Webdunia - Bharat's app for daily news and videos

Install App

ಎಲ್ಲ ಕಡೆನೂ ಋಣಾತ್ಮಕ ಅಂಶಗಳಿವೆ: ಕಾಂಬ್ಳಿ ಆರೋಪಕ್ಕೆ ಕಪಿಲ್

Webdunia
ಶನಿವಾರ, 19 ನವೆಂಬರ್ 2011 (11:33 IST)
1996 ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡಿದಿದೆಯೆಂಬ ವಿನೋದ್ ಕಾಂಬ್ಳಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಎಲ್ಲ ಕಡೆನೂ ಋಣಾತ್ಮಕ ಅಂಶಗಳಿವೆ ಎಂದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಬಗ್ಗೆ ಹಿಂದೆ ಎಂದೂ ಬಾಯಿ ಬಿಡದ ಕಾಂಬ್ಳಿ ಸುದೀರ್ಘ 15 ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ನಡುವಣ 1996ರ ವಿಶ್ವಕಪ್ ಸೆಮಿಫೈನಲ್ ಫಿಕ್ಸಿಂಗ್ ನಡೆದಿದಿತ್ತು ಎಂದು ನವೆಂಬರ್ 17ರಂದು ಶಂಕೆ ವ್ಯಕ್ತಪಡಿಸಿದ್ದರು.

ಎಲ್ಲ ಕಡೆಯೂ ಋಣಾತ್ಮಕ ವ್ಯಕ್ತಿಗಳಿರುತ್ತಾರೆ. ಆದರೆ ನಾವು ಸರಿಯಾದ ಜನರೊಂದಿಗೆ ಇರಬೇಕಾಗಿದೆ. ಕಾಂಬ್ಳಿ ಆರೋಪಕ್ಕೆ ಪ್ರತಿಕ್ರಿಯಿಸಲು ಆಗ್ರಹಿಸುತ್ತಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಅವರ ವಿಶ್ವಕಪ್ ವಿಜೇತ ಬ್ಯಾಟ್ 72 ಲಕ್ಷಕ್ಕೆ ಹರಾಜುಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಕಪಿಲ್ ದೇವ್ ತಿಳಿಸಿದರು.

ದೇಶದ ಪರ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿರುವ ಕಾಂಬ್ಳಿ ಅನುಕ್ರಮವಾಗಿ 1084 ಹಾಗೂ 2477 ರನ್ನುಗಳನ್ನು ಗಳಿಸಿದ್ದಾರೆ. ಆದರೆ 1996ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಾಯಕ ಮೊಹಮ್ಮದ್ ಅಜರುದ್ದೀನ್ ಫೀಲ್ಡಿಂಗ್ ತೆಗೆದುಕೊಂಡ ನಿರ್ಧಾರವು ಆಘಾತ ತಂದಿತ್ತು. ಇದರಿಂದಾಗಿ ನನ್ನ ಕೆರಿಯರೇ ಹಾಳಾಗಿತ್ತು ಎಂದು ಆಪಾದಿಸಿತ್ತು.

1996 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ನೇರವಾಗಿ ಬೊಟ್ಟು ಮಾಡಿದ್ದ ಕಾಂಬ್ಳಿ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತುಂಬಾನೇ ಭಾವುಕರಾಗಿದ್ದರು. ಯಾಕೆಂದರೆ ವಿಶ್ವಕಪ್ ಗೆಲ್ಲುವುದು ನನ್ನ ಕೂಡಾ ಕನಸಾಗಿತ್ತು ಎಂದಿದ್ದರು. ಆದರೆ ಕಾಂಬ್ಳಿ ಆಪಾದನೆಗಳೆನ್ನೆಲ್ಲ ಅಜರುದ್ದೀನ್ ಸಹಿತ ಅನೇಕ ಸಹ ಆಟಗಾರರು ಈಗಾಗಲೇ ನಿರಾಕರಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments