Select Your Language

Notifications

webdunia
webdunia
webdunia
webdunia

ಪ್ರಥಮ ದರ್ಜೆ ಕ್ರಿಕೆಟ್‌ಗೆ ಹಿಂತಿರುಗಿ; ದಾದಾ ಸಲಹೆ

ಪ್ರಥಮ ದರ್ಜೆ ಕ್ರಿಕೆಟ್‌ಗೆ ಹಿಂತಿರುಗಿ; ದಾದಾ ಸಲಹೆ
ಮುಂಬೈ , ಶನಿವಾರ, 15 ಮೇ 2010 (11:37 IST)
ವೆಸ್ಟ್‌ಇಂಡೀಸ್‌ನ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎದುರಾದ ವೈಫಲ್ಯದ ನಂತರ ಟೀಮ್ ಇಂಡಿಯಾಕ್ಕೆ ಕಿವಿಮಾತು ನೀಡಿರುವ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ, ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರಳಿ ಅಭ್ಯಾಸ ನಡೆಸುವಂತೆ ಸಲಹೆ ಮಾಡಿದ್ದಾರೆ.

ಆಟಗಾರರು ನಿರ್ವಹಣೆ ಉತ್ತಮವಾಗಿಲ್ಲದಿದ್ದರೆ ಅವರನ್ನು ದೇಶಿಯ ಕ್ರಿಕೆಟ್‌ಗೆ ಕಳುಹಿಸಿ ಎಂದು ದಾದಾ ಸಲಹೆ ಮಾಡಿದರು. ಇದು ನಿಜ. ನೀವು ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದರೆ ಕ್ರಿಕೆಟ್ ಮೂಲ ಪಾಠವನ್ನು ಕಲಿತುಕೊಳ್ಳುವ ಅಗತ್ಯವಿದೆ ಎಂದವರು ಸೇರಿಸಿದರು.

ಅದೇ ವೇಳೆ ದೇಶಿಯ ದರ್ಜೆಯಲ್ಲಿ ಆಡುವ ಮೂಲಕ ಆಟಗಾರರಿಗೆ ತಮ್ಮ ಫಾರ್ಮ್ ಮರಳಿ ಪಡೆಯಬಹುದೆಂಬ ವಿಶ್ವಾಸವನ್ನು ಗಂಗೂಲಿ ವ್ಯಕ್ತಪಡಿಸಿದ್ದಾರೆ.

ವಿಂಡೀಸ್‌ನಲ್ಲಿ ಶಾರ್ಟ್ ಬಾಲ್‌ಗಳನ್ನು ಎದುರಿಸುವಲ್ಲಿ ಎಡವಿದ್ದ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಲು ಸಾಧ್ಯವಾಗದೇ ಹೊರ ನಡೆದಿತ್ತು.

ಅಧಿಕ ತೂಕ, ಫಿಟ್‌ನೆಸ್ ಸಮಸ್ಯೆ ಹಾಗೂ ಕೆಲವು ಆಟಗಾರರಿಗೆ ಬದ್ಧತೆ ಕೂಡಾ ಇರಲಿಲ್ಲವೆಂಬ ಆಘಾತಕಾರಿ ಅಂಶವನ್ನು ಕೋಚ್ ಗ್ಯಾರಿ ಕರ್ಸ್ಟನ್ ತಮ್ಮ ವರದಿಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

Share this Story:

Follow Webdunia kannada