಾರೆ.

ಮೊದಲ ಹಂತದಲ್ಲೆ ಸರ್ವೀಸ್‌ನಲ್ಲಿ ಲಯತಪ್ಪಿದ 23ರ ಕೆನಪಿ ಮೊದಲ ಸೆಟ್‌ನ್ನು 6-2 ಅಂತರದಲ್ಲಿ ಬಿಟ್ಟುಕೊಟ್ಟರು. ಮತ್ತೆ ಎರಡನೇ ಸೆಟ್ ಅನ್ನು ಜಯಿಸಿಕೊಂಡು ಪಂದ್ಯವನ್ನು ಸಮಸ್ಥಿತಿಗೆ ತರುವಲ್ಲಿ ಕೆನಪಿ ಯಶಸ್ವಿಯಾದರಾದರೂ, ಮತ್ತೆ ಮತ್ತೆ ತಪ್ಪೆಸಗುತ್ತಿದ್ದ ಕೆನಪಿಯವರ ಮೇಲೆ ಮೇಲುಗೈ ಸಾಧಿಸುವುದು ಲಯದಲ್ಲಿದ್ದ ಒಜ್ನಿಯಾಕಿಯವರಿಗೆ ತ್ರಾಸದಾಯಕವೆನಿಸಲಿಲ್ಲ.

ಈ ವರ್ಷದ ಮೂರನೇ ಪ್ರಶಸ್ತಿ ಜಯಿಸಿದ ಒಜ್ನಿಯಾಕಿ 8,250 ಡಾಲರ್‌ಗಳನ್ನು ಬಹುಮಾನವಾಗಿ ಪಡೆದರು. ತಮ್ಮ ಎರಡನೇ ಫೈನಲ್ ಆಡಿದ ಕೆನಪಿ 4,350 ಡಾಲರ್ ರನ್ ಅಪ್ ಪ್ರಶಸ್ತಿಗಷ್ಟೇ ತೃಪ್ತರಾಗಬೇಕಾಯಿತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಬೇರೆಯವರು ಸೋತಾಗ ನಗಬೇಡಿ ಅಂಬಟಿ ರಾಯುಡು: ಆರ್ ಸಿಬಿ ಈಗ ಟಾಪರ್ ಸಿಎಸ್ ಕೆ ಲಾಸ್ಟ್

Virat Kohli Video: ಕೂಲ್ ಆಗಿರುವ ಕೆಎಲ್ ರಾಹುಲ್ ರನ್ನೂ ಬಿಡದ ಕೊಹ್ಲಿ: ಮೈದಾನದಲ್ಲೇ ಗೆಳೆಯರ ಕಿತ್ತಾಟ

Virat Kohli: ಕಾಂತಾರ ಸೆಲೆಬ್ರೇಷನ್ ನಂಗೂ ಬರುತ್ತೆ ಎಂದು ಕೆಎಲ್ ರಾಹುಲ್ ಗೇ ತಿರುಗಿಸಿಕೊಟ್ಟ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

IPL 2025 RCB vs DC: ಯಾರು ಏನಾರ ಹೇಳ್ಳಿ, ನಾವು ಒಳ್ಳೆ ಫ್ರೆಂಡ್ಸ್ ಎಂದ್ರು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ video

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಯಾರೆಂದು ಕೊನೆಗೂ ಪತ್ತೆ

Show comments