Webdunia - Bharat's app for daily news and videos

Install App

ದ. ಆಫ್ರಿಕಾ ಸರಣಿಯಲ್ಲಿ ಸಚಿನ್ ಪಾತ್ರ ಮಹತ್ವದಲ್ಲ: ಧೋನಿ

Webdunia
ಮಂಗಳವಾರ, 14 ಡಿಸೆಂಬರ್ 2010 (11:58 IST)
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪಾತ್ರ ಮಹತ್ವದಲ್ಲ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಟೆಸ್ಟ್ ಸೆಂಚುರಿಯನ್‌ನಲ್ಲಿ ಗುರುವಾರ ಆರಂಭವಾಗಲಿದೆ. ಆದರೆ ಬಹುತೇಕ ಎಲ್ಲಾ ಮಾಧ್ಯಮಗಳು 50ನೇ ಟೆಸ್ಟ್ ಶತಕ ಎದರು ನೋಡುತ್ತಿರುವ ಸಚಿನ್ ತೆಂಡೂಲ್ಕರ್ ಮತ್ತು ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈನ್ ಅವರನ್ನು ಹೈಲೆಟ್ ಮಾಡುತ್ತಿದ್ದು, ಇವರಿಬ್ಬರ ನಡುವಣ ಸೆಣಸಾಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಮಾಧ್ಯಮ ವಿಶ್ಲೇಷಣೆಯನ್ನು ತಳ್ಳಿಹಾಕಿರುವ ನಾಯಕ ಧೋನಿ, ಇದು ಎರಡು ಅಗ್ರ ತಂಡಗಳ ನಡುವಣ ಹೋರಾಟವಾಗಿದೆ. ಹಾಗೆಯೇ ಭಾರತ ಅಗ್ರವಾಗಿ ಹೊರಹೊಮ್ಮಬೇಕಾದಲ್ಲಿ ತಂಡವಾಗಿ ಪ್ರದರ್ಶನ ನೀಡಬೇಕಾಗಿದೆ ಎಂದವರು ಹೇಳಿದರು.

ಕ್ರಿಕೆಟ್ ಎಂಬುದು ವೈಯಕ್ತಿಯ ಆಟಕ್ಕಿಂತ ತಂಡದ ಸಾಧನೆ ಮಹತ್ವದ್ದಾಗಿದೆ. ಸರಣಿಗೆ ಹೇಗೆ ಸಜ್ಜರಾಗಬೇಕು ಎಂಬುದಕ್ಕೆ ನಾವು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದೇವೆ ಎಂದು 29ರ ಹರೆಯದ ಧೋನಿ ನುಡಿದರು.

ನಮ್ಮ ತಂಡ ಎಷ್ಟು ಪ್ರತಿಭೆಯನ್ನು ಹೊಂದಿದೆ ಎಂಬುದು ನನಗೆ ತಿಳಿದಿದೆ. ಅತ್ಯುತ್ತಮವಾಗಿ ಸಿದ್ಧರಾಗುವ ಮೂಲಕ ಯೋಜನೆಯನ್ನು ಕಾರ್ಯಗತ ಮಾಡುವುದರತ್ತ ಗಮನ ಹರಿಸುತ್ತಿದ್ದೇವೆ ಎಂದವರು ಹೇಳಿದರು.

ದಕ್ಷಿಣ ಆಫ್ರಿಕಾ ಕೋಚ್ ಕೋರಿ ವಾನ್ ಜೀಲ್ ಕೂಡಾ ಭಾರತೀಯ ನಾಯಕನಿಗೆ ಬೆಂಬಲ ಸೂಚಿಸಿದರು. ಭಾರತದ್ದು ಅತ್ಯುತ್ತಮ ತಂಡ. ನೀವು ಎದುರಾಳಿಗಳ ಬಗ್ಗೆ ಮಾತನಾಡುವಾಗ ವೈಯಕ್ತಿಕ ಆಟಗಾರರನ್ನು ಪರಿಗಣಿಸುವಂತಿಲ್ಲ ಎಂದವರು ಹೇಳಿದರು.

ಅದೇ ಹೊತ್ತಿಗೆ ದಕ್ಷಿಣ ಆಫ್ರಿಕಾದ ಬೌನ್ಸಿ ವಿಕೆಟ್ ಬಗ್ಗೆ ಮಾತನಾಡಿರುವ ಧೋನಿ, ವೇಗಿಗಳು ಉತ್ತಮ ದಾಳಿ ಸಂಘಟಿಸಬಲ್ಲರು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಚುಟುಕು ಅಥವಾ ಟೆಸ್ಟ್ ಕ್ರಿಕೆಟೇ ಆಗಿರಬಹುದು; ತಂಡದ ಬಹುತೇಕ ಕ್ರಿಕೆಟಿಗರು ಇಲ್ಲಿ ಆಡಿದ ಅನುಭವ ಹೊಂದಿದ್ದಾರೆ. ವಿಕೆಟನ್ನು ಪರೀಶೀಲಿಸಿದ ನಂತರ ಹೇಗೆ ಆಡಬೇಕೆಂದು ನಿರ್ಧರಿಸಲಿದ್ದೇವೆ ಎಂದಿದ್ದಾರೆ.

ಪಿಚ್ ನೆರವು ಇಲ್ಲದ ಹೊರತಾಗಿಯೂ ಭಾರತೀಯ ಬೌಲರುಗಳು ತವರಿನ ಹಾಗೆಯೇ ವಿದೇಶದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದವರು ಸೇರಿಸಿದರು.

ಹಾಗೆಯೇ ಹಿಂದಿನ ಅಂಕಿ ಅಂಶಗಳನ್ನು ನಾಯಕ ಧೋನಿ ಬದಿಗೊತ್ತಿದ್ದರು. ಸರಣಿಯು ಇತಿಹಾಸಕ್ಕೆ ಸೀಮಿತವಲ್ಲ. ನಾವಿಲ್ಲಿ ನೀಡಿದ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ ಎಂದವರು ಹೇಳಿದರು. ದಕ್ಷಿಣ ಆಫ್ರಿಕಾದಲ್ಲಿ ಭಾರತ ಆಡಿರುವ ಒಟ್ಟು 12 ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೇ ಗೆದ್ದುಕೊಂಡಿದೆ. ಹೀಗಾಗಿ ಮಹಿ ಪಡೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಐತಿಹಾಸಿಕ ಸರಣಿ ಜಯವನ್ನು ಎದುರು ನೋಡುತ್ತಿದೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments