ಮೋನಿಕಾಗೆ ಕ್ಲೀನ್ ಚಿಟ್-ಬೀಜಿಂಗ್‌ಗೆ ನೋ ಎಂಟ್ರಿ

Webdunia
ಭಾನುವಾರ, 10 ಆಗಸ್ಟ್ 2008 (12:29 IST)
ವೇಟ್ ಲಿಫ್ಟರ್ ಮೋನಿಕಾ ದೇವಿ ಅವರು ಉದ್ದೀಪನಾ ಮದ್ದು ಸೇವನೆ ಆರೋಪದಿಂದ ದೋಷಮುಕ್ತಗೊಂಡಿದ್ದರೂ ಕೂಡ, ಭಾರತೀಯ ಒಲಿಂಪಿಕ್ ಅಸೋಸಿ ಯೇಶನ್ ಮೋನಿಕಾ ಅವರು ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂದು ಹೇಳುವ ಮೂಲಕ ಅವರ ಆಸೆಗೆ ತಣ್ಣೀರೆರಚಿದೆ.

ಭಾರತದ ವೇಟ್ ಲಿಫ್ಟರ್ ಮೋನಿಕಾ ಅವರ ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಕಾರ್ಯಾಲಯ ಮಧ್ಯಪ್ರವೇಶಿಸುವ ಮೂಲಕ ಸಮಸ್ಯೆ ಇತ್ಯರ್ಥಗೊಂಡಿತ್ತು. ಅಲ್ಲದೇ ಮಣಿಪುರದ ಮುಖ್ಯಮಂತ್ರಿ ಕೂಡ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಶನಿವಾರ ತಡ ರಾತ್ರಿ ಮೋನಿಕಾ ಅವರು ಬೀಜಿಂಗ್‌ಗೆ ತೆರಳಲಿದ್ದಾರೆ ಎಂಬುದಾಗಿಯೇ ಭಾರತೀಯ ಒಲಿಂಪಿಕ್ ಸಮಿತಿ ಮೂಲಗಳು ತಿಳಿಸಿದ್ದವು.

ಆದರೆ ಇದೀಗ, ಮೋನಿಕಾ ಅವರು ಬೀಜಿಂಗ್‌ಗೆ ಪ್ರಯಾಣಿಸಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಬಾಗಿಲುಗಳು ಬಂದ್ ಆಗಿದೆ, ಯಾಕೆಂದರೆ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಅವರಿಗೆ ಯಾವುದೇ ಅವಕಾಶ ದೊರೆಯದು ಎಂದು ಐಓಎ ಕಾರ್ಯದರ್ಶಿ ರಣಧೀರ್ ಸಿಂಗ್ ತಿಳಿಸಿದ್ದಾರೆ.

ಮೋನಿಕಾ ಭಾಗವಹಿಸುವುದು ಸಾಧ್ಯವಿಲ್ಲ, ಸಂಘಟಕರು ಅವರ ಪ್ರವೇಶ ಪತ್ರವನ್ನು ಪಡೆದಿಲ್ಲ, ಹೀಗಾಗಿ ಅವರಿಲ್ಲಿಗೆ ಬಂದರೂ ಭಾಗವಹಿಸಲು ಆಗದು ಎಂದು ಭಾರತೀಯ ಒಲಿಂಪಿಕ್ ತಂಡದ ಮುಖ್ಯಸ್ಥ ಬಲ್ಜಿತ್ ಸಿಂಗ್ ಸೇಥಿ ಹೇಳಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟ್ರೋಪಿ ಗೆದ್ದ ಖುಷಿಯಲ್ಲಿ ಗೆಳತಿ ಜತೆ ರಾಷ್ಟ್ರ ಧ್ವಜ ಗೌರವ ಕೊಡುವುದು ಮರೆತ್ರಾ ಹಾರ್ದಿಕ್ ಪಾಂಡ್ಯ

ಜಸ್‌ಪ್ರೀತ್‌ ಬೂಮ್ರಾ ನನ್ನಿಂದಲೇ ನಿಧಾನಗತಿ ಬೌಲಿಂಗ್ ಕಲಿತರು: ಪಾಕ್ ಮೂಲದ ಬೌಲರ್‌ ಶಾಕಿಂಗ್‌ ಹೇಳಿಕೆ

ಗರ್ಲ್ ಫ್ರೆಂಡ್ ಜೊತೆ ಮೈದಾನದಲ್ಲಿ ಕುಣಿದ ಹಾರ್ದಿಕ್ ಪಾಂಡ್ಯಗೆ ಎದುರಾಯ್ತು ಸಂಕಷ್ಟ

IPL 2026: ಆರಂಭಿಕ ಪಂದ್ಯಕ್ಕೆ ಸಂಪ್ರದಾಯ ಬದಲಿಸಿದ ಐಪಿಎಲ್ ಆಡಳಿತ ಮಂಡಳಿ: ಪಂಜಾಬ್ ಫ್ಯಾನ್ಸ್ ಅಸಮಾಧಾನ

ವಿಶ್ವಕಪ್ ಗೆದ್ದ ಮೇಲೆ ಮುಖ ಮುಚ್ಚಿ ರೈಲಿನಲ್ಲಿ ಪ್ರಯಾಣ ಮಾಡಿದ್ದ ಕ್ರಿಕೆಟಿಗ ಶಿವಂ ದುಬೆ

Show comments