Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿಶ್ವಕಪ್ ಗೆದ್ರೆ ನಗ್ನಳಾಗಲಿರುವ ಪೂನಂ!

ಟೀಂ ಇಂಡಿಯಾ ವಿಶ್ವಕಪ್ ಗೆದ್ರೆ ನಗ್ನಳಾಗಲಿರುವ ಪೂನಂ!
ಈ ಮಾಡೆಲ್‌ಗಳು ಪ್ರಸಿದ್ಧಿಗಾಗಿ ಏನು ಮಾಡಲೂ ಸಿದ್ಧ. ಬೆತ್ತಲಾಗಲು ನೆವನ ಹುಡುಕುತ್ತಿದ್ದಾರೋ ಎಂಬಷ್ಟರ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಆರೋಪಗಳಿವೆ. ಅಂಥವರ ಸಾಲಿಗೆ ಹೊಸ ಸೇರ್ಪಡೆ, ಮುಂಬೈಯ ಮಾಡೆಲ್ ಪೂನಮ್ ಪಾಂಡೆ. ಭಾರತೀಯ ಕ್ರಿಕೆಟ್ ತಂಡವೇನಾದರೂ ವಿಶ್ವಕಪ್ ಗೆದ್ದರೆ, ತನ್ನೆಲ್ಲಾ ಬಟ್ಟೆಗಳನ್ನು ಬಿಚ್ಚುವೆ ಎಂದಿದ್ದಾಳೆ ಈಕೆ.
PR

(ಮುಂದಿನ ಪುಟ ನೋಡಿ)


webdunia
PR

ಹೌದು. ಈಕೆ ಇಂಟರ್ನೆಟ್‌ನಲ್ಲಿ ಅತೀ ಹೆಚ್ಚು ಚಿತ್ರ ಡೌನ್‌ಲೋಡ್ ಆಗಿರುವ ಮಾಡೆಲ್. ಈಕೆ ಅನುಸರಿಸುತ್ತಿರುವುದು ಅರ್ಜೆಂಟೀನಾ ಮತ್ತು ಪೆರಾಗ್ವೆಯ ಮಾಡೆಲ್‌ಗಳನ್ನು. ಯಾಕೆಂದರೆ, ಅವರೆಲ್ಲರೂ ಹೇಳುತ್ತಿದ್ದುದು, ತಮ್ಮ ತಂಡವು ಫುಟ್‌ಬಾಲ್ ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇವೆ ಅಂತಲೇ! ತಾನು ಕ್ರಿಕೆಟ್‌ನ ಫ್ಯಾನ್ ಮತ್ತು ಭಾರತೀಯ ತಂಡದ ಕಟ್ಟಾ ಅಭಿಮಾನಿ ಎನ್ನುತ್ತಾರೆ ಪೂನಮ್. (ಮುಂದಿನ ಪುಟ ನೋಡಿ)

webdunia
PR

ಅದು ಸರಿ, ಬೆತ್ತಲಾದರೆ ಭಾರತೀಯ ತಂಡಕ್ಕೇನು ಲಾಭ? ಇಲ್ಲಾ, ಆಕೆ ಈ ರೀತಿಯೆಲ್ಲಾ ಹೇಳೋದು ಕೇವಲ ಪ್ರಚಾರಕ್ಕೋಸ್ಕರವೇ? ಈ ಪ್ರಶ್ನೆ ಕೇಳಿದರೆ ಆಕೆ ನೀಡುವ ಉತ್ತರ, "ಖಂಡಿತಾ ಅಲ್ಲ. ನನ್ನ ಫೋಟೋ ಎಲ್ಲಕ್ಕಿಂತ ಹೆಚ್ಚು ಡೌನ್‌ಲೋಡ್ ಆಗಿದೆ. ಹೀಗಾಗಿ ನನಗೇನೂ ಪ್ರಚಾರದ ಅಗತ್ಯವೇ ಇಲ್ಲ. ನಾನು ಈ ರೀತಿ ಹೇಳಿದ್ದು ಆಟಗಾರರನ್ನು ಹುರಿದುಂಬಿಸುವುದಕ್ಕಾಗಿ ಮಾತ್ರ"! (ಮುಂದಿನ ಪುಟ ನೋಡಿ)

webdunia
PR

ಇದೀಗ ತನ್ನ 'ಶಪಥ' ಪೂರೈಸಲು ಪೂನಮ್ ಭಾರತೀಯ ತಂಡವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರಂತೆ. ಯಾಕೆಂದರೆ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲೇ ಆಕೆ ತನ್ನ 'ಬಟಾ ಬಯಲು' ಕಾರ್ಯಾಚರಣೆಯನ್ನು ಮಾಡಲು ಅವಕಾಶ ದೊರೆಯಬಹುದೆಂಬ ಪ್ರಯತ್ನವಿದು. ಕಾನೂನು ಮತ್ತು ಬಿಸಿಸಿಐ ಅವಕಾಶವೇನಾದರೂ ನೀಡಿದರೆ, ಸ್ಟೇಡಿಯಂನಲ್ಲೇ ಬೆತ್ತಲಾಗ್ತೀನಿ ಅಂತ 'ಹೆದರಿಸಿದ್ದಾಳೆ' ಈಕೆ! ಏನಂತೀರಿ?

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada