Webdunia - Bharat's app for daily news and videos

Install App

ಮುಂಬೈ ಇಂಡಿಯನ್ಸ್‌ನಲ್ಲಿ ಬಹುನಾಯಕತ್ವ ಪ್ರಯೋಗಗಳಿಲ್ಲ: ಸಚಿನ್

Webdunia
ಬುಧವಾರ, 15 ಏಪ್ರಿಲ್ 2009 (11:57 IST)
ಜಾನ್ ಬುಚನಾನ್‌ರ ಬಹುನಾಯಕತ್ವ ವಿವಾದದಿಂದ ದೂರವೇ ಉಳಿದುಕೊಂಡಿರುವ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಂತಹ ಯಾವುದೇ ಪ್ರಯೋಗಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವರೇನು ಮಾಡಲು ಬಯಸುತ್ತಿದ್ದಾರೋ ಮಾಡಲಿ ಬಿಡಿ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನುದ್ದೇಶಿಸಿ ಮಾತನಾಡಿದ ಸಚಿನ್, ಮುಂಬೈ ಇಂಡಿಯನ್ಸ್ ತಂಡದಲ್ಲಿ ನಮಗೇನು ಬೇಕೋ ಅದನ್ನು ಮಾಡುತ್ತೇವೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಬಹುನಾಯಕತ್ವ ಪ್ರಯೋಗವನ್ನು ಮಾಡಲು ಹೊರಟಿರುವ ಜಾನ್ ಬುಚನಾನ್ ಬಗ್ಗೆ ಈಗಾಗಲೇ ಹಲವು ಕ್ರಿಕೆಟ್ ಮಾಜಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಆ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿಯವರಿಗೇ ಇದು ಅಸಮಾಧಾನ ತಂದಿತ್ತು. ನಂತರದ ದಿನಗಳಲ್ಲಿ ಸುನಿಲ್ ಗವಾಸ್ಕರ್ ಮತ್ತು ವೆಂಗಸರ್ಕಾರ್ ಕೂಡ ಬುಚನಾನ್ ನೀತಿಗಳನ್ನು ಟೀಕಿಸಿದ್ದರು. ಇದು ಕ್ರೀಡೆಯ ಅಣಕ, ಅಪಹಾಸ್ಯ ಮಾಡಲಾಗುತ್ತಿದೆ ಎಂದೂ ಹೀಗಳೆಯಲಾಗಿತ್ತು.

ಸಾಕಷ್ಟು ಟೀಕೆಗಳನ್ನೆದುರಿಸಿದ ಬುಚನಾನ್ ನಂತರ ಮತ್ತಷ್ಟು ವಿವರಣೆ ನೀಡುತ್ತಾ, "ಬಹುನಾಯಕತ್ವ ಎಂದರೆ ಹಲವು ರಣನೀತಿಗಳನ್ನು ಹೊಂದಿರುವುದು" ಎಂದಿದ್ದರು. ಈ ಬಗ್ಗೆ ಮಾತನಾಡಿದ ಸಚಿನ್, ಹಿರಿಯ ಆಟಗಾರರು ಯಾವತ್ತೂ ಸಲಹೆಗಳನ್ನು ನೀಡುತ್ತಿರುತ್ತಾರೆ ಎಂದು ಹೊಸತೇನಿಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

" ಇದು ಬಹುನಾಯಕತ್ವದ ರೀತಿಯಲ್ಲ. ಆದರೆ ಹಲವು ಕೌಶಲ್ಯಗಳನ್ನು ಹೊಂದಿರುವುದಾಗಿರುತ್ತದೆ. ತಂಡಕ್ಕೆ ಒಬ್ಬ ನಾಯಕನಿರುತ್ತಾನೆ ಎಂಬ ಮಾತ್ರಕ್ಕೆ ಎಲ್ಲಾ ಕೆಲಸಗಳನ್ನು ಏಕಾಂಗಿಯಾಗಿ ಮಾಡಬೇಕು ಎಂದರ್ಥವಲ್ಲ. ಇತರ ಆಟಗಾರರು ಕೂಡ ಆತನಿಗೆ ಸಲಹೆಗಳನ್ನು ನೀಡಬೇಕು" ಎಂದು ಜೇಪಿ ಸಿಮೆಂಟ್ಸ್ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾದ ಸಚಿನ್ ತಿಳಿಸಿದರು.

" ಇಂತಹ ಹಲವು ಅವಕಾಶಗಳನ್ನು ಹೊಂದಿರುವುದು ನಾಯಕನಾದವನಿಗೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ ನಾವು ಮಾಡುತ್ತಿರುವುದೂ ಇದನ್ನೇ" ಎಂದ ಅವರು ಬುಚನಾನ್ ಬಗ್ಗೆ ಯಾವುದೇ ನೇರ ಹೇಳಿಕೆಗಳನ್ನು ನೀಡಲು ಮುಂದಾಗಲಿಲ್ಲ.

" ಇದು ಕೇವಲ ಅಭಿಪ್ರಾಯ ಮಾತ್ರ. ಒಂದು ನಾಣ್ಯದಲ್ಲಿ ಯಾವತ್ತೂ ಎರಡು ಮುಖಗಳಿರುತ್ತವೆ. ನೀವು ಎರಡನ್ನೂ ನೋಡಬಹುದು. ಇದು ಉತ್ತಮ" ಎಂದಷ್ಟೇ ಹೇಳಿ ವಿವಾದಗಳಿಂದ ಅವರು ದೂರವೇ ಉಳಿದಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments