Webdunia - Bharat's app for daily news and videos

Install App

ವಿಶ್ವಕಪ್ ಗೆದ್ದಾಯ್ತು; ಇನ್ನು ಭಜ್ಜಿ, ಯುವಿ, ಜಹೀರ್ ಮದುವೆ ಸರದಿ

Webdunia
ಮಂಗಳವಾರ, 5 ಏಪ್ರಿಲ್ 2011 (12:11 IST)
ಭಾರತ ತಂಡ ವಿಶ್ವಕಪ್ ಗೆದ್ದಾಯಿತು. ಇದೀಗ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ವೇಗಿ ಜಹೀರ್ ಖಾನ್ ಅವರ ತಾಯಂದಿರು ಆದಷ್ಟು ಬೇಗ ತಮ್ಮ ಮಕ್ಕಳ ಮದುವೆ ಮಾಡುವ ಇರಾದೆಯಲ್ಲಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ 28 ವರ್ಷಗಳ ನಂತರ ವಿಶ್ವಕಪ್ ಕಿರೀಟಕ್ಕೆ ಮುತ್ತಿಕ್ಕಿತ್ತು.

ಭಾರತಕ್ಕೆ ವಿಶ್ವಕಪ್; ರೋಚಕ ಕ್ಷಣಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...

ವಿಶ್ವಕಪ್ ಜಯದ ನಂತರ ಸಂಭ್ರಮ ಆಚರಿಸಿದ್ದ 30ರ ಹರೆಯದ ಹರಭಜನ್ ಸಿಂಗ್ ಅವರ ತಾಯಿ ಅವತಾರ್ ಕೌರ್, ಆದಷ್ಟು ಬೇಗ ಭಜ್ಜಿಗೆ ಮದುವೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಭಜ್ಜಿಯ ಇಬ್ಬರು ಸಹೋದರಿಯರು ವಿವಾಹಿತರಾಗಿದ್ದಾರೆ. ಈಗ ಹರಭಜನ್ ಸರದಿಯಾಗಿದ್ದು, ತಕ್ಕ ವಧುವನ್ನು ಹುಡುಕುತ್ತಿದ್ದೇವೆ ಎಂದಿದ್ದಾರೆ.

ಹರಭಜನ್ ತಂದೆಯವರು ಕೂಡಾ ಕ್ರಿಕೆಟ್ ಅಭಿಮಾನಿ. ಮಗ ಕ್ರಿಕೆಟ್ ಆಟಗಾರ ಆಗಬೇಕೆಂಬುದು ಅವರ ಕನಸಾಗಿತ್ತು. ಅದು ಈಡೇರಿದೆ. ನನಗೆ ಕ್ರಿಕೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲವಾದರೂ ಮಗನ ಸಾಧನೆ ಖುಷಿ ತಂದಿದೆ ಎಂದವರು ಹೇಳಿದರು.

29 ಹರೆಯದ ಯುವರಾಜ್ ಸಿಂಗ್ ತಾಯಿ ಶಬನಮ್ ಕೂಡಾ ವಧುವಿನ ಹುಡುಕಾಟದಲ್ಲಿದ್ದಾರೆ. ಯುವಿಗೆ ತಕ್ಕ ಹುಡುಗಿಯನ್ನು ಹುಡುಕಬೇಕಾಗಿದೆ. ಅವರ ಕ್ರಿಕೆಟ್‌ಗೆ ಸಹಕಾರಿಯಾಗಿ ಹೊಂದಿಕೊಂಡು ಹೋಗುವ ಹುಡುಗಿಯನ್ನು ಹುಡುಕಬೇಕು ಎಂದಿದ್ದಾರೆ.

ಎಡಗೈ ಜಹೀರ್ ತಂದೆಯವರಾದ ಭಕ್ತಿಯಾರ್ ಖಾನ್ ಕೂಡಾ ಇದನ್ನೇ ಬಯಸಿದ್ದಾರೆ. 2007ರಲ್ಲೇ ಮದುವೆಯ ಬಗ್ಗೆ ಬೇಡಿಕೆ ಮಾಡಲಾಗಿತ್ತು. ಆದರೆ ಕ್ಯಾರಿಯರ್‌ಗೆ ಒತ್ತು ನೀಡಿದ್ದ ಜಹೀರ್ ಮುಂದಿನ ವಿಶ್ವಕಪ್ ಬಳಿಕ ಮದುವೆಯಾಗುವುದಾಗಿ ತಿಳಿಸಿದ್ದರು. ಈಗ ವಿಶ್ವಕಪ್ ಕನಸು ನನಸಾಗಿದ್ದು, ಆದಷ್ಟು ಬೇಗ ಮದುವೆಯಾಗಬೇಕು ಎಂದಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments