Select Your Language

Notifications

webdunia
webdunia
webdunia
webdunia

ಟ್ವೆಂಟಿ20: ಬಾಂಗ್ಲಾ ವಿರುದ್ಧ ಶ್ರೀಲಂಕಾಗೆ ಗೆಲುವು

ಟ್ವೆಂಟಿ20: ಬಾಂಗ್ಲಾ ವಿರುದ್ಧ ಶ್ರೀಲಂಕಾಗೆ ಗೆಲುವು
ಲಂಡನ್ , ಬುಧವಾರ, 3 ಜೂನ್ 2009 (16:53 IST)
ವಿಶ್ವಕಪ್ ಟ್ವೆಂಟಿ20 ಪಂದ್ಯಾವಳಿಯ ಶ್ರೀಲಂಕಾ - ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ವೇಗದ 43 ರನ್‌ಗಳಿಸುವುದರೊಂದಿಗೆ ತಂಡಕ್ಕೆ ನಾಲ್ಕು ವಿಕೆಟ್‌ಗಳ ಜಯ ತಂದುಕೊಟ್ಟಿದ್ದಾರೆ.

ದಿಲ್‌ಶಾನ್ ತಿಲಕರತ್ನೆ ಹಾಗೂ ಸನತ್ ಜಯಸೂರ್ಯ ಆರಂಭಿಕ ವಿಕೆಟ್‌ಗೆ 34 ರನ್‌ಗಳನ್ನು ಪೇರಿಸಿದ್ದರು. ನಂತರ ಬಂದ ಜಯವರ್ಧನೆ ತಮ್ಮ ಎಂದಿನ ಶೈಲಿಯಲ್ಲಿ ಬಿರುಸಿನ ಆಟವಾಡಿ ಮಹಮದುಲ್ಲಾ ಅವರ ಎಂಟನೇ ಒವರ್‌ನಲ್ಲಿ 15 ರನ್‌ಗಳನ್ನು ಬಾರಿಸಿ ಒಟ್ಟು 43 ರನ್‌ಗಳಿಸುವುದರೊಂದಿಗೆ ಎದುರಾಳಿ ತಂಡವನ್ನು ಆತಂಕಕ್ಕೆ ಸಿಲುಕಿಸಿದರು.

ಮುಷ್‌ಫಿಕ್ರ್ ರೆಹಮಾನ್ ಮತ್ತು ರಖಿಬುಲ್ ಹಸನ್ ಅವರ ಆರನೇ ವಿಕೆಟ್ ಜೊತೆಯಾಟದಲ್ಲಿ 70 ರನ್‌ಗಳನ್ನು ಪೇರಿಸಿದ್ದರಿಂದ ಬಾಂಗ್ಲಾ ತಂಡ ಆರು ವಿಕೆಟ್‌ಗಳ ನಷ್ಟಕ್ಕೆ 151 ರನ್‌ಗಳಿಗೆ ತಲುಪಿತು.

ಬಾಂಗ್ಲಾದೇಶದ ತಂಡ 17 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ನಂತರ ತಂಡದ ಆರಂಭಿಕ ಆಟಗಾರರಾದ ತಮೀಮ್ ಇಕ್ಬಾಲ್ ಮೂರು ಬೌಂಡರಿಗಳನ್ನು ಬಾರಿಸಿದರೆ ಫರ್ವೇಜ್ ಮಹರೂಫ್ ಮತ್ತು ಜುನೈದ್ ಸಿದ್ದಿಖಿ ಶೂನ್ಯರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.

ರಖಿಬುಲ್ ಔಟಾಗದೇ 38 ಮುಷ್‌ಫಿಖ್ರ್ 28 ಎಸೆತಗಳನ್ನು ಎದುರಿಸಿ 34 ರನ್‌ಗಳಿಸಿದರು. ಮಷ್ರಫೆ ಮೊರ್ತಾಜಾ ಎರಡು ನೇರ ಬೌಂಡರಿಗಳನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು 150 ರನ್‌ಗಳಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

Share this Story:

Follow Webdunia kannada