Webdunia - Bharat's app for daily news and videos

Install App

50ನೇ ಟೆಸ್ಟ್ ಶತಕದತ್ತ ಸಚಿನ್; ಭಾರತ ಮೇಲುಗೈ

Webdunia
ಭಾನುವಾರ, 21 ನವೆಂಬರ್ 2010 (17:43 IST)
PTI
ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ 193 ರನ್ನುಗಳ ಸಾಧಾರಣ ಮೊತ್ತಕ್ಕೆ ದಿಟ್ಟ ಉತ್ತರ ನೀಡಿರುವ ಭಾರತ ತಂಡ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಎರಡನೇ ದಿನದಂತ್ಯಕ್ಕೆ 82 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 292 ರನ್ ಗಳಿಸಿದ್ದು, 99 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ.

ಅಜೇಯ ಅರ್ಧಶತಕ ದಾಖಲಿಸಿರುವ ಸಚಿನ್ ತೆಂಡೂಲ್ಕರ್ ಅವರು ಮೂರನೇ ದಿನದಾಟದಲ್ಲಿ ತಮ್ಮ 50ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಲಿದ್ದಾರೆಯೇ ಎಂಬುದನ್ನು ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾದು ನೋಡುತ್ತಿದ್ದಾರೆ. 126 ಎಸೆತಗಳನ್ನು ಎದುರಿಸಿರುವ ಸಚಿನ್ ಏಳು ಬೌಂಡರಿಗಳ ನೆರವಿನಿಂದ ಅಜೇಯ 57 ರನ್ ಗಳಿಸಿದ್ದಾರೆ.

ಅದೇ ರೀತಿ ಸಚಿನ್‌ಗೆ ಉತ್ತಮ ಬೆಂಬಲ ನೀಡುತ್ತಿರುವ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೂಡಾ 69 ರನ್ ಗಳಿಸಿದ್ದು, ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಮೊದಲ ವಿಕೆಟ್‌ಗೆ 113 ರನ್ನುಗಳ ಜತೆಯಾಟ ನೀಡಿದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಭಾರತಕ್ಕೆ ಬಿರುಸಿನ ಆರಂಭವೊದಗಿಸಿದರು. ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಸೆಹ್ವಾಗ್ 12 ಬೌಂಡರಿಗಳ ನೆರವಿನಿಂದ 78 ರನ್ ಗಳಿಸಿದರು. ಅದೇ ರೀತಿ ಫಾರ್ಮ್ ಮರಳಿ ಪಡೆದಿರುವ ಗೌತಿ 74 ರನ್ನುಗಳ ಉಪಯುಕ್ತ ನೆರವು ನೀಡಿದರು.

ಈ ಮುನ್ನ ಭಾರತೀಯ ಬೌಲರುಗಳ ಸರ್ವಾಂಗೀಣ ಪ್ರದರ್ಶನಕ್ಕೆ ತತ್ತರಿಸಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 66.3 ಓವರುಗಳಲ್ಲಿ 193 ರನ್ನುಗಳಿಗೆ ಆಲೌಟಾಗಿತ್ತು

148 /7 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಕಿವೀಸ್ ಮತ್ತೆ 45 ರನ್ ಪೇರಿಸುವುದೆಡೆ ಉಳಿದ ಮೂರು ವಿಕೆಟುಗಳನ್ನು ಕಳೆದುಕೊಂಡಿತ್ತು. ಮಾರಕ ದಾಳಿ ಸಂಘಟಿಸಿದ ಇಶಾಂತ್ ಶರ್ಮಾ ನಾಲ್ಕು, ಪ್ರಗ್ಯಾನ್ ಓಜಾ ಮೂರು, ಎಸ್. ಶ್ರೀಶಾಂತ್ ಎರಡು ಹಾಗೂ ಹರಭಜನ್ ಸಿಂಗ್ ಒಂದು ವಿಕೆಟ್ ಕಿತ್ತು ಮಿಂಚಿದರು.

ಬ್ರೆಡಮ್ ಮೆಕಲಮ್ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ಸ್ವಲ್ಪ ಹೊತ್ತು ಅಪಾಯ ಸೃಷ್ಟಿಸಿದ ಟಿಮ್ ಸೌಥಿ 38 ರನ್ ಗಳಿಸಿದರು. ಪಿಚ್ ತೇವಯುಕ್ತವಾಗಿದ್ದರ ಹಿನ್ನೆಲೆಯಲ್ಲಿ ಮೊದಲ ದಿನದಾಟದಲ್ಲಿ 34 ಓವರುಗಳ ಆಟ ನಷ್ಟವಾಗಿತ್ತು.

ಒಟ್ಟಾರೆಯಾಗಿ ಮೊದಲೆರಡು ಪಂದ್ಯ ಸಮಬಲಗೊಂಡಿದ್ದರ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ಜಯ ದಾಖಲಿಸಿದಲ್ಲಿ ಭಾರತ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಳ್ಳಲಿದೆ.

ಭಾರತ-ನ್ಯೂಜಿಲೆಂಡ್ ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ....

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments