Webdunia - Bharat's app for daily news and videos

Install App

ಬೇರೆ ಚರ್ಚಾ ವಿಷಯಗಳಿವೆ; 50ನೇ ಟೆಸ್ಟ್ ಶತಕದ ಬಗ್ಗೆ ಸಚಿನ್

Webdunia
ಮಂಗಳವಾರ, 16 ನವೆಂಬರ್ 2010 (13:33 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 50ನೇ ಟೆಸ್ಟ್ ಶತಕವನ್ನು ಯಾವತ್ತು ಪೂರೈಸಲಿದ್ದಾರೆ ಎಂಬುದನ್ನು ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ. ಈ ಮೈಲುಗಲ್ಲು ತಲುಪಲು ಸಚಿನ್‌ಗಿನ್ನು ಒಂದು ಶತಕದ ಅಗತ್ಯವಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಟ್ಲ್ ಮಾಸ್ಟರ್, ಈ ನಿರ್ದಿಷ್ಟ ದಾಖಲೆಯ ಹೊರತಾಗಿಯೂ ಚರ್ಚಿಸಲು ಬೇರೆ ವಿಷಯಗಳು ಸಾಕಷ್ಟಿವೆ ಎಂದು ಹೇಳಿದ್ದಾರೆ.

50 ನೇ ಟೆಸ್ಟ್ ಶತಕ್ಕಿಂತ ಮಿಗಿಲಾಗಿ ಸಾಕಷ್ಟು ಚರ್ಚಾ ವಿಷಯಗಳಿವೆ. ಇಂದೊಂದೇ ಪ್ರಮುಖ ಅಂಶವಲ್ಲ. ನಾನು ಯಾವತ್ತೂ ದೇಶಕ್ಕಾಗಿ ಉತ್ತಮವಾಗಿ ಆಡುವುದತ್ತ ಗಮನ ಕೇಂದ್ರಿಕರಿಸಿದ್ದಾರೆ. ಹಾಗೆಯೇ ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆಲುವಿನತ್ತ ದೃಷ್ಟಿ ಹಾಯಿಸಿದ್ದೇನೆ ಎಂದವರು ದ್ವಿತೀಯ ಟೆಸ್ಟ್ ಸಂದರ್ಭದಲ್ಲಿ ನುಡಿದರು.

ಪತ್ರಿಕೆಗಳಲ್ಲಿ ನನ್ನ ಬಗ್ಗೆ ಏನನ್ನು ಬರೆಯುತ್ತಾರೆ ಎಂಬುದನ್ನು ನಾನು ಓದುತ್ತಿಲ್ಲ. ನಾನು ಕೇವಲ ಪಂದ್ಯದತ್ತ ಗಮನ ಕೇಂದ್ರಿಕರಿಸಿದ್ದೇನೆ. ಕಳೆದ 21 ವರ್ಷಗಳ ಕ್ಯಾರಿಯರ್ ನನಗೆ ವಿಶೇಷವೆನಿಸಿದ್ದು, ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ ಎಂದವರು ಹೇಳಿದರು.

ಹರಭಜನ್ ಸಿಂಗ್ ಅವರ ಸತತ ಎರಡನೇ ಶತಕದ ಬಗ್ಗೆ ಮಾತನಾಡಿದ ಸಚಿನ್, ಪ್ರತಿ ಸಲವೂ ಅವರು ಶತಕ ಬಾರಿಸಲು ಶಕ್ತರೆಂದು ಹೇಳುತ್ತಿದ್ದೆ ಎಂದವರು ತಿಳಿಸಿದರು.

ಅದೇ ಹೊತ್ತಿಗೆ ಕೋಚ್ ಗ್ಯಾರಿ ಕರ್ಸ್ಟನ್ ಬಗ್ಗೆಯೂ ಸಚಿನ್ ಹೊಗಳಿಕೆಯ ಮಾತುಗಳನ್ನಾಡಿದರು. ತಂಡದ ಯಶಸ್ಸಿನಲ್ಲಿ ಕೋಚ್‌ ಪಾಲು ಬಹಳಷ್ಟಿದೆ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments