Webdunia - Bharat's app for daily news and videos

Install App

ಭಾರತ-ದ.ಆಫ್ರಿಕಾ 'ಹೈ ವೊಲ್ಟೇಜ್' ಸರಣಿ; ವೇಳಾಪಟ್ಟಿ ಇಲ್ಲಿದೆ...

Webdunia
ಸೋಮವಾರ, 13 ಡಿಸೆಂಬರ್ 2010 (15:55 IST)
ಟೆಸ್ಟ್ ಕ್ರಿಕೆಟ್‌ನ ಎರಡು ಅಗ್ರತಂಡಗಳ ನಡುವಣ 'ಹೈ ವೊಲ್ಟೇಜ್' ಸರಣಿಗಾಗಿ ಕ್ಷಣಗಣನೆ ಆರಂಭವಾಗಿದೆ. ಆಟಗಾರರ ನಡುವಣ ಮಾತಿನ ಯುದ್ಧವು ಒಂದೆಡೆಯಾದರೆ ಮತ್ತೊಂದೆಡೆ ಸಂಘಟಕರು ಅಂಕಿ-ಅಂಶಗಳ ಪ್ರಕಾರ ಲೆಕ್ಕಾಚಾರ ಶುರು ಮಾಡಿದ್ದಾರೆ.

ಟೆಸ್ಟ್‌ನ ಅಗ್ರ ತಂಡವಾಗಿರುವುದರಿಂದ ಭಾರತ ಈ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲೇ ಐತಿಹಾಸಿಕ ಸರಣಿ ಜಯ ದಾಖಲಿಸಲಿದೆಯೆಂಬ ನಂಬಿಕೆ ಕ್ರೀಡಾಭಿಮಾನಿಗಳಲ್ಲಿ ಮನೆ ಮಾಡಿದೆ. ಇದೇ ನಿರೀಕ್ಷೆಯನ್ನು ಹೊತ್ತುಕೊಂಡಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ.

ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 12 ಪಂದ್ಯದಲ್ಲಿ ಕೇವಲ 1ರಲ್ಲಷ್ಟೇ ಜಯ ಸಾಧಿಸಲು ಯಶಸ್ವಿಯಾಗಿದೆ. 2007ರಲ್ಲಿ ಮೊದಲ ಬಾರಿಗೆ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದಿತ್ತು.

ಇದೀಗ ಟೆಸ್ಟ್‌ನ ಅಗ್ರತಂಡವಾಗಿರುವುದರಿಂದ ಸಹಜವಾಗಿಯೇ ಭಾರತಕ್ಕಿದು ಪ್ರತಿಷ್ಠೆಯ ಸರಣಿಯಾಗಿರಲಿದೆ. ಕೋಚ್ ಗ್ಯಾರಿ ಕರ್ಸ್ಟನ್ ದಕ್ಷಿಣ ಆಫ್ರಿಕಾದವರೇ ಆಗಿದ್ದರಿಂದ ಮಹಿ ಪಡೆಗೆ ಅಲ್ಲಿನ ಪರಿಸ್ಥಿತಿ ಬೇಗನೇ ಅರಿತುಕೊಳ್ಳಲು ಸಾಕಷ್ಟು ನೆರವು ಮಾಡಲಿದೆ.

ಇದೇ ಸರಣಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 50ನೇ ಟೆಸ್ಟ್ ಶತಕ ಮತ್ತು ರಾಹುಲ್ ದ್ರಾವಿಡ್ ಅವರು ಕ್ಯಾಚ್‌ಗಳ ದ್ವಿಶತಕವನ್ನು ಎದುರು ನೋಡುತ್ತಿದ್ದಾರೆ. ಭಾರತ ಇದೀಗ ಮೂರು ಟೆಸ್ಟ್, ಏಕೈಕ ಟ್ವೆಂಟಿ-20 ಮತ್ತು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಸರಣಿಯ ಮೊದಲ ಟೆಸ್ಟ್ ಡಿಸೆಂಬರ್ 16ರಂದು ನಡೆಯಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭಾರತ-ದ.ಆಫ್ರಿಕಾ ಸರಣಿ ವೇಳಾಪಟ್ಟ ಿ:
ದಿನಾಂಕಟೆಸ್ಟ್ ಟ್ವೆಂಟಿ-20ಏಕದಿನ
ಡಿ.16-20ಮೊದಲ ಟೆಸ್ಟ್, ಸೆಂಚುರಿಯನ್--
ಡಿ. 26-30ದ್ವಿತೀಯ ಟೆಸ್ಟ್, ಡರ್ಬನ್--
ಜ 02-06ಮೂರನೇ ಟೆಸ್ಟ್, ಕೇಪ್‌ಟೌನ್--
ಜ. 9-ಏಕೈಕ ಟ್ವೆಂಟಿ-20, ಡರ್ಬನ್-
ಜ. 12*--ಮೊದಲ ಏಕದಿನ, ಡರ್ಬನ್
ಜ. 15*--2ನೇ ಏಕದಿನ, ಜೋಹಾನ್ಸ್‌ಬರ್ಗ್
ಜ. 18*--3ನೇ ಏಕದಿನ, ಕೇಪ್‌ಟೌನ್
ಜ. 21*--4ನೇ ಏಕದಿನ, ಪೋರ್ಟ್ ಎಲಿಜಬೆತ್
ಜ. 23--5ನೇ ಏಕದಿನ, ಸೆಂಚುರಿಯನ್

( *ಅಹರ್ನಿಶಿ ಪಂದ್ಯಗಳು)
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments