Webdunia - Bharat's app for daily news and videos

Install App

ಆಸೀಸ್‌ಗೆ ನೆರವಾದ ಹಸ್ಸಿ ಸಮಯೋಚಿತ ಅರ್ಧಶತಕ

Webdunia
ಶುಕ್ರವಾರ, 26 ನವೆಂಬರ್ 2010 (15:22 IST)
ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಮೈಕಲ್ ಹಸ್ಸಿ (81) ಅಜೇಯ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಇಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ 80 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದೆ.

ಆಸೀಸ್‌ಗಿನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನೆಡೆ ದಾಖಲಿಸಲು 40 ರನ್ನುಗಳ ಅಗತ್ಯವಿದೆ. ಇಂಗ್ಲೆಂಡ್‌ನ 260 ರನ್ನುಗಳಿಗೆ ಉತ್ತರವಾಗಿ 25/0 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಆಸೀಸ್ ದಿನದ ಮೊದಲ ಅವಧಿಯಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಹಿನ್ನೆಡೆ ಅನುಭವಿಸಿತ್ತು.

ಒಂದು ಹಂತದಲ್ಲಿ 78/0 ಎಂಬ ಸ್ಥಿತಿಯಲ್ಲಿದ್ದ ಆಸೀಸ್ 143 ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ ಐದು ವಿಕೆಟುಗಳನ್ನು ಕಲೆದುಕೊಂಡಿತ್ತು. ಆದರೆ ಆರನೇ ವಿಕೆಟ್‌ಗೆ ಮುರಿಯದ 77 ರನ್ ಪೇರಿಸಿದ ಹಸ್ಸಿ ಮತ್ತು ಬ್ರಾಡ್ ಹಡ್ಡಿನ್ ಜೋಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

PTI
ಆಕರ್ಷಕ ಅರ್ಧಶತಕ ದಾಖಲಿಸಿರುವ ಹಸ್ಸಿ 144 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಅಜೇಯರಾಗುಳಿದಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹಸ್ಸಿಗೆ ಉತ್ತಮ ಸಾಥ್ ನೀಡಿದ ಹಡ್ಡಿನ್ ಕೂಡಾ 22 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.

ಉಳಿದಂತೆ ಆರಂಭಿಕರಾದ ಸೈಮನ್ ಕ್ಯಾಟಿಚ್ (50) ಮತ್ತು ಶೇನ್ ವಾಟ್ಸನ್ (36) ಉಪಯುಕ್ತ ನೆರವು ನೀಡಿದರು. ಆದರೆ ನಾಯಕ ಮೈಕಲ್ ಕ್ಲಾರ್ಕ್ (10) ಉಪನಾಯಕ ಮೈಕಲ್ ಕ್ಲಾರ್ಕ್ (9) ಮತ್ತು ಮಾರ್ಕಸ್ ನಾರ್ತ್ (1) ವಿಫಲರಾದರು. ಇಂಗ್ಲೆಂಡ್ ಪರ ಜೇಮ್ಸ್ ಆಂಡ್ರೆಸನ್ ಮತ್ತು ಸ್ಟೀವನ್ ಫಿನ್ ತಲಾ ಎರಡು ವಿಕೆಟ್ ಹಾಗೂ ಗ್ರೇಮ್ ಸ್ವಾನ್ ಒಂದು ವಿಕೆಟ್ ಕಿತ್ತರು.

ಇದಕ್ಕೂ ಮೊದಲು ಮೊದಲ ದಿನದಾಟದಲ್ಲಿ ಹ್ಯಾಟ್ರಿಕ್ ಸಹಿತ ಆರು ವಿಕೆಟ್ ಕಿತ್ತಿದ್ದ ಆಸೀಸ್ ವೇಗಿ ಪೀಟರ್ ಸಿದ್ಲೇ ಮಾರಕ ದಾಳಿಗೆ ಸಿಲುಕಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್ನುಗಳಿಗೆ ಆಲೌಟಾಗಿತ್ತು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments