ದೊಡ್ಡ ಮೊತ್ತ ಕಲೆಹಾಕುವ ಅಗತ್ಯವಿದೆ: ಗಂಭೀರ್
ಜೈಪುರ , ಮಂಗಳವಾರ, 30 ನವೆಂಬರ್ 2010 (16:41 IST)
ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ತಂಡ ಸ್ಕೋರ್ ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕಾದ ಅಗತ್ಯವಿದೆ ಎಂದು ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಯಾವತ್ತೂ ಉಪಖಂಡದಲ್ಲಿ ದೊಡ್ಡ ಮೊತ್ತ ಕಲೆಹಾಕುವುದು ಉತ್ತಮ. ಒಂದು ವೇಳೆ ನಾವು ಮೊದಲು ಬ್ಯಾಟಿಂಗ್ ನಡೆಸಿದ್ದಲ್ಲಿ 300 ರನ್ ಉತ್ತಮ ಮೊತ್ತವಾಗಿರಲಿದೆ. ಯಾಕೆಂದರೆ ಆನಂತರ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭ್ಯಾಸದ ನಂತರ ನಾಯಕ ಗಂಭೀರ್ ನುಡಿದರು. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಮಂಜು ಪ್ರಮುಖ ಪಾತ್ರ ವಹಿಸಲಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಬೌಲಿಂಗ್ ಎಸೆದಿರುವ ಬೌಲರುಗಳನ್ನು ನಾವು ಹೊಂದಿದ್ದೇವೆ. ಆದರೂ ಟಾಸ್ ಮತ್ತು ಮಂಜಿನ ವಿಷಯವು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದವರು ಹೇಳಿದರು. ಯುವ ತಂಡ ಆತ್ಮವಿಶ್ವಾಸದಲ್ಲಿದ್ದು, ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ನಾಯಕತ್ವವನ್ನು ನಾನು ಆನಂದಿಸುತ್ತಿದ್ದೇನೆ ಎಂದವರು ಸೇರಿಸಿದರು. ಅಗ್ರ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ನಿರೂಪಿಸಲು ಉತ್ತಮ ಅವಕಾಶವಿದೆ ಎಂದವರು ಹೇಳಿದರು.ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ