Select Your Language

Notifications

webdunia
webdunia
webdunia
webdunia

ಸಚಿನ್ ವಿಕೆಟ್ ಪಡೆಯಲಿಕ್ಕಾಗಿ ಚೈತನ್ಯ ಹಾಳು ಮಾಡುವುದ್ಯಾಕೆ?

ಸಚಿನ್ ವಿಕೆಟ್ ಪಡೆಯಲಿಕ್ಕಾಗಿ ಚೈತನ್ಯ ಹಾಳು ಮಾಡುವುದ್ಯಾಕೆ?
ಕೇಪ್‌ಟೌನ್ , ಬುಧವಾರ, 5 ಜನವರಿ 2011 (12:05 IST)
ಹೌದು, ಸಚಿನ್ ವಿಕೆಟ್ ಪಡೆಯುವುದಕ್ಕಾಗಿ ಚೈತನ್ಯ ಹಾಳು ಮಾಡುವುದ್ಯಾಕೆ? ಹೀಗೆಂದವರು ಪ್ರಸ್ತುತ ವಿಶ್ವ ನಂಬರ್ ವನ್ ಬೌಲರ್ ಆಗಿರುವ ದಕ್ಷಿಣ ಆಫ್ರಿಕಾ ಬಲಗೈ ವೇಗದ ಬೌಲರ್ ಡೇಲ್ ಸ್ಟೈನ್.

ಇಲ್ಲಿ ನಡೆಯುತ್ತಿರುವ ನಿರ್ಣಾಣಕ ಟೆಸ್ಟ್ ಪಂದ್ಯದಲ್ಲಿ ಲಿಟ್ಲ್ ಮಾಸ್ಟರ್ ಅವರನ್ನು ತಮ್ಮ ಸ್ವಿಂಗ್ ಹಾಗೂ ಗತಿಯಿಂದಲೇ ಹಲವು ಬಾರಿ ಕಾಡಿದ್ದ ಸ್ಟೈನ್ ಕೊನೆಗೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.

ಇವರಿಬ್ಬರ ನಡುವೆ ಸ್ಪರ್ಧಾತ್ಮಕ ಪೈಪೋಟಿ ಕಂಡುಬಂದಿತ್ತು. ಆದರೆ ಡೇಲ್ ಸ್ಟೈನ್ ಅವರ ವೈವಿಧ್ಯಮಯ ಎಸೆತಗಳನ್ನು ದಿಟ್ಟವಾಗಿ ಎದುರಿಸಿದ್ದ ಮುಂಬೈಕರ್ ಆಕರ್ಷಕ ಶತಕ ದಾಖಲಿಸಿದ್ದರು.

PTI
ಈ ಬಗ್ಗೆ ಪಂದ್ಯದ ನಂತರ ಪ್ರತಿಕ್ರಿಯೆ ನೀಡಿರುವ ಸ್ಟೈನ್, ಸಚಿನ್‌ರನ್ನು ಔಟ್ ಮಾಡಲು ಯತ್ನಿಸುವ ಬದಲು ಇತರ ಆಟಗಾರರನ್ನು ಗುರಿಯಾಗಿಸುವುದು ಲೇಸು ಎಂದು ಉತ್ತರಿಸಿದ್ದಾರೆ.

ಸಚಿನ್ ಶ್ರೇಷ್ಠ ಆಟಗಾರ. ಅವರಿಗೆ ಬೌಲಿಂಗ್ ಮಾಡುವ ಮೂಲಕ ಚೈತನ್ಯ ವ್ಯರ್ಥ ಮಾಡಬಹದು. ಇದಕ್ಕಿಂತ ಉತ್ತಮ ಇತರ ಆಟಗಾರರನ್ನು ಗುರಿಯಾಗಿಸುವುದು ಎಂದವರು ಹೇಳಿದರು. ಆದರೂ ಸಚಿನ್ ಅಥವಾ ನಂ.11 ಆಟಗಾರನಿಗೆ ಉತ್ತಮ ದಾಳಿ ಸಂಘಸಿದರೆ ಅದು ಉತ್ತಮ ಬಾಲ್ ಆಗಿರುತ್ತದೆ ಎಂದವರು ಸೇರಿಸಿದರು.

ಅದೇ ಹೊತ್ತಿಗೆ ಸರಣಿಯಲ್ಲಿನ ತಮ್ಮ ಪ್ರದರ್ಶನ ಬಗ್ಗೆ ಸ್ಟೈನ್ ತೃಪ್ತಿ ವ್ಯಕ್ತಪಡಿಸಿದರು. ವಿಕೆಟ್ ಪಡೆಯುವುದು ಯಾವತ್ತೂ ಉತ್ತಮವಾಗಿರುತ್ತದೆ. ಕಾಲಿಸ್ ಸೇವೆ ಕಳೆದುಕೊಂಡಿದ್ದರಿಂದ ಕೆಲಸ ಮತ್ತಷ್ಟು ಕಷ್ಟಕರವಾಗಿತ್ತು ಎಂದು 75ಕ್ಕೆ ಐದು ವಿಕೆಟ್ ಕಿತ್ತಿದ್ದ ಸ್ಟೈನ್ ನುಡಿದರು.

ಉತ್ತಮ ಲೈನ್‌ನಲ್ಲಿ ದಾಳಿ ನಡೆಸಿಯೂ ವಿಕೆಟ್ ಸಿಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ತಲೆಕೆಡಿಸಿಕೊಳ್ಳುವ ಮೂಲಕ ಸಮಯ ವ್ಯಯ ಮಾಡಬಾರದು ಎಂದರು.

ವಿಕೆಟ್ ಸಿಗುದಿಲ್ಲವೆಂದು ತಲೆ ಕೆಡಿಸಿಕೊಳ್ಳಬಾರದು. ಅಬುದಾಬಿ ಮತ್ತು ದುಬೈನಲ್ಲಿ ನಾನು ವಿಕೆಟ್ ಪಡೆಯಲು ವಿಫಲನಾಗಿದ್ದೆ. ಆದರೆ ದೀರ್ಫ ಕಾಲ ಕ್ರಿಕೆಟ್‌ನಲ್ಲಿ ಉಳಿಯಬೇಕಾದರೆ ಉತ್ತಮ ಲೈನ್‌ನಲ್ಲೇ ಚೆಂಡು ಎಸೆಯಬೇಕು; ಆವಾಗ ವಿಕೆಟುಗಳು ತನ್ನಿಂದ ತಾನೇ ಸಿಗುತ್ತವೆ ಎಂದರು.

Share this Story:

Follow Webdunia kannada