Select Your Language

Notifications

webdunia
webdunia
webdunia
webdunia

ವಿಶ್ವಕಪ್: ಅತಿ ಹೆಚ್ಚು ರನ್‌ಗಳಿಕೆಯಲ್ಲಿ ಸಚಿನ್‌ಗೆ 2ನೇ ಸ್ಥಾನ

ವಿಶ್ವಕಪ್: ಅತಿ ಹೆಚ್ಚು ರನ್‌ಗಳಿಕೆಯಲ್ಲಿ ಸಚಿನ್‌ಗೆ 2ನೇ ಸ್ಥಾನ
ಮುಂಬೈ , ಭಾನುವಾರ, 3 ಏಪ್ರಿಲ್ 2011 (10:19 IST)
PTI
ಶ್ರೀಲಂಕಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 18 ರನ್‌ಗಳಿಗೆ ಔಟಾಗುವುದರೊಂದಿಗೆ ಸಚಿನ್, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಗೌರವಕ್ಕೆ ಪಾತ್ರರಾದರು.

ಸಚಿನ್ ತೆಂಡೂಲ್ಕರ್ ಎದುರಾಳಿ ತಂಡದ ಲಸಿತ್ ಮಾಲಿಂಗಾ ಬೌಲಿಂಗ್‌ನಲ್ಲಿ ಕುಮಾರ ಸಂಗಕ್ಕಾರ ಅವರಿಗೆ ಕ್ಯಾಚ್ ನೀಡಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನ್ನವ ಕೀರ್ತಿಯನ್ನು ಪಡೆಯಲು 19 ರನ್‌ ಕೊರತೆಯನ್ನು ಎದುರಿಸಿದರು.

ಶ್ರೀಲಂಕಾ ತಂಡದ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ ಪಂದ್ಯಾವಳಿಯಲ್ಲಿ 500 ರನ್‌ಗಳೊಂದಿಗೆ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಸಚಿನ್ 482 ರನ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು.

ಸಚಿನ್ ತೆಂಡೂಲ್ಕರ್, ತಮ್ಮ ಅಂತಾರಾಷ್ಟ್ರೀಯ ನೂರನೇ ಶತಕವನ್ನು ಮುಂದಿನ ಪಂದ್ಯಾವಳಿಗಳಲ್ಲಿ ನಿರೀಕ್ಷಿಸಬಹುದಾಗಿದೆ.ಇಲ್ಲಿಯವರೆಗೆ ಆರು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದು, 1996 ಮತ್ತು 2003ರ ವಿಶ್ವಕಪ್ ಆವೃತ್ತಿಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಗೌರವ ಪಡೆದಿದ್ದಾರೆ.

Share this Story:

Follow Webdunia kannada