ನಿಧಾನಗತಿಯ 100 ರನ್; ಮೆಕ್‌ಗ್ರಾಥ್ ಮೀರಿಸಿದ ಮಾರ್ಟಿನ್
ವೆಲ್ಲಿಂಗ್ಟನ್ , ಶುಕ್ರವಾರ, 14 ಜನವರಿ 2011 (13:45 IST)
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡುವ ಮೂಲಕ ನಿಧಾನಗತಿಯಲ್ಲಿ 100 ರನ್ ತಲುಪಿದ ಆಟಗಾರ ಎಂಬ ವಿಭಿನ್ನವಾದ ದಾಖಲೆಯನ್ನು ನ್ಯೂಜಿಲೆಂಡ್‌ನ ವೇಗದ ಬೌಲರ್ ಕ್ರಿಸ್ ಮಾರ್ಟಿನ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾಥ್ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಹ್ಯಾಮಿಂಲ್ಟನ್‌ನಲ್ಲಿ ಪಾಕಿಸ್ತಾನ ವಿರುದ್ಧದ ತನ್ನ 60ನೇ ಪಂದ್ಯದಲ್ಲಿ ಮಾರ್ಟಿನ್ ಈ ವಿಶಿಷ್ಟ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ 32 ಪಂದ್ಯಗಳಲ್ಲಿ 100 ರನ್ನುಗಳ ಸಾಧನೆ ಮಾಡಿದ್ದರು. ಆದರೆ ಬರಿ 2.47ರ ಸರಾಸರಿಯಲ್ಲಿ ರನ್ ಗಳಿಸಿರುವ ಮಾರ್ಟಿನ್ ಈ ದಾಖಲೆ ಅಳಿಸಿ ಹಾಕಿದ್ದಾರೆ. ಅಂದ ಹಾಗೆ ಟೆಸ್ಟ್‌ನಲ್ಲಿನ ಅವರ ಗರಿಷ್ಠ ಮೊತ್ತ ಅಜೇಯ 12. 60 ಟೆಸ್ಟ್‌ಗಳಲ್ಲಿ ಒಟ್ಟು 87 ಟೆಸ್ಟ್‌ಗಳನ್ನು ಆಡಿರುವ ಮಾರ್ಟಿನ್ 45 ಬಾರಿ ಅಜೇಯರಾಗುಳಿದಿದ್ದಾರೆ. ಇದು ಕೂಡಾ ಕೊನೆಯ ಕ್ರಮಾಂಕದ ಮಾರ್ಟಿನ್ ಮಾಡಿರುವ ಮತ್ತೊಂದು ಸಾಧನೆಯಾಗಿದೆ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ