Select Your Language

Notifications

webdunia
webdunia
webdunia
webdunia

ಸಚಿನ್ 46ನೇ ಶತಕಕ್ಕೆ ಅಡ್ಡಿಯಾದರೇ ಕಾರ್ತಿಕ್?

ಸಚಿನ್ 46ನೇ ಶತಕಕ್ಕೆ ಅಡ್ಡಿಯಾದರೇ ಕಾರ್ತಿಕ್?
ಕಟಕ್ , ಮಂಗಳವಾರ, 22 ಡಿಸೆಂಬರ್ 2009 (20:10 IST)
ವಿಜಯದ ರನ್ನುಗಳನ್ನು ಬಾರಿಸಿದ ಆಟಗಾರ ಯಾವತ್ತೂ ಶ್ಲಾಘನೆಗೆ ಪಾತ್ರರಾಗುತ್ತಾರೆ. ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ಬಂದ ದಿನೇಶ್ ಕಾರ್ತಿಕ್ ಅವರು, 96 ರನ್ನು ಮಾಡಿದ್ದ ಸಚಿನ್ ತೆಂಡುಲ್ಕರ್‌ಗೆ ಮಗದೊಂದು ಶತಕ ಸಿಡಿಸಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನದ ನುಡಿಗಳಿಗೆ ಈಡಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಮೂರನೇ ಏಕದಿನವನ್ನು ಭಾರತ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆಯಾದರೂ, ಸಚಿನ್‌ಗೆ 46ನೇ ಶತಕ ಪೂರೈಸಲು ಕಾರ್ತಿಕ್ ಅವಕಾಶ ನೀಡಬೇಕಿತ್ತು ಎಂಬುದು ಭಾರೀ ಚರ್ಚೆಯ ಸಂಗತಿ.

ಕಾರ್ತಿಕ್ ಅವರು ತೆಂಡುಲ್ಕರ್‌ಗೆ ಹೆಚ್ಚಿನ ಸ್ಟ್ರೈಕ್ ಅವಕಾಶ ನೀಡಬೇಕಿತ್ತು ಎಂಬುದು ಹಿರಿಯ ಆಟಗಾರರ ಅಭಿಮತ. ಆದರೆ, ಈ ಯುವ ಆಟಗಾರನ ಲಕ್ಷ್ಯವು ವಿಜಯದ ಕಡೆಗೇ ಇರಬೇಕಿತ್ತಾದುದರಿಂದ ಕಟುವಾಗಿ ಟೀಕಿಸಿಲ್ಲ.

ಅಜೇಯ 32 ರನ್ ಮಾಡಿದ್ದ ತಮಿಳುನಾಡಿನ ಈ ಆಟಗಾರ ಕಾರ್ತಿಕ್, ಬೌಂಡರಿ ಮೂಲಕ ವಿಜಯದ ರನ್ ಬಾರಿಸಿದ್ದರು. ತೆಂಡುಲ್ಕರ್ ಅಜೇಯ 96 ರನ್ ಮಾಡಿದ್ದರು. ಕಾರ್ತಿಕ್ ಅವರು ಸಾಕಷ್ಟು ಪ್ರಬುದ್ಧರಲ್ಲ, ಅವರು ಸಚಿನ್‌ಗೆ ಹೆಚ್ಚು ಅವಕಾಶ ನೀಡಬಹುದಿತ್ತು ಎಂದು ಮಾಜಿ ಸ್ಪಿನ್ನರ್ ಬಾಪು ನಾಡಕರ್ಣಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಆಟಗಾರ ಚಂದು ಬೋರ್ಡೆ ಕೂಡ, ಕಾರ್ತಿಕ್ ಅವರು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲವಾದರೂ, ಅವರ ಅನುಭವದ ಕೊರತೆ ಮತ್ತು ಗೆಲ್ಲುವ ಉತ್ಸಾಹದ ಭರದಲ್ಲಿ ಇಂಥದ್ದೆಲ್ಲಾ ನಡೆಯುತ್ತದೆ ಎಂದಿದ್ದಾರೆ.

ಸುನಿಲ್ ಗಾವಸ್ಕರ್ ಪ್ರತಿಕ್ರಿಯೆ ನೀಡಿ, ತೆಂಡುಲ್ಕರ್ 80ರ ಆಸುಪಾಸಿನಲ್ಲಿದ್ದಾಗಲೇ, ರನ್ ಗತಿಯನ್ನು ಹೆಚ್ಚಿಸಬಹುದಿತ್ತು. ಯಾವ ವಯಸ್ಸಿನಲ್ಲಿದ್ದರೂ ಸೆಂಚುರಿ ಮಿಸ್ ಮಾಡಿಕೊಳ್ಳುವುದು ಯಾರಿಗೂ ಇಷ್ಟವಿರುವುದಿಲ್ಲ. ಅವರು ಶತಕ ಬಾರಿಸಿದ್ದರೆ ಅವರಿಗೆ ವೈಯಕ್ತಿಕವಾಗಿ ಮತ್ತು ತಂಡಕ್ಕೆ ಹಾಗೂ ದೇಶಕ್ಕೆ ಹೆಮ್ಮೆ ಎಂದಿದ್ದಾರೆ.

ಮತ್ತೊಬ್ಬ ಮಾಜಿ ಆಟಗಾರ ಅಬ್ಬಾಸ್ ಅಲಿ ಬೇಗ್ ಕೂಡ, ಸಚಿನ್‌ಗೆ ಶತಕದ ಅವಕಾಶ ನೀಡಬೇಕಿತ್ತು ಎಂದರಾದರೂ, ಇದು ತಂಡದ ಆಟವಾಗಿರುವುದರಿಂದ ಇಂಥದ್ದು ಸಾಮಾನ್ಯ ಎಂದಿದ್ದಾರೆ.

ಮಾಜಿ ಆಟಗಾರರಾದ ಸಯ್ಯದ್ ಕೀರ್ಮಾನಿ, ಚೇತನ್ ಚೌಹಾಣ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಸಚಿನ್‌ಗೆ 18 ಬಾರಿ ಶತಕ ಪೂರೈಸಲಾಗಿಲ್ಲ! ಕ್ಲಿಕ್ ಮಾಡಿ.

Share this Story:

Follow Webdunia kannada