Webdunia - Bharat's app for daily news and videos

Install App

ಲಂಕಾ ವಿಶ್ವಕಪ್ ತಂಡದಲ್ಲಿಲ್ಲ ಜಯಸೂರ್ಯ, ವಾಸ್

Webdunia
ಭಾನುವಾರ, 9 ಜನವರಿ 2011 (09:02 IST)
1996 ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಸದಸ್ಯರಾಗಿದ್ದ ಸನತ್ ಜಯಸೂರ್ಯ ಮತ್ತು ಚಾಮಿಂಡಾ ವಾಸ್ ಈ ಬಾರಿಯ ವಿಶ್ವಕಪ್‌ಗಾಗಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಪ್ರತಿಷ್ಠಿತ ವಿಶ್ವಕಪ್‌ಗೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಇದರಂತೆ 15 ಮಂದಿ ಸದಸ್ಯರ ತಂಡವನ್ನು ಲಂಕಾ ಪ್ರಕಟಿಸಿದೆ.

1996 ರ ವಿಶ್ವಕಪ್ ಗೆಲುವಿನಲ್ಲಿ ಜಯಸೂರ್ಯ ಮತ್ತು ವಾಸ್ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ಈ ಬಾರಿಯ ಸಂಭವನೀಯರ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದರು. ಆದರೆ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

1996 ರ ವಿಶ್ವಕಪ್ ತಂಡದಲ್ಲಿದ್ದ ಮತ್ತೊಬ್ಬ ಬೌಲರ್ ಮುತ್ತಯ್ಯ ಮುರಳೀಧನರ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಅಚ್ಚರಿಯೆಂಬಂತೆ ಸೂರಜ್ ರಣಧೀವ್ ಸ್ಥಾನಕ್ಕೆ ರಂಗನಾ ಹೇರಾತ್ ಆಯ್ಕೆಯಾಗಿದ್ದಾರೆ.

ತಂಡ ಇಂತಿದೆ:
ಕುಮಾರ ಸಂಗಕ್ಕರ (ನಾಯಕ), ಮಹೇಲಾ ಜಯವರ್ಧನೆ, ಉಪುಲ್ ತರಂಗ, ತಿಲಕರತ್ನೆ ದಿಲ್‌ಶಾನ್, ತಿಲನ್ ಸಮರವೀರ, ಚಮರ ಸಿಲ್ವಾ, ಚಮರ ಕಪುಗೇಡರಾ, ಆಂಗಲೋ ಮ್ಯಾಥ್ಯೂಸ್, ತಿಸಾರಾ ಪರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫೆರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡೀಸ್ ಮತ್ತು ರಂಗನಾ ಹೇರಾತ್.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments