Webdunia - Bharat's app for daily news and videos

Install App

ಧೋನಿ ಮತ್ತು ಚೆನ್ನೈ ತಂಡವನ್ನು ಮಿಸ್ ಮಾಡಿದೆ: ಮುರಳಿ

Webdunia
ಬುಧವಾರ, 12 ಜನವರಿ 2011 (11:56 IST)
ಐಪಿಎಲ್ ನಾಲ್ಕನೇ ಆವತ್ತಿಗಾಗಿನ ಹರಾಜಿನಲ್ಲಿ ನೂತನ ಕೊಚ್ಚಿ ಫ್ರಾಂಚೈಸಿ ಪಾಲಾಗಿರುವ ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್, ಈ ಹಿಂದಿನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಬಹಳಷ್ಟು ಮಿಸ್ ಮಾಡಲಿದ್ದೇನೆ ಎಂದಿದ್ದಾರೆ.

ಐಪಿಎಲ್ ಮೂರನೇ ಆವೃತ್ತಿಯಲ್ಲಿ ಮತ್ತು ಚಾಂಪಿಯನ್ಸ್ ಲೀಗ್‌ನಲ್ಲಿ ಚೆನ್ನೈ ಚಾಂಪಿಯನ್ ಪಟ್ಟಕ್ಕೇರಲು ಮುರಳೀಧರನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ಬಾರಿ 1.1 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಮುರಳಿ ಅವರನ್ನು ಕೊಚ್ಚಿ ಫ್ರಾಂಚೈಸಿ ಖರೀದಿಸಿದೆ.

ಚೆನ್ನೈ ತಂಡ ಅದ್ಭುತ ಕ್ಯಾಪ್ಟನ್‌ರನ್ನು ಹೊಂದಿದೆ. ಅತ್ಯುತ್ತಮ ತಂಡ ಮತ್ತು ಅಮೋಘ ಬೆಂಬಲವಿದೆ. ಕಳೆದ ವರ್ಷ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಹಾಗೆಯೇ ಹಲವು ವಿಕೆಟ್ ಪಡೆಯಲು ಯಶಸ್ವಿಯಾಗಿದ್ದೇನೆ ಎಂದು ಏಕದಿನದಲ್ಲಿ 515 ಮತ್ತು ಟೆಸ್ಟ್‌ನಲ್ಲಿ 800 ವಿಕೆಟ್ ಕಿತ್ತಿರುವ ಮುರಳಿ ನುಡಿದರು.

ನಾನು ಕಳೆದ ಮೂರು ವರ್ಷಗಳಿಂದ ಚೆನ್ನೈ ಪರ ಆಡುತ್ತಿದ್ದೇನೆ. ಹಾಗೆಯೇ ಹಲವು ಸಂತಸ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಚೆನ್ನೈ ಮೂಲದವರೇ ಆಗಿರುವ ನನ್ನ ಹೆಂಡತಿ ಕೂಡಾ ತಂಡ ಬದಲಾವಣೆಯಿಂದ ಗೊಂದಲಕ್ಕೀಡಾಗಿದ್ದಾರೆ. ಆದರೆ ಆಟದಲ್ಲಿ ಇದು ಸಾಮಾನ್ಯ. ಚೆನ್ನೈ ತಂಡ, ಸಹ ಆಟಗಾರರು ಹಾಗೂ ಅದ್ಭುತ ನಾಯಕ ಧೋನಿ ಅವರನ್ನು ಮಿಸ್ ಮಾಡಲಿದ್ದೇನೆ ಎಂದರು.

ನೂತನ ಫ್ರಾಂಚೈಸಿ ಬಗ್ಗೆ ಮಾತನಾಡಿದ ಅವರು, ಕೊಚ್ಚಿ ಹೊಸ ತಂಡ. ಹೀಗಾಗಿ ನಮಗೆ ಹೊಸ ನಾಯಕ ಹೊಸ ಗುರಿಗಳಿವೆ. ತಂಡದ ಬಗ್ಗೆ ಉತ್ಸಾಹಿತನಾಗಿದ್ದೇನೆ. ನನ್ನ ಶ್ರೇಷ್ಠ ನಿರ್ವಹಣೆ ನೀಡಲು ಯತ್ನಿಸಲಿದ್ದೇನೆ. ತವರಿನಲ್ಲಿರುವ ಅಂತಹುದೇ ವಾತಾವರಣ ಕೊಚ್ಚಿಯಲ್ಲಿದೆ. ಹೀಗಾಗಿ ಬೇಗನೆ ಹೊಂದಿಕೊಳ್ಳಬಹುದು. ಹಾಗೆಯೇ ಅಲ್ಲಿನ ಜನರಿಗೆ ನಮ್ಮ ಭಾಷೆ (ತಮಿಳು) ಅರ್ಥವಾಗಲಿದೆಯೆಂಬ ವಿಶ್ವಾಸವಿದೆ ಎಂದರು.

ಮುಂದಿನ 2-3 ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂದುವರಿಯುವುದು ನನ್ನ ಬಯಕೆಯಾಗಿದೆ. ಇದಕ್ಕಾಗಿ ನನ್ನ ಅನುಭವ ಹಾಗೂ ಸಾಮರ್ಥ್ಯ ವಿನಿಯೋಗಿಸಲಿದ್ದೇನೆ. ನನ್ನ ಮೇಲೆ ಕೊಚ್ಚಿ ತಂಡ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಲಾರೆ ಎಂದರು.

ಕೊಚ್ಚಿ ತಂಡದಲ್ಲಿ ಮಹೇಲಾ ಜಯವರ್ಧನೆ, ಬ್ರೆಂಡನ್ ಮೆಕಲಮ್, ವಿವಿಎಸ್ ಲಕ್ಷ್ಮಣ್ ಮತ್ತು ಶ್ರೀಶಾಂತ್ ಅವರಂತಹ ಅನುಭವಿ ಆಟಗಾರರಿದ್ದಾರೆ. ಆದರೆ ತಂಡಕ್ಕೆ ಪ್ರತಿಭಾನ್ವಿತ ಭಾರತ ದೇಶಿಯ ಯುವ ಆಟಗಾರರ ಅಗತ್ಯವಿದೆ ಎಂದರು.

ಮುಂಬರುವ ವಿಶ್ವಕಪ್ ಬಗ್ಗೆ ಮಾತನಾಡಿದ ಅವರು, ಭಾರತ ಹಾಟ್ ಫೆವರೀಟ್. ಆದರೆ ಲಂಕಾ ಕೂಡಾ ಉತ್ತಮ ತಂಡವನ್ನು ಹೊಂದಿದೆ. ತಂಡದಲ್ಲಿ ಸ್ಥಾನ ಗಿಟ್ಟಿಸಿರುವುದು ಸಂತಸ ತಂದಿದೆ. ಹಾಗೆಯೇ 96ರ ವಿಶ್ವಕಪ್ ವಿಜೇತ ಲಂಕಾ ತಂಡದ ಸದಸ್ಯನಾಗಿರುವುದು ನನ್ನ ಅದೃಷ್ಟ. ಹಾಗೆಯೇ ನನ್ನ ಕೊನೆಯ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ ಎಂದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments