Select Your Language

Notifications

webdunia
webdunia
webdunia
webdunia

ಐಪಿಎಲ್ ಪಂದ್ಯ: ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಶುಭಾರಂಭ

ಐಪಿಎಲ್ ಪಂದ್ಯ: ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಶುಭಾರಂಭ
, ಶುಕ್ರವಾರ, 18 ಏಪ್ರಿಲ್ 2014 (17:08 IST)
PR
PR
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2014ರ ಮೊದಲ ಪಂದ್ಯದಲ್ಲಿ ದೆಹಲಿ ಡೇರ್ ಡೆವಿಲ್ಸ್ ವಿರುದ್ದ 8 ವಿಕೆಟ್ ಜಯಗಳಿಸಿ ಶುಭಾರಂಭ ಮಾಡಿದೆ. ಬೆಂಗಳೂರು ಜಯಕ್ಕೆ ಬೌಲರ್‌ಗಳು ಉತ್ತಮ ಸಾಧನೆ ಕಾರಣವಾಗಿದ್ದು, ಡೇರ್‌ಡೆವಿಲ್ಸ್ ತಂಡವನ್ನು 145ರ ಸಣ್ಣ ಮೊತ್ತಕ್ಕೆ ಸೀಮಿತಗೊಳಿಸಿದರು.ಮಿಚೆಲ್ ಸ್ಟಾರ್ಕ್ ಹೊಸ ಚೆಂಡಿನಿಂದ ವೇಗದ ದಾಳಿ, ಮಾರ್ಕೆಲ್ ಅವರ ಸ್ವಿಂಗ್ ದಾಳಿ ಮತ್ತು ವರುಣ್ ಆರಾನ್ ನಿಖರ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು 145ಕ್ಕೆ ಸೀಮಿತಗೊಳಿಸಿದರು.ಕೇವಲ 35 ಸ್ಕೋರು ಮಾಡುವಷ್ಟರಲ್ಲಿಯೇ ಡೆಲ್ಲಿ ಡೇರ್‌ಡೆವಿಲ್ಸ್ 4 ವಿಕೆಟ್ ಕಳೆದುಕೊಂಡಿತು.ಮಾಯಂಕ್ ಅಗರವಾಲ್( 10 ಎಸೆತಗಳಲ್ಲಿ 6), ದಿನೇಶ್ ಕಾರ್ತಿಕ್(0), ಮನೋಜ್ ತಿವಾರಿ( 3 ಎಸೆತಗಳಲ್ಲಿ 1) ಮತ್ತು ವಿಜಯ್( 20 ಎಸೆತಗಳಲ್ಲಿ 18). ಡುಮಿನಿ 48ಎಸೆತಗಳಲ್ಲಿ 67 ರನ್ ಬಾರಿಸಿದರು ಮತ್ತು ಟೇಲರ್ 39 ಎಸೆತಗಳಲ್ಲಿ 43 ರನ್ ಹೊಡೆದರು.

ಇವರಿಬ್ಬರ ಜೋಡಿ 79 ಎಸೆತಗಳಲ್ಲಿ 110 ರನ್ ಬಾರಿಸಿದರು. ಇವರಿಬ್ಬರ ಅಜೇಯ ಆಟದಿಂದ ಡೆಲ್ಲಿ ಡೇರ್‌ಡೆವಿಲ್ಸ್ 145 ರನ್ ಹೊಡೆಯುವುದಕ್ಕೆ ಸಾಧ್ಯವಾಯಿತು.ಬೆಂಗಳೂರಿನ ಕಡೆ ಕ್ರಿಸ್ ಗೇಯ್ಲ್ ಬದಲಿಗೆ ನಿಕ್ ಮ್ಯಾಡಿನ್‌ಸನ್‌ಗೆ ಬ್ಯಾಟಿಂಗ್ ಅವಕಾಶ ಸಿಕ್ಕಿತು. ಅವರು ಪಾರ್ಥಿವ್ ಪಟೇಲ್ ಜತೆ ಇನ್ನಿಂಗ್ಸ್ ಓಪನ್ ಮಾಡಿದರು. ಪಾರ್ಥಿವ್ ಪಟೇಲ್ 38 ರನ್ ಗಳಿಸಿ ಔಟಾದರು. ನಂತರ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಉತ್ತಮ ಜೊತೆಯಾಟವಾಡಿ 16.4 ಓವರುಗಳಲ್ಲೇ ಗುರಿಯನ್ನು ಮುಟ್ಟಿ ಚೊಚ್ಚಲ ಪಂದ್ಯದಲ್ಲಿ ಜಯ ದೊರಕಿಸಿಕೊಟ್ಟರು.ವಿರಾಟ್ ಕೊಹ್ಲಿ ಅಜೇಯ 49 ಮತ್ತು ಯುವರಾಜ್ ಸಿಂಗ್ ಅಜೇಯ 52 ರನ್ ಬಾರಿಸಿದರು.

Share this Story:

Follow Webdunia kannada