Webdunia - Bharat's app for daily news and videos

Install App

ಕಾಲಿಸ್ ಶತಕದಾಸರೆ; ದ.ಆಫ್ರಿಕಾ 362ಕ್ಕೆ ಸರ್ವಪತನ

Webdunia
ಸೋಮವಾರ, 3 ಜನವರಿ 2011 (17:57 IST)
ಇತ್ತೀಚೆಗಿನ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ಮಧ್ಯಮ ಕ್ರಮಾಂಕದ ಆಟಗಾರ ಜಾಕ್ವಾಸ್ ಕಾಲಿಸ್ ಬಾರಿಸಿರುವ ಅಮೋಘ ಶತಕದ (161) ನೆರವಿನೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಇಲ್ಲಿ ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 362 ರನ್ನುಗಳ ಗೌರವಯುತ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

ಈ ಮೊದಲು ದಿನದಾಟದ ಆರಂಭದಲ್ಲೇ ಬಲಗೈ ವೇಗದ ಬೌಲರ್ ಎಸ್. ಶ್ರೀಶಾಂತ್ (114ಕ್ಕೆ 5 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿದ್ದ ಹರಿಣಗಳು ಹಿನ್ನೆಡೆ ಅನುಭವಿಸಿತ್ತು. ಆದರೆ ಬಾಲಂಗೋಚಿಗಳ ಬೆಂಬಲದೊಂದಿಗೆ ನೆಲಕಚ್ಚಿ ಆಟವಾಡಿದ ಕಾಲಿಸ್ ಪ್ರವಾಸಿಗರಿಗೆ ಮತ್ತೊಮ್ಮೆ ತಲೆನೋವಾಗಿ ಪರಿಣಮಿಸಿದರು.

232 /4 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತ್ತು. ಆದರೆ ದಾಳಿಗಿಳಿದ ಮೊದಲ ಓವರ್‌ನಲ್ಲೇ ಆಶ್ವೆಲ್ ಪ್ರಿನ್ಸ್ (47) ಮತ್ತು ಮಾರ್ಕ್ ಬೌಚರ್‌ರನ್ನು (0) ಬೆನ್ನು ಬೆನ್ನಿಗೆ ಪೆವಿಲಿಯನ್‌ಗೆ ಅಟ್ಟಿದ್ದ ಶ್ರೀಶಾಂತ್ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.

ಒಂದು ಹಂತದಲ್ಲಿ 283 ರನ್ನಗಳಿಗೆ ಎಂಟು ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅದ್ಭುತ ಆಟದ ಪ್ರದರ್ಶನ ನೀಡಿದ ಜಾಕ್ವಾಸ್ ಕಾಲಿಸ್ ಆಕರ್ಷಕ ಶತಕ ಬಾರಿಸುವ ಮೂಲಕ ನೆರವಾದರು. ಒಂಬತ್ತನೇ ವಿಕೆಟ್‌ಗೆ ಪಾಲ್ ಹ್ಯಾರಿಸ್ (7) ಜತೆ 27 ಹಾಗೂ ತ್ಸೊತ್ಸೊಬೆ ಜತೆ (8) 52 ರನ್ನುಗಳ ಮಹತ್ವದ ಜತೆಯಾಟ ನೀಡಿದ ಕಾಲಿಸ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. 459 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿ ನಿಂತ ಕಾಲಿಸ್ 291 ಎಸೆತಗಳಲ್ಲಿ 19 ಬೌಂಡರಿಗಳ ನೆರವಿನೊಂದಿಗೆ 161 ರನ್ ಗಳಿಸಿದರು. ಕೊನೆಯವರಾಗಿ ನಿರ್ಗಮಿಸಿದ ಕಾಲಿಸ್ ವಿಕೆಟನ್ನು ಜಹೀರ್ ಪಡೆದರು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕಾಲಿಸ್ ದಾಖಲಿಸುತ್ತಿರುವ 39ನೇ ಶತಕ. ಆ ಮೂಲಕ ಅತಿ ಹೆಚ್ಚು ಶತಕಗಳ ಪೈಕಿ ದ್ವಿತೀಯ ಸ್ಥಾನದಲ್ಲಿರುವ ರಿಕಿ ಪಾಟಿಂಗ್ ದಾಖಲೆಯನ್ನು ಸರಿಗಟ್ಟಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾದಲ್ಲಿರುವ ಭಾರತದ ಸಚಿನ್ ತೆಂಡೂಲ್ಕರ್ ಇದೇ ಸರಣಿಯ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಾಖಲೆಯ 50ನೇ ಶತಕದ ಸಾಧನೆ ಮಾಡಿದ್ದರು.

ಈ ನಡುವೆ ಮೊರ್ನೆ ಮೊರ್ಕೆಲ್ (8) ವಿಕೆಟ್ ಕಿತ್ತ ಶ್ರೀಶಾಂತ್ ಟೆಸ್ಟ್‌ನಲ್ಲಿ ಮೂರನೇ ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಶ್ರೀಶಾಂತ್ ಎರಡನೇ ಬಾರಿಗೆ ಇಂತಹದೊಂದು ಸಾಧನೆ ಮಾಡಿದರು. 2006ರ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ಐದು ವಿಕೆಟ್ ಕಿತ್ತಿದ್ದ ಶ್ರೀಶಾಂತ್ ಜೋಹಾನ್ಸ್‌ಬರ್ಗ್‌ ಅಂಗಣದಲ್ಲಿ ಭಾರತದ ಐತಿಹಾಸಿಕ ಗೆಲುವಿಗೆ ಕಾರಣರಾಗಿದ್ದರು.

ಉಳಿದಂತೆ ಇಂದು ಪತನಗೊಂಡ ಡೇಲ್ ಸ್ಟೈನ್ (0) ವಿಕೆಟನ್ನು ಕೂಡಾ ಜಹೀರ್ ಪಡೆದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸನ್ನು 112.5 ಓವರುಗಳಲ್ಲಿ 362 ರನ್ನುಗಳಿಗೆ ಕೊನೆಗೊಳಿಸಿತು. ಭಾರತದ ಪರ ಶ್ರೀ ಐದು, ಜಹೀರ್ ಮೂರು ಮತ್ತು ಇಶಾಂತ್ ಎರಡು ವಿಕೆಟ್ ಕಿತ್ತರು. ಆದರೆ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿಕೆಟ್ ಕಬಳಿಸುವಲ್ಲಿ ವಿಫಲರಾದರು.

ಕಾಲಿಸ್ ಆಸರೆ; ಇಲ್ಲಿ ಕ್ಲಿಕ್ಕಿಸಿ...
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments