Webdunia - Bharat's app for daily news and videos

Install App

ಭರ್ಜರಿ ಗೆಲುವಿಗಾಗಿ ಡೆಲ್ಲಿ ಬೌಲರುಗಳ 'ಗಂಭೀರ' ಗುಣಗಾನ

Webdunia
ಸೋಮವಾರ, 11 ಮೇ 2009 (13:40 IST)
ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಸಂತಸದಿಂದಿರುವ ಡೆಲ್ಲಿ ಡೇರ್‌ಡೆವಿಲ್ಸ್ ಕಪ್ತಾನ ಗೌತಮ್ ಗಂಭೀರ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಳು ವಿಕೆಟ್‌ಗಳ ಅಂತರದ ಜಯ ದಾಖಲಿಸಲು ಸಹಕರಿಸಿದ ಬೌಲರುಗಳ ಗುಣಗಾನ ಮಾಡಿದ್ದಾರೆ.

" ಆರಂಭದಲ್ಲೇ ವಿಕೆಟ್‌ಗಳನ್ನು ಉರುಳಿಸುವ ಮೂಲಕ ನಮ್ಮ ಬೌಲರುಗಳನ್ನು ಆಟವನ್ನು ನಿಯಂತ್ರಿಸಿದರು. ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ 9 ರನ್ನುಗಳಿಗೆ ಮೂರು ವಿಕೆಟ್ ಕಳೆದುಕೊಂಡ ನಂತರ ಪಂದ್ಯ ಗೆಲ್ಲಲು ನಮಗೆ ಸುಲಭವಾಯಿತು" ಎಂದು ಎಡಗೈ ದಾಂಡಿಗ ತಿಳಿಸಿದ್ದಾರೆ.

ಆರಂಭಿಕ ವಿಕೆಟ್ ಪತನವಾಗುವ ಗುಂಗಿನಿಂದ ನೈಟ್ ರೈಡರ್ಸ್ ಇನ್ನೂ ಹೊರ ಬಂದಿಲ್ಲ. ಮಧ್ಯಮ ಕ್ರಮಾಂಕದ ಸೌರವ್ ಗಂಗೂಲಿ (44) ಮತ್ತು ಅಜಿತ್ ಅಗರ್ಕರ್ (39) ಸಹಕಾರದಿಂದ ಅದು ಎಂಟು ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಿದರೂ, ಇದು ಇದು ಟ್ವೆಂಟಿ-20ಯಲ್ಲಿ ಗೌರವಾರ್ಹ ಮೊತ್ತವೆಂದು ಹೇಳಲಾಗದು.

ಸುಲಭ ಗುರಿಯನ್ನು ಪಡೆದಿದ್ದ ಡೇರ್‌ಡೆವಿಲ್ಸ್ ಆರಂಭದಲ್ಲೇ ಡೇವಿಡ್ ವಾರ್ನರ್ (36) ಮತ್ತು ಗಂಭೀರ್ (18) ನೆರವಿನಿಂದ 53 ರನ್ನುಗಳನ್ನು ಕಲೆ ಹಾಕುವ ಮೂಲಕ ಸ್ಪಷ್ಟತೆ ತೋರಿಸಿತ್ತು.

ಆರಂಭದಲ್ಲೇ ಹೆಚ್ಚಿನ ವಿಕೆಟುಗಳನ್ನು ಕಳೆದುಕೊಳ್ಳದಿರುವ ತಂತ್ರಕ್ಕೆ ನಾವು ಹೆಚ್ಚಿನ ಒತ್ತು ಕೊಡುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. "ನಾವು ಅಂತಹ ದೊಡ್ಡ ಮೊತ್ತವನ್ನು ಬೆನ್ನತ್ತುವ ಗುರಿ ಹೊಂದಿಲ್ಲದಾಗ ನಾವು ಕೊನೆ ತನಕ ಬ್ಯಾಟಿಂಗ್ ಮಾಡುವುದೇ ನಮಗೆ ಮುಖ್ಯವಾಗುತ್ತದೆ" ಎಂದು ಗಂಭೀರ್ ವಿವರಿಸಿದ್ದಾರೆ.

ತಂಡವು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದರೂ ಸಹ ಕೆಳಕ್ರಮಾಂಕದಲ್ಲಿರುವವರ ಪರೀಕ್ಷೆ ನಡೆಸಲು ಹೋಗುವುದಿಲ್ಲ ಎಂದು ಗಂಭೀರ್ ತಿಳಿಸಿದರು. "ಇನ್ನೂ ಐದು ಪಂದ್ಯಗಳು ಬಾಕಿ ಉಳಿದಿವೆ. ಹಾಗಾಗಿ ಇದೇ ಸನ್ನಿವೇಶವನ್ನು ಉಳಿಸಿಕೊಂಡು ಹೋಗುವುದು ನಮಗೆ ಅಗತ್ಯ" ಎಂದರು.

ಅದೇ ಹೊತ್ತಿಗೆ ಮಾತನಾಡಿರುವ ಎದುರಾಳಿ ತಂಡದ ಕಪ್ತಾನ ಬ್ರೆಂಡನ್ ಮೆಕಲಮ್, 123ರ ಮೊತ್ತ ಕಡಿಮೆಯಾಯಿತು ಎಂಬುದನ್ನು ಒಪ್ಪಿಕೊಂಡರು. "ನಾವು ಸ್ಕೋರ್ ಬೋರ್ಡಿನಲ್ಲಿ ಹೆಚ್ಚಿನ ರನ್ ಮೂಡಿಸಲು ವಿಫಲರಾದೆವು. ಆದರೂ 120 ರನ್ ಗಳಿಸಲು ಉತ್ತಮ ಯತ್ನ ನಡೆಸಲಾಗಿದೆ. ಅಗ್ರ ಮೂರು ವಿಕೆಟ್‌ಗಳ ಶೀಘ್ರ ಪತನ ದುಬಾರಿಯಾಯಿತು. ನಾವು 20ರಿಂದ 30 ರನ್ನುಗಳನ್ನು ಮೊತ್ತಕ್ಕೆ ಸೇರಿಸಲು ಸಾಧ್ಯವಾಗುತ್ತಿದ್ದರೆ ಪಂದ್ಯ ರೋಮಾಂಚಕಾರಿಯಾಗುತ್ತಿತ್ತು" ಎಂದಿದ್ದಾರೆ.

ತಂಡವು ಟೂರ್ನಮೆಂಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಎಲ್ಲಾ ಮೂರು ವಿಭಾಗಗಳು ಒಟ್ಟಾಗಿ ಕಾರ್ಯನಿರ್ವಹಿಸದಿರುವುದೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವೊಂದು ಸಲ ಬೌಲರುಗಳು ಉತ್ತಮ ಪ್ರದರ್ಶನ ನೀಡುತ್ತಾರೆ. ಆಗ ಫೀಲ್ಡರುಗಳು ಅಥವಾ ದಾಂಡಿಗರು ವಿಫಲರಾಗುತ್ತಾರೆ. ಇವರು ಸಫಲರಾದಾಗ ಅವರು ವಿಫಲರಾಗುತ್ತಾರೆ. ಇದೇ ನಮಗಾಗಿರುವ ತೊಂದರೆ ಎಂದು ಮೆಕಲಮ್ ವಿಶ್ಲೇಷಿಸಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments