Select Your Language

Notifications

webdunia
webdunia
webdunia
webdunia

ಸಚಿನ್ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ: ಮುರಳಿ

ಸಚಿನ್ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ: ಮುರಳಿ
ಮುಂಬೈ , ಶನಿವಾರ, 2 ಏಪ್ರಿಲ್ 2011 (13:01 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು ಬಣ್ಣಿಸಿರುವ ವಿಶ್ವ ವಿಖ್ಯಾತ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್, ಈ ದಿಗ್ಗಜ ಆಟಗಾರನ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಬಳಿಕ ನಿವೃತ್ತಿ ಹೊಂದಲಿರುವ ಮುರಳಿ, ಮುಂಬೈನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸಚಿನ್ ಸವಾಲನ್ನು ಎದುರಿಸಲಿದ್ದಾರೆ. ಸಚಿನ್ ಅವರಿಗೂ ಬಹುತೇಕ ಇದು ಕೊನೆಯ ವಿಶ್ವಕಪ್ ಎಂದೇ ಪರಿಗಣಿಸಲ್ಪಟ್ಟಿದೆ.

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಸಚಿನ್ ಕೂಡಾ ಒಬ್ಬರು. ಅವರ ದಾಖಲೆಗಳನ್ನು ಹೋಲಿಸಲು ಸಾಧ್ಯವಿಲ್ಲ ಎಂದು ಮುರಳಿ ಈ ದಿಗ್ಗಜ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಫೈನಲ್‌ನಲ್ಲಿ ಫೇವರಿಟ್ ಯಾವುದು ಎಂಬ ಪ್ರಶ್ನೆಗೆ, ನಮಗೆ ವಿಶ್ವಕಪ್‌ನ ಅಗತ್ಯವಿದೆ. ಅದಕ್ಕಾಗಿಯೇ ನಾವಿಲ್ಲಿಗೆ ಆಗಮಿಸಿದ್ದೇವೆ. ಭಾರತದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ಆದರೆ ಯಾವುದು ಕೂಡಾ ಸ್ಥಿರವಲ್ಲ ಎಂದವರು ಹೇಳಿದರು.

ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿಯೇ ಭಾರತದ ಈ ದಿಗ್ಗಜ ಆಟಗಾರ ಶತಕಗಳ ಶತಕ ಬಾರಿಸಲಿ ಎಂಬುದು ಶತಕೋಟಿ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

Share this Story:

Follow Webdunia kannada