Webdunia - Bharat's app for daily news and videos

Install App

ದ್ರಾವಿಡ್‌ಗೆ ಬೆಂಬಲ; ಈಗ ಗಂಗೂಲಿ ಸರದಿ

Webdunia
ಶನಿವಾರ, 13 ಡಿಸೆಂಬರ್ 2008 (18:43 IST)
ರಾಹುಲ್ ದ್ರಾವಿಡ್ ಫಾರ್ಮ್‌ ಕಳೆದುಕೊಂಡಿದ್ದಾರೆ ಎಂಬುದು ಜನಜನಿತವಾಗಿರುವಾಗ ತನ್ನ ಕರ್ನಾಟಕದ ಜತೆಗಾರನ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸೌರವ್ ಗಂಗೂಲಿ ಬೆಂಬಲ ವ್ಯಕ್ತಪಡಿಸುತ್ತಾ, 'ಗೋಡೆ' ದುರ್ಬಲವಾಗಿದೆ ಎಂಬ ವಾದಗಳನ್ನು ತಳ್ಳಿ ಹಾಕಿದ್ದಾರೆ.

" ದ್ರಾವಿಡ್ ಒಬ್ಬ ಶ್ರೇಷ್ಠ ಕ್ರಿಕೆಟಿಗನಾಗಿದ್ದು, ಪ್ರಬುದ್ಧ ಆಟಗಾರ. ಅವರ ಅವಧಿ ಮುಗಿದಿದೆ ಎಂದು ಹೇಳುವುದು ತಪ್ಪಾಗುತ್ತದೆ" ಎಂದು ಈಡನ್ ಗಾರ್ಡನ್‌ನಲ್ಲಿ ಅಭ್ಯಾಸ ಮುಗಿಸಿದ ನಂತರ ಗಂಗೂಲಿ ಪತ್ರಕರ್ತರ ಜತೆ ಮಾತನಾಡುತ್ತಾ ಹೇಳಿದರು.

ವಿದೇಶಗಳಲ್ಲಿ ಹಲವು ಪಂದ್ಯಗಳನ್ನು ನಾಯಕನಾಗಿ ಗೆಲ್ಲಿಸಿದ್ದ ದ್ರಾವಿಡ್, ಟೆಸ್ಟ್‌ನಲ್ಲಿ 10,366 ರನ್ನುಗಳನ್ನು ದಾಖಲಿಸಿದ್ದಾರೆ. ಇತ್ತೀಚಿನ ಎರಡು ವರ್ಷಗಳ 48 ಇನ್ನಿಂಗ್ಸ್‌ಗಳಲ್ಲಿ ಅವರು ಎರಡು ಶತಕ, 9 ಅರ್ಧ ಶತಕ ದಾಖಲಿಸಿದ್ದಾರೆ.

ಅವರ ಇತ್ತೀಚಿನ ಐದು ಇನ್ನಿಂಗ್ಸ್‌ಗಳು 11, 11, 0, 3 ಮತ್ತು 3ರಲ್ಲಿ ಅಂತ್ಯಗೊಂಡಿತ್ತು. ಆದರೆ ಈ ಬಗ್ಗೆ ದ್ರಾವಿಡ್‌ಗೆ ಬೆಂಬಲವಾಗಿ ನಿಲ್ಲುತ್ತಾ ಗಂಗೂಲಿ, "ಕೇವಲ ಕೆಲವು ವೈಫಲ್ಯಗಳಿಂದ ಅವರ ಸಾಮರ್ಥ್ಯವನ್ನು ಅಳೆಯಲಾಗದು. ಅವರು ತಾತ್ಕಾಲಿಕವಾಗಿ ತನ್ನ ಆಟದಿಂದ ದೂರವಿದ್ದಾರೆ ಅಷ್ಟೇ. ಆದರೆ ಈ ವಿಚಾರಗಳನ್ನೆಲ್ಲಾ ತಣ್ಣಗೆ ಮಾಡಲು ಅವರು ದೊಡ್ಡ ಮಟ್ಟದ ಯಶಸ್ಸಿನೊಂದಿಗೆ ಬರಲಿದ್ದಾರೆ ಎಂಬ ಭರವಸೆ ನನಗಿದೆ" ಎಂಬುದು ಅವರ ಅಭಿಮತ.

ಪಶ್ಚಿಮ ಬಂಗಾಲದ ಪರವಾಗಿ ರಣಜಿ ಸೆಮಿಫೈನಲ್‌ನಲ್ಲಿ ಆಡಿ ತಂಡವನ್ನು ಸೂಪರ್‌ಲೀಗ್‌ನತ್ತ ಏರಿಸುವ ಬಗ್ಗೆ ಗಮನ ಹರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಇದೀಗ ಅಭ್ಯಾಸ ನಡೆಸುತ್ತಾ ತನ್ನ ಫಾರ್ಮನ್ನು ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments