Webdunia - Bharat's app for daily news and videos

Install App

ಬ್ಯಾಟಿಂಗ್ ಹುಳುಕು ಎತ್ತಿ ತೋರಿಸಿದ ಏಕದಿನ ಸರಣಿ

Webdunia
ಶುಕ್ರವಾರ, 17 ಜೂನ್ 2011 (19:03 IST)
PTI
ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿ ಗೆದ್ದಾಗಿದೆ. ಆದರೆ ಭಾರತ ತಂಡದ ಶಸ್ತ್ರಾಗಾರದೊಳಗಿರುವ ಹುಳುಕುಗಳು, ವಿಶೇಷವಾಗಿ ವೇಗ ಮತ್ತು ಬೌನ್ಸ್ ಎಸೆತಗಳನ್ನು ಎದುರಿಸುವಲ್ಲಿ ಭಾರತೀಯ ದಾಂಡಿಗರ ಅಸಮರ್ಥತೆ, ಅಂತಿಮ ಪಂದ್ಯಗಳಲ್ಲಿ ಬಯಲಿಗೆ ಬಂದಿವೆ.

ಆತಿಥೇಯರೆದುರಿನ ಏಕದಿನ ಸರಣಿ 3-2 ಅಂತರದಿಂದ ಗೆದ್ದುಕೊಳ್ಳಲಾಗಿದೆ. ಆದರೆ, ಒಬ್ಬ ಆರಂಭಿಕ ಆಟಗಾರ ಮತ್ತು ಇಬ್ಬರು ಮಧ್ಯಮ ಕ್ರಮಾಂಕದ ದಾಂಡಿಗರು ಹೂಡಿಕೆಗೆ ತಕ್ಕ ಪ್ರತಿಫಲ ನೀಡಿಲ್ಲ ಎಂಬುದನ್ನು ತಂಡದ ಆಯ್ಕೆದಾರರು ಕಂಡುಕೊಂಡಿದ್ದಾರೆ.

ವಾಸ್ತವವಾಗಿ ಶಿಖರ್ ಧವನ್ ಮತ್ತು ಯೂಸುಫ್ ಪಠಾಣ್ ಅವರು ಭಾರತಕ್ಕೆ ಮರಳುವ ಹಾದಿಯಲ್ಲಿ ತಾವೆಲ್ಲಿ ಎಡವಿದ್ದೇವೆ ಎಂದು ಯೋಚನೆ ಮಾಡಿಕೊಳ್ಳಲು ಸಾಕಷ್ಟಿದೆ. ಧವನ್‌ಗೆ ಇನ್ನೂ 25 ವರ್ಷ. ದೇಶೀ ಕ್ರಿಕೆಟಿನಲ್ಲಿ ಸಾವಿರಾರು ರನ್ ಕಲೆ ಹಾಕಿದ್ದಾರೆ. ಆದರೆ ಟೆಕ್ನಿಕ್ ಮತ್ತು ಹೊಡೆತದ ಆಯ್ಕೆಯಲ್ಲಿ ಅವರು ಎಡವಿರುವುದು ದೃಢಪಟ್ಟಿತು. ಐದು ಪಂದ್ಯಗಳಲ್ಲಿ ಒಂದು ಅರ್ಧ ಶತಕ ಬಿಟ್ಟರೆ, ಉಳಿದ ನಾಲ್ಕು ಪಂದ್ಯಗಳಿಂದ ಅವರು ಸಂಪಾದಿಸಿದ್ದು 23 ರನ್ ಮಾತ್ರ. ಹೀಗಾಗಿ ಮುಂದಿನ ಸರಣಿಯಲ್ಲಿ ಅವರ ಸ್ಥಾನದ ಬಗ್ಗೆ ಗ್ಯಾರಂಟಿ ಇಲ್ಲ.

ಟೆಸ್ಟ್ ಸರಣಿಗೂ ಸ್ಥಾನ ಪಡೆದಿರುವ ಎಸ್.ಬದರಿನಾಥ್ ಆರಂಭದಿಂದಲೇ ಭರವಸೆ ಹುಟ್ಟಿಸಿದವರು. ಟ್ವೆಂಟಿ-20 ಪಂದ್ಯದಲ್ಲಿ ಗೆಲ್ಲಲು ಕಾರಣವಾಗಿದ್ದ ಅವರ ಅಜೇಯ 43 ರನ್ ಮೂಲಕ ಭರವಸೆ ಮೂಡಿಸಿದ್ದರೂ, ನಂತರ ಏಕದಿನ ಸರಣಿಯಲ್ಲಿ ಕೇವಲ 40 ರನ್ ಮಾತ್ರ ಕಲೆ ಹಾಕಿದ್ದು ಎಲ್ಲರ ನಿರಾಶೆಗೆ ಕಾರಣರಾಗಿದ್ದಾರೆ.

ಕ್ರೀಸಿನಲ್ಲಿ ನೆಲೆ ನಿಲ್ಲಲು ಬದರಿನಾಥ್ ಯಾವತ್ತೂ ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಇನ್ನಿಂಗ್ಸ್‌ನ ಉತ್ತರಾರ್ಧದಲ್ಲಿ ಅವರು ತೋರುವ ಚಾಕಚಕ್ಯತೆಗಳು ನಮ್ಮ ಭಾರತದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಆಟವನ್ನು ನೆನಪಿಸುತ್ತದೆ. ಆದರೆ, ನಾಲ್ಕನೇ ಪಂದ್ಯದಲ್ಲಿ ಆಂಡ್ರೆ ರಸೆಲ್ ಅವರ ಶಾರ್ಟ್ ಪಿಚ್ ಎಸೆತಗಳಿಗೆ ಅವರು ಧೃತಿಗೆಟ್ಟಿದ್ದು ನೋಡಿದರೆ ಅವರನ್ನು ಹೊಗಳಿದವರ ಬಾಯಿ ಕಟ್ಟುವುದು ಸಹಜ.

ಯೂಸುಫ್ ಪಠಾಣ್ ಕೂಡ ತುಂಬಾ ಬಸವಳಿದಿದ್ದಾರೆ. ನಾಲ್ಕು ಇನ್ನಿಂಗ್ಸ್‌ಗಳಿಂದ ಮಾಡಿದ್ದು 42 ರನ್ನುಗಳು ಮಾತ್ರ. ಹೀಗಾಗಿ ಅವರು ತಮ್ಮ ಬ್ಯಾಟಿಂಗ್ ಹೇಗೆ ಸುಧಾರಿಸುತ್ತಾರೆ ಎಂಬುದರ ಮೇಲೆ ಪ್ರಶ್ನಾರ್ಥಕ ಚಿಹ್ನೆಯೊಂದು ಬಿದ್ದಿದೆ. ಅಭಿಮಾನಿಗಳಿಗೆ ಇನ್ನೂ ಅವರ ಸಿಕ್ಸರ್‌ಗಳು ನೆನಪಿನಲ್ಲಿದ್ದರೂ, ಒಳ್ಳೆಯ ಇನ್ನಿಂಗ್ಸ್ ಕಟ್ಟುವ ನಿಟ್ಟಿನಲ್ಲಿ ಅವರು ಚೆಂಡನ್ನು ಬೌಂಡರಿ ಗೆರೆ ದಾಟಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಹೇಳಬಹುದು. ಆಫ್ ಸ್ಪಿನ್ ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್‌‍ಗಳು ಬಹುಶಃ ಅವರ ವೃತ್ತಿ ಜೀವನಕ್ಕೆ ಅಷ್ಟೊಂದು ನೆರವಿಗೆ ಬರಲಾರದು.

ಭಾರತದ ವಿಶ್ವಕಪ್ ವಿಜಯದ ಹೀರೋ, ಹಾಲಿ ನಾಯಕ ಸುರೇಶ್ ರೈನಾ ಅವರು ಆರಂಭದಲ್ಲಿ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರೂ, ಕೊನೆಯ ಮೂರು ಪಂದ್ಯಗಳಲ್ಲಿ ಅವರ ರನ್ನುಗಳು 3, 10 ಮತ್ತು 0. ಈ ಯುವ ದಾಂಡಿಗ ಅನವಶ್ಯವಾಗಿ ತರಾತುರಿ ತೋರುತ್ತಾರೆ ಎಂಬುದರ ನಿದರ್ಶನವಾಗಿಯೂ ಇದು ಸಾಬೀತಾಗಿದೆ. ತಮ್ಮ ಇನ್ನಿಂಗ್ಸ್ ಆರಂಭದಲ್ಲಿಯೇ ಅವರು ಮುಂದೆ ಬಂದು ದೊಡ್ಡ ಹೊಡೆತಗಳಿಗೆ ಮುಂದಾಗುವುದು ಬಹುಶಃ ಐಪಿಎಲ್ ಪಂದ್ಯಗಳ ನೆನಪಿನಿಂದಲೋ ಏನೋ. ಆದರೂ ಟೆಸ್ಟ್‌ಗೆ ಇವರ ಸ್ಥಾನ ಭದ್ರವಾಗಿದೆ.

ಆದರೆ, ಯುವ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅವರು ಭಾರತದ ಅದ್ಭುತ ಪ್ರತಿಭೆಗಳು ಎಂಬುದು ಈ ಸರಣಿಯಲ್ಲಿ ಮತ್ತೆ ಸಾಬೀತಾಗಿದೆ. ಇಬ್ಬರೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ಏಕದಿನ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡು ಭಾರತಕ್ಕೆ ಮರಳುತ್ತಿದ್ದು, ಟೆಸ್ಟ್‌ನಲ್ಲಿ ಸ್ಥಾನಕ್ಕಾಗಿ ಸ್ವಲ್ಪ ಕಾಲ ಕಾಯಬೇಕಾಗಬಹುದು.

ಏಕದಿನ ಸರಣಿಯಲ್ಲಿ ಅತ್ಯುತ್ತಮ ಯಶೋಗಾಥೆ ಬರೆದವರೆಂದರೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ. ಅವರ ಪ್ರತಿಯೊಂದು ಎಸೆತವನ್ನು ವಿಂಡೀಸ್ ದಾಂಡಿಗಳು ಶಂಕೆ ಆತಂಕಗಳಿಂದಲೇ ಎದುರಿಸುತ್ತಿದ್ದರು. ವಿಕೆಟ್ ಅಗತ್ಯ ಬಿದ್ದಾಗಲೆಲ್ಲಾ ಭಾರತ ತಂಡವು ಅಮಿತ್ ಮಿಶ್ರಾರತ್ತ ಮುಖ ಮಾಡುತ್ತಿತ್ತು.

ಇದೀಗ ಟೆಸ್ಟ್ ಸರಣಿಯ ಸರದಿ. ಜೂ.20ರಿಂದ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಯುವ ಪಡೆಯ ಆಟದ ಸ್ಥಿರತೆ ಸಾಬೀತಾಗಲಿದೆ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments