Select Your Language

Notifications

webdunia
webdunia
webdunia
webdunia

2012ರ ಟ್ವೆಂಟಿ-20 ವಿಶ್ವಕಪ್ ನಂತರ ನಿವೃತ್ತಿ: ರಜಾಕ್

2012ರ ಟ್ವೆಂಟಿ-20 ವಿಶ್ವಕಪ್ ನಂತರ ನಿವೃತ್ತಿ: ರಜಾಕ್
ಕರಾಚಿ , ಭಾನುವಾರ, 16 ಜನವರಿ 2011 (09:53 IST)
2012ರ ಟ್ವೆಂಟಿ-20 ವಿಶ್ವಕಪ್ ನಂತರ ಅಂತರಾಷ್ಟ್ರೀಯ ಕ್ರೀಡಾ ಜೀವನಕ್ಕೆ ವಿದಾಯ ಹಾಡುವುದಾಗಿ ಪಾಕಿಸ್ತಾನದ ಆಲ್‌ರೌಂಡರ್ ಆಟಗಾರ ಅಬ್ದುಲ್ ರಜಾಕ್ ಪ್ರಕಟಿಸಿದ್ದಾರೆ.

ಒಂದು ವೇಳೆ ಆ ಸಂದರ್ಭದಲ್ಲಿ ನಾನು ಕ್ರಿಕೆಟ್‌ನ ಅಗ್ರ ಶಿಖರದಲ್ಲಿದ್ದರೂ ನಿವೃತ್ತಿ ಘೋಷಿಸುವೆನು ಎಂದು 31ರ ಪಾಕ್ ಆಲ್‌ರೌಂಡರ್ ಆಟಗಾರ ನುಡಿದರು.

ಸದ್ಯ ಸಮಕಾಲೀನ ಕ್ರಿಕೆಟ್‌ನತ್ತ ಗಮನ ಹರಿಸುತ್ತಿದ್ದು, 2012ರ ಟ್ವೆಂಟಿ-20 ವಿಶ್ವಕಪ್ ನಂತರ ವಿದಾಯ ಹೇಳಲು ಯೋಜನೆ ಇರಿಸಿಕೊಂಡಿದ್ದೇನೆ ಎಂದವರು ತಿಳಿಸಿದರು.

ಯಾವತ್ತೇ ಆದರೂ ಹಿರಿಯ ಆಟಗಾರರಿಗೆ ನಿವೃತ್ತಿ ನಿರ್ಧಾರ ತಳೆಯುವುದು ಕಠಿಣವಾಗಿರಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿರುವ ರಜಾಕ್ ನುಡಿದರು.

ಆದರೆ ಇವೆಲ್ಲದರಲ್ಲೂ ಫಿಟೆನೆಸ್ ಕಳವಳಕಾರಿ ವಿಷಯವಾಗಿರಲಿದೆ. ನನ್ನ ಫಾರ್ಮ್ ಮತ್ತು ಫಿಟ್‌ನೆಸ್ ಮನದಲ್ಲಿಟ್ಟುಕೊಂಡು 2012ರ ಚುಟುಕು ವಿಶ್ವಕಪ್ ನಂತರ ನಿವೃತ್ತಿ ಹಾಡಲು ನಿರ್ಧರಿಸಿದ್ದೇನೆ. ಈ ಸಂದರ್ಭದಲ್ಲಿ ಶ್ರೇಷ್ಠ ಫಾರ್ಮ್‌ನಲ್ಲಿರಬೇಕೆಂಬುದು ನನ್ನ ಬಯಕೆಯಾಗಿದೆ ಎಂದರು.

Share this Story:

Follow Webdunia kannada