Select Your Language

Notifications

webdunia
webdunia
webdunia
webdunia

ನಾಯಕತ್ವ ನಷ್ಟವಾಗಿರುವುದರಿಂದಲೇ ಆಶಸ್ ಗೆಲುವು: ಕೆವಿನ್

ನಾಯಕತ್ವ ನಷ್ಟವಾಗಿರುವುದರಿಂದಲೇ ಆಶಸ್ ಗೆಲುವು: ಕೆವಿನ್
ಸಿಡ್ನಿ , ಶುಕ್ರವಾರ, 31 ಡಿಸೆಂಬರ್ 2010 (15:00 IST)
ಎರಡು ವರ್ಷಗಳ ಹಿಂದೆ ನಾನು ನಾಯಕತ್ವ ಕಳೆದುಕೊಂಡಿರುವುದೇ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶಸ್ ಸರಣಿ ಗೆಲುವಿಗೆ ಕಾರಣವಾಗಿದೆ ಎಂದು ಇಂಗ್ಲೆಂಡ್‌ ಬ್ಯಾಟ್ಸ್‌ಮನ್ ಕೆವಿನ್ ಪೀಟರ್‌ಸನ್ ಅಭಿಪ್ರಾಯಪಟ್ಟಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 157 ರನ್ನುಗಳ ಗೆದ್ದುಕೊಂಡಿದ್ದ ಆಂಡ್ರ್ಯೂ ಸ್ಟ್ರಾಸ್ ಪಡೆ ಆಶಸ್ ಸರಣಿಯನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2009ರಲ್ಲಿ ನಾಯಕ ಪೀಟರ್‌ಸನ್ ಮತ್ತು ಕೋಚ್ ಪೀಟರ್ ಮೂರ್ಸ್ ಅವರನ್ನು ವಜಾ ಮಾಡುವ ಮೂಲಕ ಆಂಡ್ರ್ಯೂ ಸ್ಟ್ರಾಸ್ ಮತ್ತು ಆಂಡಿ ಫ್ಲವರ್ ಅವರನ್ನು ನೇಮಕ ಮಾಡಲಾಗಿತ್ತು. ಇದುವೇ ಈಗಿನ ಐತಿಹಾಸಿಕ ಜಯಕ್ಕಿರುವ ಪ್ರಧಾನ ಕಾರಣ ಎಂದು ಕೆವಿನ್ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್‌ನ ಒಳಿತಿಗಾಗಿ ನಾನು ನಾಯಕತ್ವ ತೊರೆದಿದ್ದೆ. ಒಂದು ವೇಳೆ ನಾನು ಆ ರೀತಿ ಮಾಡದೇ ಇದ್ದಲ್ಲಿ ಇಂದು ನಾನು ಈ ಹಂತಕ್ಕೆ ತಲುಪುತ್ತಿರಲಿಲ್ಲ ಎಂದವರು ಬ್ರಿಟಿಷ್ ಮಾಧ್ಯಮವೊಂದಕ್ಕೆ ತಿಳಿಸಿದರು.

24 ವರ್ಷಗಳ ನಂತರ ಆಸೀಸ್ ನೆಲದಲ್ಲಿ ಇಂಗ್ಲೆಂಡ್ ಆಶಸ್ ಸರಣಿ ಉಳಿಸಿಕೊಂಡಿತ್ತು. ಕಳೆದ 18 ತಿಂಗಳಲ್ಲಿ ತಂಡದ ಪೂರ್ವ ಸಿದ್ಧತೆಗಾಗಿ ಸ್ಟ್ರಾಸ್ ಮತ್ತು ಫ್ಲವರ್ ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದವರು ಹೇಳಿದರು.

ನಿಸ್ವಾರ್ಥ ಸ್ವಭಾದ ಹೊಂದಿರುವ ಸ್ಟ್ರಾಸ್‌ ಅವರನ್ನು ಅಭಿನಂದಿಸಿರುವ ಪೀಟರ್‌ಸನ್, ಇದು ಅವರನ್ನು ಆದರ್ಶ ನಾಯಕರನ್ನಾಗಿಸಿದೆ ಎಂದರು.

Share this Story:

Follow Webdunia kannada