Select Your Language

Notifications

webdunia
webdunia
webdunia
webdunia

ಆಶಸ್ ಸರಣಿ; 2ನೇ ಟೆಸ್ಟ್‌ನಿಂದ ಜಾನ್ಸನ್‌ ಕೈಬಿಟ್ಟ ಆಸೀಸ್

ಆಶಸ್ ಸರಣಿ; 2ನೇ ಟೆಸ್ಟ್‌ನಿಂದ ಜಾನ್ಸನ್‌ ಕೈಬಿಟ್ಟ ಆಸೀಸ್
ಆಡಿಲೇಡ್ , ಗುರುವಾರ, 2 ಡಿಸೆಂಬರ್ 2010 (13:14 IST)
ಕಳಪೆ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಆತಿಥೇಯ ಆಸ್ಟ್ರೇಲಿಯಾ ತಂಡದಿಂದ ಎಡಗೈ ವೇಗದ ಮಿಚ್ಚೆಲ್ ಜಾನ್ಸನ್ ಅವರನ್ನು ಕೈಬಿಡಲಾಗಿದೆ.

ಈ ವಿಚಾರವನ್ನು ನಾಯಕ ರಿಕಿ ಪಾಂಟಿಂಗ್ ಗುರುವಾರ ಖಚಿತಪಡಿಸಿದ್ದಾರೆ. 2009ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದ ಜಾನ್ಸನ್ ಇಂಗ್ಲೆಂಡ್ ವಿರುದ್ಧ ಬ್ರಿಸ್ಬೇರ್ನ್ ಟೆಸ್ಟ್ ಪಂದ್ಯದಲ್ಲಿ 170 ರನ್ ತೆತ್ತಿದ್ದರಲ್ಲದೆ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇದೀಗ ಜಾನ್ಸನ್ ಸ್ಥಾನದಲ್ಲಿ ಕಸಿದುಕೊಳ್ಳಲು ಮತ್ತೊಬ್ಬ ಎಡಗೈ ವೇಗಿ ಡೌಗ್ ಬೊಲ್ಲಿಂಗರ್ ಮತ್ತು ರೈನ್ ಹ್ಯಾರಿಸ್ ಮಧ್ಯೆ ಸ್ಪರ್ಧಾತ್ಮಕ ಪೈಪೋಟಿ ನಡೆಯುತ್ತಿದೆ. ತಂಡದ ಅಂತಿಮ ಬಳಗವನ್ನು ಪಂದ್ಯ ಆರಂಭದ ಸಂದರ್ಭದಲ್ಲಷ್ಟೇ ಆರಿಸಲಾಗುತ್ತದೆ ಎಂದು ತಂಡದ ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಹೈ ಸ್ಕೋರಿಂಗ್ ಡ್ರಾದಲ್ಲಿ ಅಂತ್ಯಗೊಂಡಿತ್ತು. ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸೀಸ್ ವೇಗಿ ಪೀಟರ್ ಸಿದ್ಲೇ ಗಮನ ಸೆಳೆದಿದ್ದರು. ಅದೇ ರೀತಿ ಇಂಗ್ಲೆಂಡ್ ಆರಂಭಿಕ ಆಲಿಸ್ಟಾರ್ ಕುಕ್ ದ್ವಿಶತಕ ಬಾರಿಸಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಆಸೀಸ್ ತಂಡ ಇಂತಿದೆ: ಶೇನ್ ವಾಟ್ಸನ್, ಸೈಮನ್ ಕ್ಯಾಟಿಚ್, ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್, ಮೈಕಲ್ ಹಸ್ಸಿ, ಮಾರ್ಕಸ್ ನಾರ್ತ್, ಬ್ರಾಡ್ ಹಡ್ಡಿನ್, ಡೌಗ್ ಬೊಲ್ಲಿಂಗರ್, ರೈನ್ ಹ್ಯಾರಿಸ್, ಬೆನ್ ಹಿಲ್ಫಾನಾಸ್, ಪೀಟರ್ ಸಿದ್ಲೇ ಮತ್ತು ಕ್ಸೇವಿರ್ ಡೋಹರ್ಟಿ

Share this Story:

Follow Webdunia kannada