Select Your Language

Notifications

webdunia
webdunia
webdunia
webdunia

ಆಪದ್ಬಾಂಧವನಾದ ಸ್ಪೆಷಲ್ ಲಕ್ಷ್ಮಣ್; ಹರಿಣಗಳಿಗೆ 303 ಟಾರ್ಗೆಟ್

ಆಪದ್ಬಾಂಧವನಾದ ಸ್ಪೆಷಲ್ ಲಕ್ಷ್ಮಣ್; ಹರಿಣಗಳಿಗೆ 303 ಟಾರ್ಗೆಟ್
ಡರ್ಬನ್ , ಮಂಗಳವಾರ, 28 ಡಿಸೆಂಬರ್ 2010 (17:28 IST)
PTI
ಗ್ರೇಮ್ ಸ್ಮಿತ್ ಪಡೆಯನ್ನು 131 ರನ್ನುಗಳಿಗೆ ನಿಯಂತ್ರಿಸಿದ್ದ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿತ್ತು. ನಂತರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಆಪದ್ಬಾಂಧವನಾದ ವೆರಿ ವೆರಿ ಸ್ಪೆಷಲ್ ವಿವಿಎಸ್ ಲಕ್ಷ್ಮಣ್ ನೆರವಿನಿಂದ ಭಾರತ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾಗಿತ್ತು. 92/4 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ್ದ ಭಾರತಕ್ಕೆ ಆರಂಭದಲ್ಲೇ ಚೇತೇಶ್ವರ ಪೂಜಾರ (10) ವಿಕೆಟ್ ನಷ್ಟವಾಗಿತ್ತು. ಆದರೆ ನಾಯಕ ಧೋನಿ ಜತೆ ಸೇರಿಕೊಂಡಿದ್ದ ಲಕ್ಷ್ಮಣ್ ತಂಡವನ್ನು ಮುನ್ನಡೆಸಿದ್ದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ್ದ ಧೋನಿ (21) ಉತ್ತಮವಾಗಿ ಮೂಡಿಬರುತ್ತಿದ್ದ ಸಂದರ್ಭದಲ್ಲಿಯೇ ತ್ಸೊತ್ಸೊಬೆ ಬಲೆಗೆ ಬಿದ್ದರು. ನಂತರ ಬಂದ ಹರಭಜನ್ ಸಿಂಗ್ (4) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ವೇಗಿ ಜಹೀರ್ ಖಾನ್ ಜತೆ ಸೇರಿಕೊಂಡ ಲಕ್ಷ್ಮಣ್ ತಂಡಕ್ಕೆ ಆಸರೆಯಾದರು. ಎಂಟನೇ ವಿಕೆಟ್‌ಗೆ ಜಹೀರ್ ಜತೆ 70 ರನ್ನುಗಳ ಜತೆಯಾಟ ನೀಡಿದ ಲಕ್ಷ್ಮಣ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆದರೆ ಊಟದ ವಿರಾಮದ ನಂತರ ಆಟ ಆರಂಭವಾದ ತಕ್ಷಣ ಜಹೀರ್ (27) ವಿಕೆಟ್ ಪತನವಾಯಿತು. ಇದರ ಬೆನ್ನಲ್ಲೇ ಇಶಾಂತ್ ಶರ್ಮಾ (0) ಕೂಡಾ ಪೆವಿಲಿಯನ್ ಸೇರಿಕೊಂಡರು. ನಂತರ ಕೊನೆಯವರಾಗಿ ಲಕ್ಷ್ಮಣ್ ವಿಕೆಟ್ ಒಪ್ಪಿಸಿದರು. ಆ ಮೂಲಕ ಸ್ವಲ್ಪದರಲ್ಲೇ ಶತಕ ವಂಚಿತರಾದರು. ತೀವ್ರ ಒತ್ತಡದ ಪರಿಸ್ಥಿತಿಯಲ್ಲಿಯೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 280 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿದ ಲಕ್ಷ್ಮಣ್ 171 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ 96 ರನ್ ಗಳಿಸಿದರು. ದ್ವಿತೀಯ ದಿನದಾಟದ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada