Select Your Language

Notifications

webdunia
webdunia
webdunia
webdunia

ಟಿ20 ಮಹಿಳಾ ವಿಶ್ವಕಪ್‌ ಗೆದ್ದ ಇಂಗ್ಲೆಂಡ್

ಟಿ20 ಮಹಿಳಾ ವಿಶ್ವಕಪ್‌ ಗೆದ್ದ ಇಂಗ್ಲೆಂಡ್
ಲಂಡನ್ , ಭಾನುವಾರ, 21 ಜೂನ್ 2009 (18:23 IST)
ನ್ಯೂಜಿಲ್ಯಾಂಡನ್ನು ಮಣಿಸಿದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವು ಪ್ರಪ್ರಥಮ ಮಹಿಳಾ ಟಿ20 ಪಂದ್ಯಾವಳಿಯನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

ಲಾರ್ಡ್ಸ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ತನ್ನ ಎದುರಾಳಿ ನ್ಯೂಜಿಲ್ಯಾಂಡನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಮೊದಲು ಬ್ಯಾಟ್ ಮಾಡಿದ ತಂಡ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 85ರನ್ ಗಳಿಸಿ, ಎದುರಾಳಿ ತಂಡಕ್ಕೆ 86 ರನ್‌ಗಳ ಸವಾಲೊಡ್ಡಿತ್ತು.

ನ್ಯೂಜಿಲ್ಯಾಂಡ್ ಒಡ್ಡಿದ ಸವಾಲನ್ನು ಇಂಗ್ಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ ಗಳಿಸಿ ಗೆಲುವಿನ ರನ್ ಬಾರಿಸಿತು.

ಇಂಗ್ಲೆಂಡ್ ತಂಡದ ಸಾರಾ ಟೇಲರ್ ಉತ್ತಮ ಪ್ರದರ್ಶನ ನೀಡಿದರು. ಅಜೇಯ 32 ರನ್‌ಗಳಿಸಿದ ಅವರು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಮಿಕ್ಕಂತೆ ಸರಾ ಟೇಲರ್ 24 ರನ್(33ಬಾಲ್‌ಗಳು) ಗಳಿಸಿದ್ದು ಬಿಟ್ಟರೆ ಮಿಕ್ಕವರಾರು ಒಂದಕ್ಕಿ ದಾಟಿಲ್ಲ.

Share this Story:

Follow Webdunia kannada