Webdunia - Bharat's app for daily news and videos

Install App

ಮುರಳಿ ಚೆಂಡನ್ನು ಎಸೆಯುತ್ತಿದ್ದರು: ಗಿಲ್‌ಕ್ರಿಸ್ಟ್

Webdunia
ಬುಧವಾರ, 5 ನವೆಂಬರ್ 2008 (13:06 IST)
ಆಸ್ಟ್ರೇಲಿಯಾದ ಮಾಜಿ ಉಪಕಪ್ತಾನ ಆಡಮ್ ಗಿಲ್‌ಕ್ರಿಸ್ಟ್ ತನ್ನ ಮತ್ತಷ್ಟು ಮುಂದುವರಿದ ದಾಳಿಯಲ್ಲಿ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರನ್ನು 'ಚಕ್ಕರ ್' ಹಾಗೂ 90ರ ದಶಕದಲ್ಲಿ ಕ್ರಿಕೆಟ್ ಜಗತ್ತಿನಲ್ಲೂ ಕರಿಯರು ಮತ್ತು ಬಿಳಿಯರು ಎಂದು ಬೇಧ ಹುಟ್ಟು ಹಾಕಿದ್ದು ಶ್ರೀಲಂಕಾ ಎಂದು ಅವರು ದೂರಿದ್ದಾರೆ.

ತನ್ನ ಆತ್ಮಚರಿತ್ರೆ 'ಟ್ರೂ ಕಲರ್ಸ್'ನಲ್ಲಿ ಗಿಲ್‌ಕ್ರಿಸ್ಟ್, ಮುರಳೀಧರನ್ ಚೆಂಡನ್ನು ಎಸೆಯುತ್ತಾರೆ ಎಂಬುದು ನಿಸ್ಸಂಶಯ ಮತ್ತು ಇದು ವಿವಾದವಾದಾಗ ಶ್ರೀಲಂಕಾ ಪ್ರತಿನಿಧಿಗಳು ಐಸಿಸಿಯ ಪ್ರಶ್ನೆಗಳಿಗೆ ವಿವರಣೆ ನೀಡಿ, ಇದೊಂದು 'ವರ್ಣಬೇಧ ನೀತಿ'ಯ ಭಾಗ ಎಂದು ಆರೋಪಿಸಿದ ನಂತರ ಐಸಿಸಿ ಆತನ ರಕ್ಷಣೆಗೆ ನಿಂತಿತ್ತು ಎಂದು ಅವರು ಬರೆದಿದ್ದಾರೆ.

" ಅವರು ಬಾಲನ್ನು ಎಸೆಯುತ್ತಾರಾ? ನಾನು ಕೆಲವು ಕ್ಷಣ ಯೋಚಿಸಿ ಎಚ್ಚರಿಕೆಯಿಂದ ಹೇಳಿದೆ, 'ನನ್ನ ಪ್ರಕಾರ ಹೌದು' ಎಂದೆ" ಎಂದು ಪ್ರಶ್ನೆಯೊಂದು ಎದುರಾದುದನ್ನು ಪುಸ್ತಕದಲ್ಲಿ ಗಿಲ್ಲಿ ನಮೂದಿಸಿದ್ದಾರೆ.

" ನೀವು ಆಟದ ನಿಯಮಗಳನ್ನು ಓದಿದರೆ ಮುರಳಿ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಕೆಲವರು ಸೇರಿದಂತೆ ಆ ಬಗ್ಗೆ ಈ ವಿಚಾರದಲ್ಲಿ ಸಂಶಯವೇ ಉಳಿದಿರುವುದಿಲ್ಲ" ಎಂದು ಅವರು ಬರೆದಿದ್ದು, "ಮುರಳಿ ಮತ್ತು ಆಟದ ಬಗ್ಗೆ ಸ್ಪಷ್ಟಪಡಿಸಲು ಇದು ನನಗೊಂದು ಅವಕಾಶ. ನಾನು ನನ್ನ ಹೇಳಿಕೆಗಳಿಂದ ವಾಪಾಸು ಬರಲಾರೆ. ಖಂಡಿತಾ ಇದು ವೈಯಕ್ತಿಕ ಆರೋಪಗಳು ಎಂದು ನನಗನ್ನಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

" ಅವರು ಟೆಸ್ಟ್ ಕ್ರಿಕೆಟ್ ಆಡಲು ಆರಂಭಿಸಿದ 1990ರ ಮಧ್ಯದಿಂದ ನನ್ನ ಪ್ರಕಾರ ಅವರ ಕೈ ನಿಯಮಕ್ಕಿಂತ ಹೆಚ್ಚು ನೇರವಾಗಿರುತ್ತದೆ. ಆ ಬಗ್ಗೆ ನನಗೆ ಸಂಶಯವೇ ಇಲ್ಲ. ಸಂಶಯಾಸ್ಪದ ಬೌಲಿಂಗ್ ವಿಚಾರವನ್ನು ಪ್ರಸ್ತಾಪ ಮಾಡಿದಾಗ ಶ್ರೀಲಂಕಾ ಅದನ್ನು ವರ್ಣಬೇಧ ನೀತಿಯನ್ನಾಗಿ ಪರಿವರ್ತಿಸಿತು. ಆದರೆ ನಿಜವಾಗಿಯೂ ಅವರ ಕೈ ನೇರವಾಗಿರುತ್ತದೆಯೇ? - ಎಂದಿದ್ದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಅರ್ಜುನ್ ರಣತುಂಗಾ ಸೇರಿದಂತೆ ಎಲ್ಲರೂ ತಿರುಗಿ ಬಿದ್ದರು. ಹೊರನಡೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕ್ರೀಡೆಯಲ್ಲಿ 'ಬಿಳಿಯ' ಮತ್ತು 'ಕರಿಯ'ರ ರಾಷ್ಟ್ರಗಳು ಎಂಬ ಬೇಧ ಹುಟ್ಟಿ ಹಾಕಿದರು. ಈ ವರ್ಣಬೇಧ ಹುಟ್ಟಲು ಕಾರಣ ಮುರಳಿಯವರ ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದ್ದಾಗಿತ್ತು" ಎಂದು ಗಿಲ್‌ಕ್ರಿಸ್ಟ್ ತನ್ನ ಆತ್ಮಚರಿತ್ರೆಯಲ್ಲಿ ವಿವರವಾಗಿ ಬರೆದಿದ್ದಾರೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments