Webdunia - Bharat's app for daily news and videos

Install App

ಸೋಲು ಗೆಲುವಿನ ವ್ಯತ್ಯಾಸಕ್ಕೆ ಪಠಾಣ್ ಕಾರಣ: ಸ್ಮಿತ್

Webdunia
ಬುಧವಾರ, 19 ಜನವರಿ 2011 (16:29 IST)
ಬಿರುಸಿನ ಶತಕಾರ್ಧ ಗಳಿಸಿದ ಯೂಸುಫ್ ಪಠಾಣ್ ಸೋಲು ಗೆಲುವಿನ ವ್ಯತ್ಯಾಸಕ್ಕೆ ಕಾರಣರಾದರು ಎಂದು ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ.

ಪಠಾಣ್ ಗಳಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡವು ತೃತೀಯ ಏಕದಿನವನ್ನು ಎರಡು ವಿಕೆಟುಗಳಿಂದ ವಶಪಡಿಸಿಕೊಂಡಿತ್ತಲ್ಲದೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-1ರ ಮುನ್ನಡೆ ದಾಖಲಿಸಿತ್ತು.

ಒಂದು ಹಂತದಲ್ಲಿ 93 ಐದು ವಿಕೆಟ್ ಕಳೆದುಕೊಂಡಿದ್ದ ಭಾರತ ಸಂಕಷ್ಟದಲ್ಲಿತ್ತು. ಆದರೆ ಆರನೇ ವಿಕೆಟ್ ಸುರೇಶ್ ರೈನಾ ಜತೆ ಸೇರಿ ಮಹತ್ವದ 75 ರನ್ನುಗಳ ಜತೆಯಾಟ ನೀಡಿದ ಪಠಾಣ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸೋಲು ನಿರಾಸೆಯನ್ನುಂಟು ಮಾಡಿದೆ. ಪಠಾಣ್ ಅಮೋಘ ಇನ್ನಿಂಗ್ಸ್‌ನಿಂದಾಗಿ ನಾವು 20 ರನ್ನುಗಳ ಹಿನ್ನೆಡೆ ಅನುಭವಿಸಿದೆವು ಎಂದು ನಾಯಕ ಸ್ಮಿತ್ ಸೋಲಿನ ನಂತರ ಉತ್ತರಿಸಿದರು.

ಇದು ಏಕದಿನಕ್ಕೆ ನಿರ್ಮಿಸಲಾದ ಶ್ರೇಷ್ಠ ವಿಕೆಟ್ ಆಗಿರಲಿಲ್ಲ. ಪಠಾಣ್ ಹೊರತುಪಡಿಸಿ ಇತರೆಲ್ಲ ಬ್ಯಾಟ್ಸ್‌ಮನ್‌ಗಳು ಸಂಕಷ್ಟ ಎದುರಿಸಿದರು. ಆದರೆ ಪಠಾಣ್ ಮಾತ್ರ ಸುಲಭವಾಗಿ ಬ್ಯಾಟ್ ಬೀಸಿದರು ಎಂದವರು ಸೇರಿಸಿದರು.

ಅದೇ ಹೊತ್ತಿಗೆ ಅಮೋಘ ಪ್ರದರ್ಶನ ನೀಡಿದ ವೇಗಿ ಮೊರ್ನೆ ಮೊರ್ಕೆಲ್ ಅವರನ್ನು ನಾಯಕ ಸ್ಮಿತ್ ಪ್ರಶಂಸಿದರು. ಎಂದಿನಂತೆ ಮೊರ್ಕೆಲ್ ಅದ್ಭುತವಾಗಿ ಮೂಡಿಬಂದರು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಾಗಿದೆ. ತಂಡವನ್ನು ಪುನಃ ಕಟ್ಟುವ ಮೂಲಕ ಮುಂದಿನ ಪಂದ್ಯಕ್ಕೆ ಸಿದ್ಧವಾಗಬೇಕಾಗಿದೆ ಎಂದವರು ಹೇಳಿದರು.

ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಪಠಾಣ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಸಿದರು. ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರಯತ್ನವಾಗಿತ್ತು. ಕೆಳ ಕ್ರಮಾಂಕ ಆಟಗಾರರು ಚೆನ್ನಾಗಿ ಆಡಿದರು. ಆದರೆ ಪಠಾಣ್ 'ಸೂಪರ್ಬ್' ಎಂದರು.

ಪಠಾಣ್ ಸಹಜ ಆಟವಾಡಿದರು. ಅವರು ಇದೇ ಆಟವನ್ನು ಮುಂದುವರಿಸಬೇಕೆಂಬುದು ನನ್ನ ಬಯಕೆಯಾಗಿದೆ ಎಂದವರು ಹೇಳಿದರು.

ಪಂದ್ಯಶ್ರೇಷ್ಠ ಪುರಸ್ಕೃತರಾದ ಪಠಾಣ್ ಕೂಡಾ ಇದನ್ನೇ ಒತ್ತಿ ಹೇಳಿದರು. ನಾನು ನನ್ನ ಸಹಜ ಆಟವಾಡಿದೆ. ನನ್ನತ್ತ ಬಂದ ಎಸೆತವನ್ನು ದಂಡಿಸುವುದೇ ನನ್ನ ಕೆಲಸವಾಗಿತ್ತು ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments