Webdunia - Bharat's app for daily news and videos

Install App

ಭಾರತೀಯರಿಗೆ ವಿಶಾಲ ಹೃದಯವಿಲ್ಲ: ಆಫ್ರಿದಿ ಕೆಂಡಾಮಂಡಲ

Webdunia
ಸೋಮವಾರ, 4 ಏಪ್ರಿಲ್ 2011 (17:51 IST)
PTI
ಇತ್ತೀಚೆಗಷ್ಟೇ ತಮ್ಮ ಹೇಳಿಕೆಯ ಮೂಲಕ ಅಸಂಖ್ಯಾತ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದ ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ತವರಿಗೆ ಹೋದ ಬಳಿಕ ತಮ್ಮ ಹಳೆ ಕ್ಯಾತೆ ತೆಗೆದಿದ್ದಾರೆ.

' ಏನೇ ಮಾಡಿದರೂ ನಾಯಿ ಬಾಲ ಡೊಂಕೇ' ಎನ್ನುವ ಗಾದೆ ಮಾತು ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿಗೆ ಸರಿಯಾಗಿ ಒಪ್ಪುತ್ತದೆ. ಭಾರತದ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎದುರಾದ ಸೋಲಿನ ನಂತರ ಇದೀಗ ಪಾಕಿಸ್ತಾನದಲ್ಲಿ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಆಫ್ರಿದಿ, ಭಾರತೀಯರಿಗೆ ವಿಶಾಲ ಹೃದಯವಿಲ್ಲ ಎಂದು ಕಿಡಿ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಮಾಧ್ಯಮದವರನ್ನು ತೀವ್ರ ಟೀಕೆಗೆ ಗುರಿ ಮಾಡಿರುವ ಆಫ್ರಿದಿ, ಭಾರತಕ್ಕೆ ಹೋಲಿಸಿದರೆ ನಮ್ಮ ಮಾಧ್ಯಮವವು ನೂರು ಪಟ್ಟು ಉತ್ತಮವಾಗಿದೆ ಎಂದಿದ್ದಾರೆ.

ನಿಜ ಹೇಳಬೇಕೆಂದರೆ ಭಾರತೀಯರು ನಮ್ಮ ಪಾಕಿಸ್ತಾನದ ಹಾಗೆ ವಿಶಾಲ ಹೃದಯಿಗಳಲ್ಲ. ಅಲ್ಲಾಹು ನಮಗೆ ನೀಡಿದಂತಹ ವಿಶಾಲ ಹೃದಯವನ್ನು ಭಾರತತೀಯರು ಹೊಂದಿಲ್ಲ ಎಂದವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಭಾರತೀಯರ ಜತೆ ಬೆರೆಯುವುದು ಕಷ್ಟ. ಮಾತುಕತೆಯಲ್ಲಿ ಯಾವುದೇ ಪ್ರಯೋಜನವಿಲ್ಲ. ನೀವೇ ನೋಡಿ ಕಳೆದ 60 ವರ್ಷಗಳಲ್ಲಿ ಎಷ್ಟು ಉತ್ತಮವಾಗಿ ಸಾಗಿತ್ತೋ ಅಷ್ಟೇ ಹದೆಗೆಟ್ಟಿದೆ ಎಂದವರು ಉಭಯ ದೇಶಗಳ ಸಂಬಂಧದ ಬಗ್ಗೆ ಮಾತನಾಡಿದರು.

ಅಲ್ಲಿನ ಮಾಧ್ಯಮಗಳು ಭಾರತ-ಪಾಕ್ ಪಂದ್ಯವನ್ನು ನಗೆಟಿವ್ ಆಗಿ ತೋರಿಸುತ್ತಿದ್ದವು. ಜನರು ಇದನ್ನು ಬಯಸದಿದ್ದರೂ ಅಲ್ಲಿನ ಮಾಧ್ಯಮಗಳು ಉಭಯ ದೇಶಗಳ ಬಾಂಧವ್ಯವನ್ನು ಹದೆಗೆಡಿಸುತ್ತಿವೆ ಎಂದವರು ಗುಡಿಗಿದರು.

ಭಾರತದ ಜತೆ ಸ್ನೇಹ ಹಸ್ತ ಚಾಚೋದ್ರಲ್ಲಿ ಅರ್ಥವೇ ಇಲ್ಲ. ನಾವು ಎಷ್ಟೇ ಕೈಜೋಡಿಸಿದರೂ ಅಥವಾ ಪ್ರಯತ್ನಪಟ್ಟರೂ ಎಲ್ಲವೂ ವಿಫಲವಾಗಲಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments