Webdunia - Bharat's app for daily news and videos

Install App

ವಿಶ್ವಕಪ್‌ಗೆ ಶ್ರೇಷ್ಠ ತಂಡವನ್ನೇ ಆರಿಸಲಾಗಿದೆ: ಶ್ರೀಕಾಂತ್

Webdunia
ಸೋಮವಾರ, 17 ಜನವರಿ 2011 (17:51 IST)
ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಆರಿಸಲಾಗಿರುವ 15 ಮಂದಿ ಸದಸ್ಯರ ತಂಡವನ್ನು ಸಮರ್ಥಿಸಿಕೊಂಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್, ಮುಂಬರುವ ಮಹತ್ತರ ಕೂಟಕ್ಕಾಗಿ ಶ್ರೇಷ್ಠ ತಂಡವನ್ನೇ ಆರಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಫೆಬ್ರವರಿ 19ರಿಂದ ಎಪ್ರಿಲ್ 2ರ ವರೆಗೆ ಏಷ್ಯಾ ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಸಹಿತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆತಿಥ್ಯ ವಹಿಸುತ್ತಿವೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾರತ ತನ್ನ ಚೊಚ್ಚಲ ಏಕದಿನ ವಿಶ್ವಕಪನ್ನು 1983ರಲ್ಲಿ ಗೆದ್ದುಕೊಂಡಿತ್ತು. ಇದೀಗ ಮತ್ತೆ 28 ವರ್ಷಗಳ ನಂತರ ಧೋನಿ ಪಡೆ ವಿಶ್ವಕಪ್ ಗೆಲ್ಲಲಿದೆ ಎಂದು ಶ್ರೀಕಾಂತ್ ಭವಿಷ್ಯ ನುಡಿದರು.

ವಿಶ್ವಕಪ್‌ಗೆ ಗೆಲುವಿನ ಶ್ರೇಷ್ಠ ತಂಡವನ್ನೇ ಆರಿಸಲಾಗಿದ್ದು, ಸಮತೋಲನದಿಂದ ಕೂಡಿದೆ. ಸುದೀರ್ಘ ಅವಧಿಯ ಚರ್ಚೆಯ ನಂತರ ತಂಡದ ಆಯ್ಕೆ ಮಾಡಲಾಗಿದೆ. ವಿಕೆಟ್‌ನ ಪರಿಸ್ಥಿತಿ, ಎದುರಾಳಿ ತಂಡಗಳನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆಯ ತಂಡ ಆರಿಸಲಾಗಿದೆ ಎಂದವರು ವಿವರಿಸಿದರು.

ಉತ್ತರ ಪ್ರದೇಶ ಸ್ಪಿನ್ನರ್ ಪಿಯೂಷ್ ಚಾವ್ಲಾರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆ ಸಮಿತಿಯು ಅಚ್ಚರಿ ಮೂಡಿಸಿತ್ತು. ಅದೇ ಹೊತ್ತಿಗೆ ಮುಂಬೈನ ರೋಹಿತ್ ಶರ್ಮಾ ಮತ್ತು ಕೇರಳ ಸ್ಪೀಡ್‌ಸ್ಟಾರ್ ಎಸ್. ಶ್ರೀಶಾಂತ್ ಅವರಿಗೆ ಕೊಕ್ ನೀಡಲಾಗಿತ್ತು. ಆದರೆ ಭಾರತೀಯ ವಿಕೆಟುಗಳನ್ನೇ ಪರಿಗಣಿಸಿ ಸ್ಪೆಷಲಿಸ್ಟ್ ಸ್ಪಿನ್ನರುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಶ್ರೀಕಾಂತ್ ಉತ್ತರಿಸಿದರು.

ನಾವು ಭಾರತದಲ್ಲಿ ಆಡುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಭಾರತೀಯ ಟರ್ನಿಂಗ್ ವಿಕೆಟುಗಳಲ್ಲಿ ಸ್ಪಿನ್ನರುಗಳು ಬಹುದೊಡ್ಡ ಜವಾಬ್ದಾರಿ ನಿರ್ವಹಿಸಬಲ್ಲರು. ಖಂಡಿತವಾಗಿಯೂ ನಮ್ಮದ್ದು ಸಮತೋಲಿತ ತಂಡ; ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತೀಯ ತಂಡ ವಿಶ್ವಕಪ್ ಗೆಲ್ಲಿಸಿಕೊಡಲಿದೆಯೆಂಬ ಭರವಸೆ ನನಗಿದೆ ಎಂದವರು ಸೇರಿಸಿದರು.

ಕಳೆದೆರಡು ವರ್ಷಗಳಿಂದ ಟೆಸ್ಟ್ ಹಾಗೂ ಏಕದಿನದಲ್ಲಿ ಭಾರತ ಶ್ರೇಷ್ಠ ಪ್ರದರ್ಶನ ನೀಡುತ್ತಾ ಬಂದಿದೆ. ಹೊರ ದೇಶದಲ್ಲಿಯೂ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹಾಗೆಯೇ ತವರಿನ ಪ್ರೇಕ್ಷಕರ ಮುಂದೆ ಈ ಬಾರಿ ವಿಶ್ವಕಪ್ ಗೆಲ್ಲುವ ನಂಬಿಕೆಯಿದೆ ಎಂದಿದ್ದಾರೆ.

ಖಂಡಿತವಾಗಿಯೂ ತವರಿನಲ್ಲಿ ಪರಿಸ್ಥಿತಿಯಲ್ಲಿ ಆಡಲಿರುವ ಭಾರತ ಮೇಲೆ ಸಾಕಷ್ಟು ಒತ್ತಡವಿದೆ. ಆಯ್ಕೆ ಸಮಿತಿಯ ಮೇಲೂ ಸಾಕಷ್ಟು ಒತ್ತಡವಿದೆ. ಆದರೆ 1983 ವಿಶ್ವಕಪ್ ಸಾಧನೆಯನ್ನು ಮತ್ತೆ ಧೋನಿ ಬಳಗ ಎತ್ತಿ ಹಿಡಿಯಲಿದೆ ಎಂದರು.

ಎಪ್ರಿಲ್‌ನಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದಲ್ಲಿ ಅದು ನಮ್ಮ ಪಾಲಿಗೆ (ಆಯ್ಕೆ ಸಮಿತಿ) ಸುವರ್ಣ ಕ್ಷಣವಾಗಿರಲಿದೆ. ಕ್ರಿಕೆಟ್‌ಗೆ ಸಂಬಂಧಪಟ್ಟ ಯಾವುದೇ ಪ್ರಶಸ್ತಿ ಗೆಲ್ಲುವುದು ಭಾರತೀಯರಾದ ನಮಗೆ ಹೆಮ್ಮೆ. ನಾವು ಯಾಕೆ ವಿಶ್ವಕಪ್ ಗೆಲ್ಲಬಾರದು? ಇಂತಹ ನಂಬಿಕೆಯು ಕೇವಲ ಆಟಗಾರರಲ್ಲಿ ಮಾತ್ರವಲ್ಲ ಇಡೀ ದೇಶವೇ ಹೊಂದಿದೆ ಎಂದರು ಶ್ರೀಕಾಂತ್.

ಗಾಯದ ಸಮಸ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕಟುವಾಗಿ ಪ್ರತಿಕ್ರಿಯಿಸಿದ ಶ್ರೀಕಾಂತ್, ಎಲ್ಲ ತಂಡಗಳು ಗಾಯದ ಸಮಸ್ಯೆ ಹೊಂದಿದ್ದು, ಕ್ರಿಕೆಟ್‌ನಲ್ಲಿ ಇದು ಸಾಮಾನ್ಯ ಎಂದರು. ಇಂತಹ ನಕರಾತ್ಮಕ ಪ್ರಶ್ನೆ ಕೇಳುವ ಬದಲು ಸಕರಾತ್ಮಕವಾಗಿ ಮುಂದುವರಿಯಿರಿ ಎಂದು ಮಾಧ್ಯಮದವರಿಗೆ ಸಲಹೆ ಮಾಡಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments